ಆರ್ಯರು, ವೈದಿಕತೆ ಮತ್ತು ಲಿಂಗಾಯತ ಧರ್ಮ
(ಕಲಬುರ್ಗಿ ಕಲಿಸಿದ್ದು ಅಂಕಣಗಳ ಸಂಗ್ರಹ)
1) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
2) ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
3) ವೈದಿಕರು ನಮ್ಮ ಇತಿಹಾಸ ಅಳಿಸಿದರು
4) ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
5) ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
6) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
ರಾಜರ ಬೆಂಬಲದಿಂದ ವೈದಿಕ ಧರ್ಮ ಕರ್ನಾಟಕದಲ್ಲಿ ಬಲಿಷ್ಠವಾಗಿ ಬೆಳೆಯಿತು. ಚಾಲುಕ್ಯರ ಆರನೇ ವಿಕ್ರಮಾದಿತ್ಯನ ೧೦೦೦ ಶಾಸನಗಳಲ್ಲಿ ಬಹುತೇಕವು ವೈದಿಕರಿಗೆ ಮಾಡಿದ ದಾನಗಳನ್ನು ಸೂಚಿಸುತ್ತದವೆ.
ರಾಜರ ಶೋಷಣೆ, ಅಗ್ರಹಾರಗಳ ಆಸ್ತಿ, ದೇವಾಲಯಗಳ ಬಡ್ಡಿ ವ್ಯವಹಾರ, ವರ್ಣ, ಜಾತಿ ಸಮಸ್ಯೆಗಳು ಅತಿರೇಕಕ್ಕೆ ಹೋದವು. ನಂತರ ಬಂದ ಬಿಜ್ಜಳನ ಕಾಲಕ್ಕೆ ಅವು ಸ್ಪೋಟವಾಗುವ ಹಂತ ತಲುಪಿದವು.
ಬಸವಣ್ಣ ಆಗಮಿಕ ಶೈವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಜನಿವಾರ ಹರಿದುಕೊಂಡು ವೈದಿಕ ಧರ್ಮ, ಭಾಷೆ, ಸಿದ್ಧಾಂತ, ವರ್ಣ, ಜಾತಿ ಪದ್ದತಿಗಳನ್ನು ಸಂಪ್ಪೂರ್ಣವಾಗಿ ತಿರಸ್ಕರಿಸಿದರು.
ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗ ಕೊಯ್ಯುವೆ, ವೇದಪುರಾಣ ಹೋತಿಂಗೆ ಮಾರಿ ಮುಂತಾದ ವಚನ ಸಾಲುಗಳು ಆರ್ಯರ ಸಾಂಸ್ಕೃತಿಕ ದಾಳಿಯನ್ನು ಪ್ರಬಲವಾಗಿ ಪ್ರತಿಭಟಿಸಿದವು.
ಕುರುಬ, ಅಂಬಿಗ, ಸಮಗಾರ, ಮಾದಿಗ, ಅಗಸ, ಒಕ್ಕಲಿಗ, ಡೋಹರ ಮುಂತಾದ ದುಡಿಯುವ ಸಮುದಾಯಗಳನ್ನು ಜಾಗೃತಗೊಳಿಸಿ ಬಸವಣ್ಣ ದೊಡ್ಡ ಶರಣ ಚಳುವಳಿಯನ್ನೇ ಹುಟ್ಟು ಹಾಕಿದರು.
ಅವರು ಸೃಷ್ಟಿಸಿದ ಲಿಂಗಾಯತ ಚಳುವಳಿ ವೈದಿಕತೆಯ ವಿರುದ್ಧ ಸಿಡಿದು ನಿಂತು ಅದಕ್ಕೆ ಪರ್ಯಾಯವಾಗಿ ಸ್ವತಂತ್ರ ಧರ್ಮ, ಸಮ ಸಮಾಜವನ್ನು ಕಟ್ಟಲು ಹೊರಟಿತು.