ಮಹಾಶಿವರಾತ್ರಿ: ಹರಳಯ್ಯನವರ ಗವಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ನಗರದ ಹರಳಯ್ಯನವರ ಗವಿಯಲ್ಲಿ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಮಹಾ ಶಿವರಾತ್ರಿ ನಿಮಿತ್ಯ ರವಿವಾರ ಬೆಳಿಗ್ಗೆ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕ ತಾಯಿಯವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ ನಡೆಯಿತು.

ಸಾವಿರಾರು ಶರಣ – ಶರಣೆಯರು ಭಕ್ತಿಭಾವ, ಶೃದ್ಧೆಯಿಂದ ಇಷ್ಟಲಿಂಗ ಪೂಜಾಯೋಗದಲ್ಲಿ ಪಾಲ್ಗೊಂಡಿದ್ದರು. ಬಿಳಿ ಉಡುಪು ಹಣೆಯ ಮೇಲೆ ವಿಭೂತಿ, ಎಡಗೈಯಲ್ಲಿ ಇಷ್ಟಲಿಂಗ ವಿರಿಸಿ ಗವಿಯ ಸುಂದರ ಪರಿಸರದಲ್ಲಿ ಶರಣ ಸಂಕುಲ ಇಷ್ಟಲಿಂಗ ಪೂಜೆಯಲ್ಲಿ ಭಕ್ತಿಯಿಂದ ನಿರತರಾದ ದೃಶ್ಯ ಕಣ್ಮನ ಸೆಳೆಯಿತು. ಇಡೀ ಪರಿಸರದಲ್ಲಿ ಒಂದು ಗಂಟೆ ಬಸವ ಓಂ ನಮಃ ಶಿವಾಯ, ಓಂ ಶ್ರೀ ಗುರು ಬಸವಲಿಂಗಾಯ ನಮಃ ಮಂತ್ರ ಝೇಂಕರಿಸಿದವು.

ಪೂಜ್ಯ ಸತ್ಯಕ್ಕತಾಯಿ ಮಾತನಾಡಿ, ಇಷ್ಟಲಿಂಗವೆಂಬುದು ಅರಿವಿನ ಕುರುಹು, ನಮ್ಮೊಳಗಿನ ಅರಿವೇ ಗುರು, ಆ ಗುರುವೇ ದೇವರು, ಇಷ್ಟಲಿಂಗ ಪೂಜೆಯ ಕುರುಹನ್ನು ಹಿಡಿದು ತಮ್ಮೊಳಗಿನ ಘನದ ಪೂಜೆಯನ್ನು ಮಾಡಬೇಕಾಗುತ್ತದೆ. ಇಷ್ಟಲಿಂಗ ಪೂಜೆ ಅಂತರಂಗದ ಅರಿವು ವಿಸ್ತರಿಸಿ ಶರೀರ ಗುಣಗಳೆಲ್ಲ ಲಿಂಗ ಗುಣಗಳಾಗಿ ಪರಿವರ್ತನೆಯಾಗುತ್ತವೆ.

ಇಷ್ಟಲಿಂಗದ ಮೂಲಕ ನಮ್ಮನ್ನು ನಾವು ಪೂಜೆಗೊಳ್ಳುವ ಮೂಲಕ ದೇವರೆ ನಾವಾಗಲು ಸಾಧ್ಯ. ಶರಣರಿಗೆ ಪ್ರತಿದಿನ ಶಿವರಾತ್ರಿಯಾಗಿದ್ದು ಪ್ರತಿದಿನ ಇಷ್ಟಲಿಂಗ ಪೂಜೆ, ಲಿಂಗ ನಿರೀಕ್ಷೆ, ಲಿಂಗ ಧ್ಯಾನ, ವಚನಗಳ ಪಠಣ ಮಾಡಬೇಕು ಎಂದು ನುಡಿದರು.

ಸುಜಾತಾ ತೋಗರಖೇಡೆ ಇಷ್ಟಲಿಂಗ ಪೂಜಾಯೋಗದ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಇಷ್ಟಲಿಂಗಾರ್ಚನೆ, ಪ್ರಾಣಲಿಂಗಾರ್ಚನೆ, ಭಾವಲಿಂಗಾರ್ಚನೆಯ ಮಹತ್ವ ವಿವರಿಸುತ್ತಲೇ ವಿಧಿ-ವಿಧಾನಗಳನ್ನು ಹೇಳಿಕೊಟ್ಟರು.

ಮಹಿಳಾ ಕದಳಿ ವೇದಿಕೆ ಅಧ್ಯಕ್ಷ ನಿರ್ಮಲಾ ಶಿವಣಕರ್ ಗುರುಪೂಜೆ ನೇರವೇರಿಸಿದರು.

ಬಸವತತ್ವ ಪ್ರಸಾರ ಕೇಂದ್ರದ ಜಗನ್ನಾಥ ಕುಶನೂರೆ ಮಾತನಾಡಿ, ಇಷ್ಟಲಿಂಗ ಪೂಜೆ ಅವಶ್ಯಕ. ಇದರಿಂದ ನಮ್ಮ ಇಷ್ಟಾರ್ಥಗಳೆಲ್ಲ ಪೂರೈಸುತ್ತವೆ ಎಂದರು. ಶ್ರೀ ಬಸವೇಶ್ವರ ದೇವಸ್ಥಾನ ನಿರ್ದೇಶಕ ಅಶೋಕ ನಾಗರಾಳೆ, ಅಕ್ಕನ ಬಳಗದ ಸುಲೋಚನಾ ಮಾಮಾ, ನಿವೃತ್ತ ಶಿಕ್ಷಕ ಮಹಾದೇವಪ್ಪಾ ಇಜಾರೆ, ಹರಳಯ್ಯ ಸಮಾಜದ ಮೀನಾ ಜಾಧವ, ರಾಜಶೇಖರ ಬಿರಾದಾರ, ಗೌತಮ ಜಾಧವ, ಶಿವಕುಮಾರ ಬಿರಾದಾರ, ಗಣಪತಿ ಕಾಸ್ತೆ, ಸಂಜುಕುಮಾರ ಶಾಶೆಟ್ಟಿ, ಸರಸ್ವತಿ ಬಿರಾದರ ಪ್ರತಾಪೂರ, ವಿದ್ಯಾವತಿ ಶೇರಿಕಾರ, ಕವಿತಾ ರಾಜೋಳೆ, ಉಷಾ ಕನ್ನಾಡೆ, ಸಂತೋಷ ಮಡಿವಾಳ, ರೇಣುಕಾ ಹೋಗ್ತಾಪೂರೆ ಸೇರಿದಂತೆ ಇತರರಿದ್ದರು.

ಮಮತಾ ಭೂಸೆ ವಚನ ಗಾಯನ ಮಾಡಿದರೆ, ಸಂಗಮೇಶ ತೋಗರಖೇಡೆ ಸ್ವಾಗತಿಸಿ, ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *