ಅಣ್ಣಿಗೇರಿ :
ಪಟ್ಟಣದ ತೋಂಟದಾರ್ಯ ವಿದ್ಯಾಪೀಠದ ನಿಂಗಮ್ಮ ಹೂಗಾರ ಸಮೂಹ ವಿದ್ಯಾಲಯದಲ್ಲಿ ಹುತಾತ್ಮ ಡಾ. ಎಂ.ಎಂ. ಕಲಬುರ್ಗಿ ಅವರ ಸ್ಮರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಎಸ್. ಹರ್ಲಾಪೂರ ಮಾತನಾಡಿ ಡಾ. ಎಂ.ಎಂ. ಕಲಬುರ್ಗಿಯವರ ಇತಿಹಾಸದ ಸತ್ಯಶೋಧನೆ, ವೈಜ್ಞಾನಿಕ ಚಿಂತನೆ, ಪ್ರಾಮಾಣಿಕ ವ್ಯಕ್ತಿತ್ವ, ಪುಸ್ತಕ ಪ್ರಕಟಣೆಯಲ್ಲಿ ಅವರ ಅವಿಶ್ರಾಂತ ಸೇವೆಯನ್ನು ಸ್ಮರಿಸಿದರು.

ಹೆಸರು ಕೆಲಸದ ವೈರಿ. ಕೆಲಸ ಮಾಡುವವರಿಗೆ ಹೆಸರು ಬೇಕಿಲ್ಲ ಕಲಬುರ್ಗಿಯವರು ನುಡಿದಂತೆ ನಡೆದರು ಎಂದು ಹೇಳಿದರು.
ಡಾ. ಎಂ.ಎಂ. ಕಲಬುರ್ಗಿಯವರ ಜೀವನ, ವಿದ್ಯಾಭ್ಯಾಸದ ಕುರಿತು ನಡೆದು ಬಂದ ಹಾದಿ ಬಗ್ಗೆ ಸಹ ಶಿಕ್ಷಕಿ ಸವಿತಾ ಪಿಡ್ಡಿ ತಿಳಿಸಿಕೊಟ್ಟರು.

ಶಿಕ್ಷಕಿ ಸುಮಿತ್ರಾ ಹುಣಸಿಮರದ ನಿರ್ದೇಶನದಲ್ಲಿ ವಿದ್ಯಾಲಯದ ಮಕ್ಕಳು ಡಾ. ಎಂ.ಎಂ. ಕಲಬುರ್ಗಿಯವರ ಮತ್ತು ತೋಂಟದ ಸಿದ್ದಲಿಂಗ ಶ್ರೀಗಳ ಒಡನಾಟ ಜೊತೆಗೆ ಪುಸ್ತಕ ಪ್ರಕಟಣೆಯಲ್ಲಿ ಕೈಗೊಂಡ ಬಗೆಯ ರೂಪಕ ಪ್ರದರ್ಶಿಸಿದರು.
ವಿಜಯಲಕ್ಷ್ಮೀ ಹೊರಕೇರಿ ನಿರೂಪಿಸಿದರು. ವಿದ್ಯಾಲಯದ ಎಲ್ಲ ಭೋದಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
