‘ವಚನಗಳು ನುಡಿದಂತೆ ನಡೆದ ಅನುಭಾವಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ವಚನಗಳೆಂದರೆ ನುಡಿದಂತೆ ನಡೆದ ಅನುಭಾವದ ಸೂಳ್ನೂಡಿಗಳಾಗಿದ್ದು ಸತ್ಯದ ಅನಾವರಣವಾಗಿವೆ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.

ದೊಡ್ಡಬಸ್ತಿ ರಸ್ತೆಯ ಕಲ್ಯಾಣ ಪಟ್ಟಣದ ಮಧು ಶಿವಕುಮಾರ ಅವರ ಮನೆಯಂಗಳದಲ್ಲಿ ನಡೆದ ವಚನ ಶ್ರಾವಣದ ೧೯ನೆಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾನು ಸುಖವಾಗಿ ಬದುಕುವುದಲ್ಲದೆ, ತನ್ನ ಜೊತೆಯವರು, ಸಕಲ ಜೀವಾತ್ಮಗಳು ಚೆನ್ನಾಗಿ ಬದುಕಬೇಕೆಂಬ ಹಿರಿಯಾಸೆಯಿಂದ ಮೂಡಿಬಂದ ವಚನಗಳಲ್ಲಿ ಜೀವನ ಮೌಲ್ಯಗಳಿವೆ ಎಂದು ವಿವರಿಸಿದ ಅವರು, ಎಲ್ಲರಿಗೂ ಸುಲಭವಾಗಿ ತಿಳಿಯಲೆಂದು ಅತ್ಯಂತ ಚೆಂದವಾದ ತಿಳಿಗನ್ನಡದಲ್ಲಿ ಬಸವಣ್ಣನವರು ಆರಂಭಿಸಿದ ವಚನಗಳು ಆಚರಣಾ ಸಾಧ್ಯವೂ, ಅನುಸರಣ ಯೋಗ್ಯವೂ ಆಗಿರುವ ವಚನಗಳು‌ ಮರ್ತ್ಯರ ಮನವ ಬೆಳಗಲೆಂದು ಹಚ್ಚಿಟ್ಟ ನುಡಿ ಜ್ಯೋತಿಗಳು ಎಂದು ಬಣ್ಣಿಸಿದರು.

ಶ್ರದ್ಧಾವಂತರಿಗೆ ಕಲ್ಪವೃಕ್ಷವಾಗಿ, ಕಾಯಕ ಜೀವಿಗಳಿಗೆ ಕಾಮಧೇನುವಾಗಿ ಸಾಧಕರಿಗೆ ಚಿಂತಾಮಣಿಯಾದ ವಚನಗಳನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ವಚನಜ್ಯೋತಿ ಬಳಗ. ಕಳೆದ ೨೮ ವರ್ಷಗಳಿಂದ ಮಾಡುತ್ತಾ ಬಂದಿದ್ದು, ಮಕ್ಕಳ‌ ವಚನ ಮೇಳದಲ್ಲಿ ವಚನದ ೧೨ ಪ್ರಕಾರಗಳಲ್ಲಿ ಆಕರ್ಷಣಿಯವಾದ ಸ್ಪರ್ಧೆಗಳನ್ನು ನಡೆಸಿ ಮಕ್ಕಳನ್ನು ಉತ್ತೇಜಿಸಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ವಚನ ಮೇಳದ ಪ್ರತಿಭೆಗಳಾದ ಸಾರಿಕಾ‌ ಮತ್ತು‌ ರಿಷಿಕ ವಚನಗಳ ಮಹತ್ವ ಕುರಿತು ಮಾತನಾಡಿದರು.

ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಸರ್ವಾಣಿ ಮತ್ತು ವಚನ‌ ಕಲಿಕಾ ವಿದ್ಯಾರ್ಥಿಗಳು ವಚನಗಳನ್ನು ಹಾಡಿದರು.

ವಚನ ಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಉತ್ತೇಜಿಸಲಾಯಿತು.

ಕವಯತ್ರಿ ಸೌಮ್ಯಾ, ವೀರಶೈವ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಶಿವಕುಮಾರ, ಚಿತ್ರಕಲಾ ಶಿಕ್ಷಕ ನಿರಂಜನ, ಕಲ್ಯಾಣ ಬಡಾವಣೆಯ ಹಿರಿಯರಾದ ಮಲ್ಲಿಕಾರ್ಜುನಯ್ಯ, ಚನ್ನಮಲ್ಲಯ್ಯ, ಶಿವಕುಮಾರ, ಸುಶೀಲ‌ ಪಂಚಾಕ್ಷರಯ್ಯ, ಪುಷ್ಪ ಮೊದಲಾದವರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *