ಬಸವಣ್ಣ ಹಿಂದೂ ಅಲ್ಲ ಲಿಂಗಾಯತರು, ‘ವಚನ ದರ್ಶನ’ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಮೂರುಸಾವಿರ ಮಠದ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

‘ವಚನ ದರ್ಶನ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲವೆಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.

ಆಗಸ್ಟ್ ೭ರಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಲು ಶ್ರೀಗಳನ್ನು ಆಹ್ವಾನಿಸಲಾಗಿತ್ತು.

“‘ವಚನ ದರ್ಶನ’ ಅಂತ ಪುಸ್ತಕದ ಮೇಲೆ ಬರೆದ್ದಿದ್ದಕ್ಕೆ ನಾನು ತಕ್ಷಣ ಒಪ್ಪಿಕೊಂಡಿದ್ದೆ. ನಂತರ ಅದು ದೋ಼ಷಪೂರಿತ ಪುಸ್ತಕ ಎಂದು ಗೊತ್ತಾಗಿದೆ, ಆದ್ದರಿಂದ ನಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ” ಎಂದು ‘ಬಸವ ಭಕ್ತರ ಅನುಯಾಯಿಗಳ ಒಕ್ಕೊಟ’ದ ಪರವಾಗಿ ಶ್ರೀಗಳನ್ನು ಭೇಟಿ ಮಾಡಿದ ತಂಡಕ್ಕೆ ತಿಳಿಸಿದರು.

“ಶರಣರು ವೇದಗಳನ್ನು, ಆಗಮಗಳನ್ನು ಒಪ್ಪಿಕೊಂಡಿಲ್ಲ, ಹಾಗೂ ಅವುಗಳನ್ನು ವಿರೋಧಿಸಿ ಸಾಕಷ್ಟು ವಚನಗಳನ್ನು ಬರೆದಿದ್ದಾರೆ,” ಎಂದು ಹೇಳಿದರು.

ಇನ್ನೊಂದು ‘ವಚನ ದರ್ಶನ’ ಪುಸ್ತಕದ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀಗಳು ಬಸವಣ್ಣನವರನ್ನು ಹಿಂದೆ, ಇಂದು, ಮುಂದೆಯೂ ಹಿಂದೂ ಎಂದು ಕರೆದು ವಿವಾದವೆಬ್ಬಿಸಿದ್ದರು.

ಬಸವಣ್ಣನವರು ಲಿಂಗಾಯಿತರೋ ಅಥವಾ ಹಿಂದುಗಳೊ ಎಂದು ಸ್ವಾಮಿಜಿಯವರನ್ನು ಒಕ್ಕೂಟದ ತಂಡ ಕೇಳಿದಾಗ ಅವರು ಬಸವಣ್ಣನವರು ಹಿಂದೂ ಅಲ್ಲ ಲಿಂಗಾಯತರು ಎಂದು ಹೇಳಿದರು.

ವಚನ ದರ್ಶನ ಪುಸ್ತಕದ ವಿವಾದಕ್ಕೆ ಪ್ರತಿಯಾಗಿ ಲಿಂಗಾಯತರೆಲ್ಲಾ ಸಂಘಟಿತರಾಗಿ ನಿಜ ವಿಚಾರಗಳನ್ನು ಜನರಿಗೆ ತಲುಪಿಸಬೇಕೆಂದು ಶ್ರೀಗಳು ಹೇಳಿದರು.

ವಚನ ದರ್ಶನ ಪುಸ್ತಕದ ವಿವಾದಕ್ಕೆ ಪ್ರತಿಯಾಗಿ ಲಿಂಗಾಯತರೆಲ್ಲಾ ಸಂಘಟಿತರಾಗಿ ನಿಜ ವಿಚಾರಗಳನ್ನು ಜನರಿಗೆ ತಲುಪಿಸಬೇಕೆಂದು ಹೇಳಿದರು. ಜನ ಒಳಪಂಗಡದ ಹೆಸರುಗಳನ್ನು ಹೇಳುವುದನ್ನು ಬಿಟ್ಟು, ಕೇವಲ ಲಿಂಗಾಯತ ಎಂದು ಹೇಳುವುದನ್ನು ಶುರು ಮಾಡಬೇಕೆಂದು ಎಂದು ಸಲಹೆ ನೀಡಿದರು.

“ನಮ್ಮದು ಯಾವುದೇ ಒಂದು ಉಪಪಂಗಡಕ್ಕೆ ಸೇರಿದ ಮಠ ಅಲ್ಲ. ಇದು ಒಂದು ಲಿಂಗಾಯತ ಮಠ ಮಾತ್ರ,” ಎಂದು ಹೇಳಿದರು.

ಒಕ್ಕೊಟದ ತಂಡ ವಚನ ದರ್ಶನ ಪುಸ್ತಕದ ಬೆಂಬಲಕ್ಕೆ ನಿಂತಿರುವ ಮಠಾಧಿಪತಿಗಳಿಗೆ ಕೇಳಿರುವ ೧೦ ಪ್ರಶ್ನೆಗಳ ಒಂದು ಪ್ರತಿಯನ್ನು ಶ್ರೀಗಳಿಗೆ ಕೊಟ್ಟಿತು. ಅದನ್ನು ಸ್ವೀಕರಿಸಿ ಶ್ರೀಗಳು ಎಲ್ಲ ಪ್ರಶ್ನಗಳು ಸರಿಯಾಗಿವೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕುಮಾರಣ್ಣ ಪಾಟೀಲ, ಬಸವರಾಜ್ ಹೊಲ್ಲೋಳಿ, ಚಿಂತಾಮಣಿ ಸಿಂದಗಿ, ಗುರುರಾಜ್ ಅವರಾದಿ‌ ಮುಂತಾದವರು ಒಕ್ಕೊಟದ ಪರವಾಗಿ ಶ್ರೀಗಳನ್ನು ಭೇಟಿ ಮಾಡಿದರು.

೧೦ ಪ್ರಶ್ನೆಗಳು

ವಚನ ದರ್ಶನ ಪುಸ್ತಕದ ಕಾರ್ಯಕ್ರಮಗಳಿಗೆ ಹೋಗುತ್ತಿರುವ ಲಿಂಗಾಯತ ಸ್ವಾಮೀಜಿಗಳಿಗೆ ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಕೇಳಿರುವ ೧೦ ಪ್ರಶ್ನೆಗಳು.

೧) ನೀವು ಬಸವ ಅನುಯಾಯಿಗಳೆ? ಬಸವ ತತ್ವದ ಬಗ್ಗೆ ನಿಮಗೆ ನಂಬಿಕೆಯಿದೆ ಯೇ?

೨) ೧೨ನೇ ಶತಮಾನದಲ್ಲಿ ಶರಣ ಚಳುವಳಿ ದುರಂತ ಅಂತ್ಯ ಕಾಣಲು ಕಾರಣವೇನು? ಬಸವಣ್ಣನವರನ್ನು ವಿರೋದಿಸಿದವರಲ್ಲಿ ಯಾರು ಪ್ರಮುಖರು? ಯಾವ ಕಾರಣದಿಂದ ಅವರು ಬಸವಣ್ಣನವರನ್ನು ವಿರೋದಿಸಿದರು.

೩) ಬಸವಣ್ಣ ಜಾತೀಯತೆ, ವರ್ಣ, ವೈದಿಕ ಆಚರಣೆ, ವೇದ ಉಪನಿಷತ್ತುಗಳನ್ನು ಒಪ್ಪಿಕೊಂಡಿದ್ದರೆ ಅಥವಾ ಇಲ್ಲವೇ? ಕಾರಣ ಕೊಡಿ.

೪) ವಚನ ದರ್ಶನ ಪುಸ್ತಕ ಮುಖ್ಯ ವಾದವೆಂದರೆ ವಚನಗಳು ವೇದ, ಉಪನಿಷತ್ತುಗಳನ್ನು ವಿರೋದಿಸಿಲ್ಲಿಲ್ಲ ಎನ್ನುವುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು

೫) ಬಸವಣ್ಣ ಹಿಂದು ಇಂದು ಮುಂದು ಒಬ್ಬ ಹಿಂದೂ ಅಂತ ಕೆಲವರು ಹೇಳಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು

೬) ವಚನ ದರ್ಶನ ಪುಸ್ತಕವನ್ನು ಸಹಸ್ರಾರು ಲಿಂಗಾಯತರು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವ್ಯಾಪಕ ಟೀಕೆಯಾಗುತ್ತಿದ್ದೆ? ಇದಕ್ಕೆ ಕಾರಣವೇನು?

೭) ವಚನ ದರ್ಶನ ಪುಸ್ತಕದ ಹಿಂದೆ ಇರುವ ವ್ಯಕ್ತಿ, ಸಂಘಟನೆಗಳು ಯಾವುವು?

೮) ಅವರ ಉದ್ದೇಶವೇನು?

೯) ಸಂಘ ಪರಿವಾರದವರು ಪದೇ ಪದೇ ಬಸವಣ್ಣನವರ ಮೇಲೆ, ವಚನಗಳ ಮೇಲೆ ಈ ತರಹದ ಕಾರ್ಯಕ್ರಮಗಳನ್ನು ಮಾಡುತ್ತಿರಲು ಕಾರಣವೇನು

೧೦) ಇಷ್ಟೊಂದು ವಿವಾದ ಹುಟ್ಟುಹಾಕಿರುವ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಹೋಗಿ ಲಿಂಗಾಯತರ ವಿರೋಧ ಕಟ್ಟಿಕೊಳ್ಳಲು ತಯಾರಿದೀರಿ. ಇದಕ್ಕೆ ಕಾರಣವೇನು.

Share This Article
Leave a comment

Leave a Reply

Your email address will not be published. Required fields are marked *