ಅಶ್ಲಿಲ ಭಾಷೆ ಬಳಸಿದ ಕನ್ನೇರಿ ಶ್ರೀಗಳು ಸನ್ಯಾಸ ಧರ್ಮಕ್ಕೆ ದ್ರೋಹ ಬಗೆದಿದ್ದಾರೆ.
ಭಾಲ್ಕಿ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಾಜ್ಯಾದ್ಯಂತ ಮಾಡಿರುವ ಬಸವ ಸಂಸ್ಕೃತಿ ಅಭಿಯಾನ ಅಭೂತಪೂರ್ವವಾಗಿ ಯಶಸ್ವಿ ಆಗಿರುವುದರಿಂದ ಬಸವತತ್ವ ವಿರೋಧಿ ಬಣಗಳಲ್ಲಿ ಆತಂಕ ನಿರಾಶೆ, ಭಯ ಹುಟ್ಟಿಸಿದೆ.
ಆದ ಕಾರಣ ರಾಷ್ಟ್ರಭಕ್ತಿಯ ಮುಖವಾಡ ಹಾಕಿಕೊಂಡು ಸನಾತನ ಧರ್ಮದ ರಕ್ಷಕರು ಎಂದು ಬಿಂಬಿಸಿಕೊಳ್ಳುವ ಕೊಲ್ಲಾಪುರ ಕನ್ನೇರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ದ್ವೇಷದ ಹಾಗೂ ಹಸಿ ಸುಳ್ಳು ಮಾತುಗಳನ್ನು ಆಡಿದ್ದಾರೆ. ಅವುಗಳನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಒಕ್ಕೂರಲಿಂದ ಖಂಡಿಸುತ್ತದೆ.
ಪೂಜ್ಯರು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ ತಾಲೂಕಿನ ಬೀಳೂರು ಗ್ರಾಮದ ಬಸವಾದಿ ಶರಣ ಪರಂಪರೆಯ ವಿರಕ್ತಮಠದ ಒಂದು ಕಾರ್ಯಕ್ರಮದಲ್ಲಿ ಬಸವತತ್ವದ ವಿರುದ್ಧ ಕೊಟ್ಟ ಹೇಳಿಕೆ ವಿಷಾದನೀಯ ಸಂಗತಿ ಆಗಿದೆ.
ಬಸವ ಸಂಸ್ಕೃತಿ ಅಭಿಯಾನ ನಾಡಿನ ಯುವಕರಲ್ಲಿ, ಸಾಮಾನ್ಯ ಜನರಲ್ಲಿ ದೇಶಭಕ್ತಿ, ಸಾಮಾಜಿಕ ಸಮಾನತೆ, ಸಹೋದರತ್ವ, ಮಾನವೀಯತೆ, ವೈಜ್ಞಾನಿಕ ಮನೋಭಾವ, ಪ್ರಜಾಪ್ರಭುತ್ವ ಮುಂತಾದ ಮೌಲ್ಯಗಳು ಬಿತ್ತಿದೆ. ಇದರಿಂದ ರಾಷ್ಟ್ರ ಬಲಿಷ್ಠವಾಗುತ್ತದೆ, ವಿನಃ ನಾಶವಾಗಿಲ್ಲ ಎಂಬುದು ಅದೃಶ್ಯ ಸ್ವಾಮಿಗಳು ಅರ್ಥೈಸಿಕೊಳ್ಳಬೇಕು.
ಬಸವಾದಿ ಶರಣರು ಈ ದೇಶದಲ್ಲಿದ್ದ ಸಾವಿರಾರು ಜಾತಿಗಳನ್ನು ಓಗ್ಗೂಡಿಸಿ, ಸರ್ವಸಮಾನತೆಯ ರಾಷ್ಟ್ರವಾದಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಆದಕ್ಕಾಗಿಯ ಬಸವ ಪರಂಪರೆಯ ಲಿಂಗಾಯತರು ನಮ್ಮ ರಾಷ್ಟ್ರ ಕಟ್ಟುವಲ್ಲಿ ಅಪಾರ ಕೊಡಗೆ ನೀಡಿದ್ದಾರೆ.
ಸ್ವಾತಂತ್ರ‍್ಯ ಚಳವಳಿಯಲ್ಲಿ ಲಕ್ಷಾಂತರ ಲಿಂಗಾಯತರು ತಮ್ಮ ಪ್ರಾಣದ ಹಂಗು ತೊರೆದು ತ್ಯಾಗ ಬಲಿದಾನ ಮಾಡಿದ್ದಾರೆ. ಹಾಗಾಗಿ ದೇಶಭಕ್ತಿ ಲಿಂಗಾಯತರಲ್ಲಿ ರಕ್ತಗತವಾಗಿದೆ. ಅದಕ್ಕಾಗಿ ಬಸವತತ್ವ ವಿರೋಧಿ ಅದೃಶ್ಯ ಸ್ವಾಮಿಗಳು ಲಿಂಗಾಯತರಿಗೆ ದೇಶಭಕ್ತಿಯ ಪಾಠ ಕಲಿಸುವ ಅಗತ್ಯತೆ ಇಲ್ಲ.
ರಾಷ್ಟ್ರ ಅಂದರೆ ಜನ, ಜಲ, ವನ, ಯುವ ಸಂಪತ್ತು. ಈ ಎಲ್ಲರ ಒಳಿತಿಗಾಗಿ ದುಡಿದವರು, ದುಡಿಯುತ್ತಿರುವವರು ಲಿಂಗಾಯತರು, ಲಿಂಗಾಯತ ಮಠಗಳು.
ನಮ್ಮ ದೇಶದ ಯುವಪೀಳಿಗೆಗೆ ಅನ್ನ, ಆಶ್ರಯ ಅಕ್ಷರ, ಆರೋಗ್ಯ ನೀಡುವ ಮೂಲಕ ನಮ್ಮ ದೇಶ ಸಶಕ್ತ, ಸಮರ್ಥಗೊಳಿಸಲು ಶತಮಾನಗಳಿಂದ ಲಿಂಗಾಯತ ಮಠಗಳು ಸೇವೆ ಮಾಡುತ್ತಿವೆ. ಇದು ತಮ್ಮ ಮಠವನ್ನು ವ್ಯಾಪಾರಿಕರಣಗೊಳಿಸಿ ಮಾರಾಟಕ್ಕೆ ಇಟ್ಟ ಕಾಡಸಿದ್ದೇಶ್ವರ ಸ್ವಾಮಿಗಳಿಗೆ ಹೇಗೆ ಅರ್ಥವಾಗುವುದು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟವನ್ನು ಮುಖ್ಯಮಂತ್ರಿ ಕೃಪಾಪೋಷಿತ ನಾಟಕ ತಂಡ ಎಂದು ಹೇಳಿರುವುದು ಅತ್ಯಂತ ಕೆಳಮಟ್ಟದ ಹೇಳಿಕೆ.
ಅಚ್ಚ ಶರಣ ಪರಂಪರೆಯ ಕನ್ನೇರಿ ಮಠವನ್ನು ಬಸವತತ್ವ ವಿರೋಧಿ ಮಠವನ್ನಾಗಿಸಿರುವ ಪೂಜ್ಯರಿಗೆ ಲಿಂಗಾಯತ ಮಠಗಳ ಕುರಿತು ಮಾತನಾಡುವ ಯಾವ ನೈತಿಕತೆಯು ಇಲ್ಲ.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಯಾವ ಪೂಜ್ಯರು ಕೂಡ ಅನ್ಯ ಧರ್ಮದ ಆಚರಣೆಗಳ ಕುರಿತು ಮಾತನಾಡಿಲ್ಲ, ಆದರೂ ಕನ್ನೇರಿ ಶ್ರೀಗಳು ಲಿಂಗಾಯತ ಮಠಾಧಿಪತಿಗಳ ಕುರಿತು ಅತ್ಯಂತ ಹಸಿ ಸುಳ್ಳು ಆಪಾದನೆ ಮಾಡಿರುವುದು ಆಪಾದನೆ ಮಾಡಿರುವುದು ಅವರ ಸನ್ಯಾಸ ಧರ್ಮಕ್ಕೆ ಚ್ಯುತಿ ತಂದಿವೆ.
ಒಬ್ಬ ಸನ್ಯಾಸಿಗಳಾಗಿ ಈ ರೀತಿಯ ಸುಳ್ಳು ಮಾತುಗಳನ್ನು ಜನರಲ್ಲಿ ಬಿಂಬಿಸಿ ಸಾಮಾಜಿಕ ಸೌಹಾರ್ದತೆ ಹಾಳು ಮಾಡುವುದು ಅಪರಾಧ.
ಕನ್ನೇರಿ ಶ್ರೀಗಳು ಯಾವ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಆ ಧರ್ಮ ಬೇರೆ ಧರ್ಮದ ಸಂತರನ್ನ ಸನ್ಯಾಸಿಗಳನ್ನು ಗೌರವಿಸುವುದು ಕಲಿಸುತ್ತದೆ, ವಿನಃ ಈ ರೀತಿಯ ಅತ್ಯಂತ ಕೆಳಮಟ್ಟದ ಭಾಷೆ ಬಳಸುವುದು ಕಲಿಸುವುದಿಲ್ಲ.
ತಾವೂ ಒಬ್ಬ ಸನ್ಯಾಸಿಗಳಾಗಿ ಬಾಯಿಗೆ ಬಂದಂತೆ ಅಶ್ಲಿಲ ಭಾಷೆ ಬಳಸಿದ ಕನ್ನೇರಿ ಶ್ರೀಗಳು ಸನ್ಯಾಸ ಧರ್ಮಕ್ಕೆ ದ್ರೋಹ ಬಗೆದಿದ್ದಾರೆ.
ಲೋಕದ ಡೊಂಕನ್ನು ತಿದ್ದುವ ಮುನ್ನ ಪೂಜ್ಯರು ಆತ್ಮಶೋಧನೆ ಮಾಡಿ ಶರಣ ಪರಂಪರೆಯ ಕಾಡಸಿದ್ದೇಶ್ವರ ಮಠವನ್ನು ವಿಶಿಷ್ಟ ವಿಚಾರಧಾರೆಯ ಹಾಗೂ ಪಕ್ಷದ ಕೃಪಾಪೋಷಿತ ಮಠವಾಗಿರಿಸುವುದರಿಂದ ಅವರಿಗೆ ಎಲ್ಲರಲ್ಲಿಯೂ ರಾಜಕೀಯ ಹಾಗೂ ಧರ್ಮ ದ್ರೋಹದ ವಾಸನೆ ಬರುತ್ತಿದೆ ಹೊರತು ಬೇರೆ ಏನೂ ಅಲ್ಲ.
ಪೂಜ್ಯರು ಇಂತಹ ಲಿಂಗಾಯತ ವಿರೋಧಿ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು ಇಲ್ಲದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತಿಳಿಸಿದೆ.
ಹೌದು ನಾವು ನಾಟಕಕಾರರು
ನೀವು ಬೂಟಾಟಿಕರು
ನಾವು ತತ್ವ ಪ್ರಚಾರಕರು
ನೀವು ದ್ವೇಷ ಪ್ರಚೋದಕರು
ಹೌದು ನಾವು ಸೂಳೆ ಮಕ್ಕಳೆ,
ಪಾದೋದಕ ಪ್ರಸಾದ ಕೊಂಡಡೆ
ಸಾಕ್ಷಾತ ಲಿಂಗ ಮುಖಗಳು.
ನೀವು ಎಂದಿಗೂ ಬದಲಾಗದ
ಸ್ಲಂ ಸೂಳೆ ಮಕ್ಕಳಲ್ಲವೇನು.
ಎಲುವಿಲ್ಲದ ನಾಲಿಗೆ
ಹೇಲು ತಿನ್ನುವದ ಕಲಿತ ಮೇಲೆ
ಹೊಲಸು ಬೊಗಳದೆ
ಸೊಗಸು ಬೊಗಳುವುದೇನು.
ಆರಂಭ ಅಂತ್ಯವಿಲ್ಲದ
ಕಂತೆ ಪುರಾಣವ ಕಟ್ಟಿದ
ಕುಂತಿಯಂಬ ಮೆಗಾ
ಪತಿವೃತಗಳು ನಿವಲ್ಲವೇನು.
ಶರಣ ದ್ವೇಷಿಗಳೆ?
ನೀವು ಬೊಗಳುತ್ತಿರುವುದು
ಬಸವನೆಂಬ ಬೆಟ್ಟಕ್ಕೆ
ಒದರಿ ಒದರಿ, ಹೊಟ್ಟೆ ಕೊರಗಿ
ಸಾಯುವಯದು ನಿಮ್ಮ ತತ್ವ.
ನೆನಪಿರಲಿ ನಮ್ಮಯ ಎಚ್ಚರಿಕೆ.
ಕನ್ಹೇರಿ ಮಠದ ಸುತ್ತಮುತ್ತ ಬಸವ ತತ್ವ ಪ್ರಚಾರ ಮಾಡಬೇಕ.
ಲಿಂಗಾಯತ ಧರ್ಮದ ಬಗ್ಗೆ ತಿಳಿಸಿ ಹೇಳಬೇಕು. ಅಲ್ಲಿಯ ಮಠದ ಮೊದಲಿನ ಗುರುಗಳು, ಸಂಪ್ರದಾಯ ತಿಳಿಸಿ ಹೇಳಬೇಕು.
ಆಗ ಭಕ್ತರೇ ಈ ಸಗಣಿ ವ್ಯಾಪಾರಿಗೆ ಗಣಾಚಾರಿ ತತ್ವ ದರ್ಶನ ಮಾಡುತ್ತಾರೆ
ಇವರ ಮೇಲೆ “ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ” ಅಧ್ಯಕ್ಷರಾದ ಪೂಜ್ಯರು ಹಾಗೂ JLM ದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶಿವಾನಂದ ಜಾಮದಾರ ಅವರುಗಳು ಈತನ ಮೇಲೆ FIR ಕೂಡಲೇ ದಾಖಲಿಸಬೇಕೆಂದು ವಿನಂತಿಸುತ್ತೇನೆ.
ಕನ್ಹೇರಿ ಮಠ ಚಲೋ ಎಂದು ಬಸವ ಭಕ್ತರಿಗೆ ಕರೆ ಕೊಡಬೇಕು, ಒಮ್ಮೆ ಮುತ್ತಿಗೆ ಹಾಕಬೇಕು , ಕನ್ಹೇರಿ ಸ್ವಾಮಿ ಮಠದಿಂದ ಉಚ್ಛಾಟನೆಯಾಗಬೇಕು, ಕರ್ನಾಟಕದಲ್ಲಿ ಅಶಾಂತಿ ಗಲಭೆ ಉಂಟು ಮಾಡುವ ಉದ್ದೇಶವಿದೆ ಈ ಸ್ವಾಮಿಗೆ, ಈ ಕನ್ಹೇರಿ ಸ್ವಾಮಿ ಈ ಮಾತುಗಳನ್ನಾಡುವಾಗ ಮಾದಕ ವ್ಯಸನ ಮಾಡಿರಬೇಕು ಇಂತಹ ಶಬ್ದಗಳು ಮೈಮೇಲೆ ಅರಿವಿಲ್ಲದ ಮಾದಕ ವ್ಯಸನಿಯಿಂದ ಅಥವಾ ಮಾನಸಿಕ ಅಸ್ವಸ್ಥನಿಂದ ಮಾತ್ರ ಬರಲು ಸಾದ್ಯ, ಆತ ಸಂತನಾಗಿ ಮುಂದುವರೆದರೆ ಸಮಾಜದಲ್ಲಿ ಅಶಾಂತಿ ಹರಡುತ್ತಾ ಹೋಗುತ್ತಾನೆ. ಹಾಗಾಗಿ ಕನ್ಹೇರಿ ಮಠ ಚಲೋ ಎಂದು ಕರೆ ಕೊಡಬೇಕು.
ಈ ಸ್ವಾಮಿ ಗರತಿಗೇ ಹುಟ್ಟಿದ್ದಾನೆಯೇ .ಇಂಥ ಹೊಲಸು ಮಾತನಾಡುವ ಈ ಸ್ವಾಮಿ ಬಗ್ಗೆ ಅನುಮಾನವಿದೆ
ಅವರ ಮೇಲೆ ಕಾನೂನು ಪ್ರಕಾರ ಕೇಸ್ ಮಾಡಬಹುದಲ್ಲ ಶರಣರೆ
ನಾವು ಬಸವ ತತ್ವದವರು….ನಮ್ಮ ಬಾಯಯಲ್ಲಿ ಕನ್ನೇರಿ ಸ್ವಾಮಿ ಹಾಗೆ ಮಾತನಾಡಲು ಬರುವದಿಲ್ಲ ಆದರೂ ಅನಿವಾರ್ಯ…. ಆಗಾಗ ಹಿಂಗೆ ಮಾತಾಡಿದ್ರೆ ನಮ್ಮ ಕಡೆ ನೀರ ಹಾಕೋಳದೆ ವ್ಯಸನ ಮಾಡಿದ್ದಾನೆ ಅಂತಾರೆ…ನೋಡೋಕೆ ಗುಂಡಾ ತರಾ ಇರೋನ ಬಾಯಿಯಲ್ಲಿ ಇಂತಹ ಮಾತುಗಳೇ ಬರುತ್ತವೆ.. ಇತ್ತೀಚಿಗೆ ಬಚ್ಚಲುಗಳು ಸ್ವಚಛವಾಗಿವೆ…ಆದರೆ ಇಂತವರು ಕೊಳಿತಿದಾರೆ…