ಬೆಂಗಳೂರು
ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಒಬ್ಬ ಲಾಯರ್ ಪ್ರಯತ್ನ ಪಡುತ್ತಾನೆ. ಇದೊಂದು ಅಮಾನವೀಯ, ಅಸಂವಿಧಾನಿಕ ಘಟನೆ.
ಶೂ ಎಸೆತವನ್ನು ಸಮರ್ಥಿಸಿಕೊಳ್ಳುತಿರುವ ಒಂದು ದೊಡ್ಡ ಬಳಗ ಇದಕ್ಕಿಂತಲೂ ಹೆಚ್ಚಿನ ರಾಕ್ಷಸತನ ತೋರಿಸುತ್ತಿದ್ದಾರೆ. ರಸ್ತೆಯಲ್ಲಿ ಶೂನಿಂದ ಹೊಡೆಯಬೇಕಿತ್ತು, ಎಂದು ಕೆಲವರು ಪ್ರಲಾಪಿಸಿದ್ದಾರೆ.
ಒಬ್ಬ ನ್ಯಾಯಮೂರ್ತಿ ವಿಚಾರಣೆಯ ಸಂಧರ್ಭದಲ್ಲಿ ಹೇಳಿದ್ದು ಸಮ್ಮತಿಯಿಲ್ಲದಿದ್ದರೆ ಅದನ್ನು ವಿರೋಧಿಸಲು ಅನೇಕ ಜನತಂತ್ರೀಯ ಮಾರ್ಗಗಳಿವೆ. ಪ್ರತಿಭಟನೆ ವ್ಯಕ್ತಪಡಿಸಲು “ಶೂ” ಎಸೆಯಬೇಕೆಂದು ಯಾವ ಸನಾತನ ಧರ್ಮ ಹೇಳಿದೆ.
ಇದೆ ಸಂಸ್ಕೃತಿಯನ್ನು ಕನ್ನೇರಿ ಕಾಡಸಿದ್ದೇಶ್ವರ ಶ್ರೀ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ಅಕ್ಟೊಬರ್ 9 ನಡೆದ ಕಾರ್ಯಕ್ರಮದಲ್ಲಿ ತೋರಿದ್ದಾರೆ. ಅಲ್ಲಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ನಾಲ್ಕು ನೂರಕ್ಕೂ ಹೆಚ್ಚಿನ ವಿರಕ್ತ ಸ್ವಾಮಿಗಳನ್ನು “** ಮಕ್ಕಳು” ಎಂದೂ ಅವರಿಗೆ “****ನಿಂದ ಹೊಡೆಯಬೇಕು” ಎಂದು ಯಾವುದೇ ಸಂತತನದ ಸ್ಪರ್ಶವೂ ಇಲ್ಲದೇ ಭಾಷಣ ಮಾಡಿದ್ದಾರೆ.
ಇನ್ನೊಬ್ಬರ ವಿಚಾರ, ತತ್ವ ಒಪ್ಪಿಗೆಯಾಗದಿದ್ದರೆ ಈ ರೀತಿಯ ಕೀಳು ಪ್ರತಿಕ್ರಿಯೆ ನೀಡುವುದೇ ಇವರೆಲ್ಲಾ ಪ್ರತಿಪಾದಿಸುತ್ತಿರುವ ಸನಾತನ ಸಂಸ್ಕೃತಿಯೇ?
ಇವೇನಾ ಇವರೆಲ್ಲರಿಗೂ ಸನಾತನದ ಧರ್ಮಗ್ರಂಥ ಭಗವದ್ಗೀತೆ ಹೇಳಿಕೊಟ್ಟಿರುವ ಸಂಸ್ಕಾರುಗಳು. ಇದೇನಾ ಇವರು ಶಾಖೆಗಳಲ್ಲಿ ಕಲಿತ ಮೌಲ್ಯಗಳು?
ಇವರೆಲ್ಲ ದೇಶದ ಪ್ರಥಮ ಭಯೋತ್ಪಾದಕ ನಾತೂರಾಮ್ ಗೋಡ್ಸೆ ಸಂತಾನದವರೇ ಆಗಿದ್ದಾರೆ. ಈ ಸಂತಾನ ಬಳಗ ಅದೇ ಸಂಸ್ಕೃತಿಯನ್ನು ಮುಂದುವರಿಸುತ್ತಿದೆ.
ಇದೇ ಸಂಸ್ಕೃತಿಯವರು ಪ್ರಸಿದ್ಧ ವಿದ್ವಾಂಸ ಬಸವ ಭಕ್ತ ಡಾ. ಎಂ. ಎಂ. ಕಲಬುರ್ಗಿ ಅವರಿಗೆ ಗುಂಡು ಹಾಕಿ ಹತ್ಯೆ ಮಾಡಿದರು. ಇದೇ ಸಂತಾನದವರು ಪರ್ತಕರ್ತೆ ಗೌರಿ ಲಂಕೇಶ್ ಅವರಿಗೆ ಗುಂಡು ಹಾಕಿ ಹತ್ಯೆ ಮಾಡಿದರು.
ಇವರು ಅಂಬೇಡ್ಕರ್, ಬಸವಣ್ಣ, ಗಾಂಧೀಜಿಯ ಅನುಯಾಯಿಗಳನ್ನು ಮತ್ತವರು ಪ್ರತಿಪಾದಿಸುವ ಮೌಲ್ಯಗಳನ್ನು ನಿರ್ನಾಮ ಮಾಡಲು ವ್ಯವಸ್ಥಿತ, ಸಂಘಟಿತ ಪ್ರಯತ್ನ ನಡೆಸುತ್ತಿದ್ದಾರೆ.
ಇದೇ ಭಾಷಣದಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಸಂಘಟಿಸಿದವರನ್ನು “ಮುಖ್ಯಮಂತ್ರಿ ಕೃಪಾಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟ” ಎಂದು ಕರೆದಿದ್ದಾರೆ. ಹಾಗಾದರೆ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯನ್ನು ಮಾಡಿದ್ದು, ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ನಡೆಸಿದ್ದು ಯಾವ ಕೃಪಾಪೋಷಿತ ಸಂಘ ಎಂದು ಕರೆಯಬಹುದು?
ಇಂತಹ ನುಡಿಮುತ್ತನ್ನು ಸಭಿಕರು ಸಂಭ್ರಮಿಸುತ್ತಾರೆ ಎಂದರೆ ನಮ್ಮ ಸಮಾಜ ಎತ್ತ ಹೋಗುತ್ತಿದೆ?
ಅವರ ಸಂಸ್ಕೃತಿ ಬೀದಿ ನಿಮ್ಮ ಸಂಸ್ಕೃತಿ ವಿಥ್ ಪ್ರೂಫ್ ತೋರಿಸ್ತಿನಿ ಬಸವ ಭಕ್ತರು, ಬಸವ ಸ್ವಾಮಿಗಳು ಎಂಥಾ ಹೀನ ವಾಗಿ ಕೆಟದಾಗಿ ಮಾತಾಡಿಧರೆ ಅಂಥ!!!!!”” ಮಾತು ಮಾತಿಗೂ ಬಹಳಸಿದ ಪದಗಳಿವೆ ತೋರುಸಲ?????
ನಾಯಿ ಬಾಲ ಡೊಂಕು ಅನ್ನೊ ಹಾಗೆ ಪಂ ಪೀಡೆಗಳೊಂದಿಗೆ ಎಂದಿಗೂ ಇವರು ಬಸವ ವಿರೋಧಿಗಳೆ
ಸನಾತನವೇ ಇರಲಿ,ಬಸವ ಧರ್ಮ ಇನ್ನಾವುದೇ ಇರಲಿ.. ಮಾನವೀಯ ಮಿತಿ ಮೀರದಿರಲಿ….
Correct sir
ಅವರಿಗೂ ನಿಮಗೂ ವ್ಯತ್ಯಾಸವೇನು ಅವರು ನೀವು ಒಂದೆನಾ
ಒಮ್ಮೊಮ್ಮೆ ಅನಿಸುತ್ತೆ ಇಂತಹವರನ್ನು ಅವರಿಷ್ಟಕ್ಕೆ ಅವರನ್ನು ಬಿಡಬೇಕು ಅಂತ. ಮತ್ತೊಮ್ಮೆ ಅನಿಸುತ್ತೆ ಅದೇ ತಪ್ಪು ಅಂತ. ಇಂತಹವರಿಗೆ ದೊಡ್ಡ ಮಟ್ಟದ ಪ್ರತಿಭಟನೆಯ ಬಿಸಿ ಮತ್ತು ಇಡೀ ಮಠಾಧೀಶರ ಒಕ್ಕೂಟಕ್ಕೆ ಅವಮಾನ, ಅಶ್ಲೀಲ ಪದಪ್ರಯೋಗ ಮತ್ತು ಮೆಟ್ಟಲ್ಲಿ ಹಿಡಿಯಬೇಕು ಎಂದು ಹೇಳುವ ಮೂಲಕ ಅವರಂತಹದೇ ಮನೋಸ್ಥಿತಿಯುಳ್ಳವರಿಗೆ ಪ್ರಚೋದನೆ ಕೊಟ್ಟಂತಾಗುವುದರಿಂದ ಕಾನೂನು ಪ್ರಕ್ರಿಯೆ ಏನಾದರೂ ಪ್ರಾರಂಭಿಸಬೇಕಾ ಎಂದೂ ಯೋಚಿಸಬೇಕು ಮತ್ತು ಸಾಧ್ಯವಿದ್ದರೆ ಮಾಡಬೇಕು. ಇಂತಹ ಸಮಾಜ ದ್ರೋಹಿಗಳನ್ನು ಪ್ರಶ್ನಿಸದೆ ಬಿಟ್ಟರೆ ಇಡೀ ಸಮಾಜದ ಸ್ವಾಸ್ಥವೇ ಹಾಳಾಗುತ್ತದೆ.
ಲಿಂಗಾಯತ ಧರ್ಮದ ಮಠದಿಂದ ಹೊರಗೆ ಹಾಕಿರಿ. ಸಗಣಿ ಮಾರಿ, ತಿಂದು ಬದುಕಲಿ.
ದನದ ಮಲ ತಿನ್ನುವ, ದನದ ಮೂತ್ರ ಕುಡಿಯುವ ಕರ್ಮಠ ಸನ್ಯಾಸಿಯ ಬಾಯಿ ಸ್ವಚ್ಚವಾಗಿರಲು ಸಾಧ್ಯವೆ? ಹಾಗೆಯೆ ಮಾತನಾಡುವ ಭಾಷೆಯು ಮಲದಂತಿದ್ದೀತು, ಇದು ಪ್ರತ್ಯಕ್ಷ ಸಾಕ್ಷಿ. ಕನ್ನೇರಿ ಸ್ವಾಮಿ.
ಅಯ್ಯ, ಒಬ್ಬ ಶ್ರೀಗಳಾಗಿ ನಿಮಗೆ ಸಮಸ್ಯೆಗಳಿದ್ದರೆ ಸಲಹೆಗಳನ್ನು ನೀಡಲು ಪ್ರಯತ್ನಿಸಿ ಅಥವಾ ನಿಮಗೆ ತುಂಬಾ ನೋವಾಗಿದ್ದರೆ, ಅಂತಹ ಕೀಳು ಮಟ್ಟದ ಭಾಷೆಯನ್ನು ಮಾತನಾಡುವ ಬದಲು ಮೌನವಾಗಿರಿ. ಹೀಗೆ ಮಾಡುವುದರಿಂದ, ನೀವು ಇಡೀ ಶ್ರೀ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದೀರಿ. ಮತ್ತು ವೇದಿಕೆಯನ್ನು ಹಂಚಿಕೊಳ್ಳುವ ಶ್ರೀಗಳು ಪ್ರತಿಭಟಿಸಬೇಕಾಗಿತ್ತು, ಮೌನವಾಗಿರುವ ಮೂಲಕ ಅವರು ಅಂತಹ ಸಂಸ್ಕೃತಿಯನ್ನು ಪೋಷಿಸುತ್ತಿದ್ದಾರೆ. ಬಸವ ಭಕ್ತರೇ ಎಚ್ಚರವಾಗಿರಿ, ಬಸವಣ್ಣನನ್ನು ಎತ್ತಿಹಿಡಿಯುವ ಎಲ್ಲಾ ಸ್ವಾಮೀಜಿಗಳನ್ನು ಗುರಿಯಾಗಿಸುವುದು ಪ್ರವೃತ್ತಿಯಾಗಿದೆ, ಒಮ್ಮೆ ಸ್ವಾಮೀಜಿಗಳನ್ನು ಮೂಲೆಗುಂಪು ಮಾಡಿದರೆ, ಭಕ್ತರನ್ನು ಸುಲಭವಾಗಿ ಮೂಲೆಗುಂಪು ಮಾಡಬಹುದು.
ಕನ್ಹೇರಿ ಸ್ವಾಮಿ ಪದೇ ಪದೇ ಬಸವ ಅನುಯಾಯಿಗಳನ್ನು ಹೀನ ಭಾಷೆಯಿಂದ ಕೆಣುಕುತ್ತಿರುವುದು ಆಕಸ್ಮಿಕವೂ ಅಲ್ಲ, ಬಾಯಿ ಚಪಲವೂ ಅಲ್ಲ, ಇದು ವ್ಯವಸ್ಥಿತ ಷಡ್ಯಂತ್ರ.
ಕಳೆದ ಬಾರಿ ಬಸವಣ್ಣನವರ ಅನುಯಾಯಿಗಳಿಗೆ ಬಸವ ತಾಲಿಬಾನ್ ಎಂದಿದ್ದ ಕನ್ಹೇರಿ ಇಂದು ಲಿಂಗಾಯತ ಮಠಾಧೀಶರಿಗೆ ಸೂ- ಮಕ್ಜಳು ಎಂದಿದಾನೆ, ಕನ್ಹೇರಿ ಸ್ವಾಮಿ ಅದು ಏನು ಕುಡಿದು ಮಾತಾಡ್ತಾನೋ ಗೊತ್ತಿಲ್ಲ , ಈಕನ್ಹೇರಿ ಸ್ವಾಮಿಗೆ ರಾಜ್ಯಾದ್ಯಂತ ಪ್ರತಿಭಟಿಸಿ ಕೇಸ್ ಮಾಡದಿದ್ದರೆ ಈಕನ್ಹೇರಿ ಸ್ವಾಮಿ ಇನ್ನಷ್ಟುನಾಲಿಗೆ ಹರಿ ಬಿಡಲಿದ್ದಾನೆ
ಕನ್ಹೇರಿ ಸ್ವಾಮಿ ಕರ್ನಾಟಕದಲ್ಲಿ ಶಾಂತಿಗೆ ಭಂಗ ತರುವ ಸೌಹಾರ್ದ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾನೆ, ಈತನಿಗೆ ಕರ್ನಾಟಕ ಪ್ರವೇಶಿಸದಂತೆ ನಿರ್ಭಂದ ಹೇರದಿದ್ದರೆ ಕಾನೂನು ಸುವ್ಯವಸ್ಥೆ ಭಂಗ ಆಗುವ ಆತಂಕವಿದೆ.
ಬಸವ ಅನುಯಾಯಿಗಳ ಬಗ್ಗೆ ಇಷ್ಟು ತುಚ್ಛವಾಗಿ ಮಾತನಾಡುವ ಕನ್ಹೇರಿ ಸ್ವಾಮಿ ಬಸವಣ್ಣನವರಿಗೆ ಶರಣರ ವೈಚಾರಿಕತೆಗೆ ನೇರವಾಗಿ ಸವಾಲೊಡ್ಡಿದ್ದಾನೆ.
ಈತನನ್ನು ಅದ್ಯಾರು ಮಠಾಧೀಶರನ್ನಾಗಿ ಮಾಡಿದರೋ ? ಬೀದಿ ರೌಡಿಗೆ ಇರುವ ಎಲ್ಲ ಲಕ್ಷಣ ಇವೆ ಕನ್ಹೇರಿ ಸ್ವಾಮಿಗೆ , ಆತನನ್ನು ರೌಡಿ ಶೀಟರ್ ಎಂದೇ ಪರಿಗಣಿಸಬೇಕು.
ಉತ್ತಮ ವಾಗ್ಮಿಗಳು ಯಾರೊಡನೆ ಯಾವ ಭಾಷೆ ಮಾತನಾಡಬೇಕು ಎಂಬುದು ಅರ್ಥ್ ಪೂರ್ಣವಾಗಿ ಮಾತನಾಡಿದ್ದಾರೆ