ಕೊಪ್ಪಳದಲ್ಲಿ ವಿದ್ಯಾರ್ಥಿಗಳೊಂದಿಗೆ ಲಿಂಗಾಯತ ಪೂಜ್ಯರ ಸಂವಾದ

ಕೊಪ್ಪಳ

ನಗರದ ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲಿನ ಸಭಾಂಗಣದಲ್ಲಿ ಇಂದು ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಸಂವಾದ ಕಾರ್ಯಕ್ರಮ ನಡೆಯಿತು.

ಎರಡು ತಾಸು ನಡೆದ ಸಂವಾದದಲ್ಲಿ ಮಕ್ಕಳಿಂದ ಬಂದ ಪ್ರಶ್ನೆಗಳಿಗೆ ಪೂಜ್ಯ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಪೂಜ್ಯ ಬಸವಾನಂದ ಮಹಾಸ್ವಾಮಿಗಳು ಮನಗುಂಡಿ, ಪೂಜ್ಯ ವಿರತೀಶಾನಂದ ಸ್ವಾಮೀಜಿ ಮನಗೂಳಿ, ಪೂಜ್ಯ ಬಸವಪ್ರಭು ಸ್ವಾಮೀಜಿ ಬಸವಕಲ್ಯಾಣ ಮತ್ತಿತರರು ಉತ್ತರ ನೀಡಿದರು.

ಶಿವಾನಂದ ಸ್ವಾಮಿಗಳು ಆಶಯ ನುಡಿಗಳನ್ನಾಡಿದರು. ಸಿದ್ಧರಾಮ ಸ್ವಾಮಿ‌ಗಳು ಧ್ವಜಾರೋಹಣ ನೇರವೇರಿಸಿದರು.

ಕಾರ್ಯಕ್ರಮದ ನಿರೂಪಣೆ ಪ್ರಭುಗೌಡ ಕಲ್ಮಂಗಿ, ಬಸವದೇವರು, ಸ್ವಾಗತವನ್ನ ಸಾವಿತ್ರಿ ಮುಜುಂದಾರ, ಶರಣು ಸಮರ್ಪಣೆಯನ್ನು ಶರಣಬಸವನಗೌಡ ಪಾಟೀಲ ಅವರು ಮಾಡಿದರು. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಜಿಲ್ಲಾ ಯುವಘಟಕ, ಜಾ ಲಿಂ ಮಹಾಸಭಾ ಕೊಪ್ಪಳ.