‘ನಾಯಿ ನಂಬಿಕೆ ಪ್ರಾಣಿ, ಹಂದಿ ಸ್ವಚ್ಛ ಮಾಡುವ ಪ್ರಾಣಿ, ಕನ್ನೇರಿ ಸ್ವಾಮಿ ಒದರುವ ಪ್ರಾಣಿ’

ಬಸವಕಲ್ಯಾಣ

ಹಿಂದೂ ಧರ್ಮದ ಪ್ರಚಾರಕ ಎಂದು ಪೇಟೆಂಟ್ ಪಡೆದವನಂತೆ ಮಾತನಾಡುವ ಕನ್ನೇರಿ ಸ್ವಾಮಿ ಹೋದಲೆಲ್ಲಾ ಬಸವತತ್ವ ಪ್ರಚಾರಕರನ್ನು ಶಿಖಂಡಿ, ಹಂದಿ, ನಾಯಿ ಎಂಬ ಕೀಳು ಪದ ಬಳಸಿ ನಿಂದಿಸುತ್ತಿದ್ದಾನೆ.

ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಶರಣತತ್ವ ನಮ್ಮದು. ನಮ್ಮ ತತ್ವದಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕು ಇದೆ. ಅವುಗಳನ್ನು ರಕ್ಷಿಸುವ ಕರ್ತವ್ಯವೂ ನಮ್ಮದು. ಪ್ರಾಣಿಗಳಿಗೆ ಹೋಲಿಸಿ ಮಾತಾಡುವ ಕನ್ನೇರಿ ಸ್ವಾಮಿ ಪ್ರಾಣಿ ಪ್ರಪಂಚದ ದ್ವೇಷಿಯಾಗಿದ್ದಾನೆ.

ನಾಯಿ ನಂಬಿಕಸ್ತ ಪ್ರಾಣಿ, ಹಂದಿ ಊರು ಸ್ವಚ್ಛ ಮಾಡುವ ಪ್ರಾಣಿ, ಕನ್ನೇರಿ ಸ್ವಾಮಿ ಒದರುವ ಪ್ರಾಣಿ. ಆದ್ದರಿಂದ ನಾಯಿ ಹಂದಿಗಳಿಗಿಂತ ಕರಕಷ್ಟ ಇವನ ಮಾತುಗಳು.

ಮಹಾಭಾರತದಲ್ಲಿ ದುಷ್ಟ ಸ್ವಭಾವದ ವ್ಯಕ್ತಿ ಕೀಚಕ ಇದ್ದ. ಹಾಗೆ ಸಮಾಜದ ಸ್ವಾಸ್ಥ್ಯ ಹಾಳುಮಾಡುವ, ಪೂಜ್ಯರನ್ನು ನಿಂದಿಸುವ ಆಧುನಿಕ ಭಾರತದ ಕೀಚಕ ಕನ್ನೇರಿ ಸ್ವಾಮಿ.

ನಮ್ಮ ಜೊತೆ ಸೈದ್ಧಾಂತಿಕ ಮತ್ತು ತಾತ್ವಿಕ ಚರ್ಚೆಯನ್ನು ಮಾಡಲು ಅಸಮರ್ಥನಾಗಿರುವುದರಿಂದ ಈ ಅಯೋಗ್ಯ ಹೊಲಸು ಮಾತಾಡುತ್ತಿದ್ದಾನೆ. ಇಂತಹ ಕೊಳಕು ವ್ಯಕ್ತಿಯ ಜೊತೆ ನಾವು ಚರ್ಚೆಗೆ ಇಳಿವುದೆಂದರೆ ಮುಳ್ಳನ್ನು ಮೈ ಮೇಲೆ ಎರಚಿಕೊಂಡಂತೆ.

“ಅರಿಯದವರೊಡನೆ ಸಂಗವ ಮಾಡಿದೊಡೆ ಕಲ್ಲು ಹೊಸೆದು ಕಿಡಿಯ ಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿದೊಡೆ ಮೊಸರ ಹೊಸೆದು ಬೆಣ್ಣೆಯ ಕೊಂಬಂತೆ…” ಎನ್ನುವ ಅಕ್ಕಮಹಾದೇವಿ ವಚನದಂತೆ ದುಷ್ಟ ವ್ಯಕ್ತಿಗಳ ಜೊತೆ ಚರ್ಚೆ ಮಾಡುವಷ್ಟು ಸಮಯವೂ ನಮಗಿಲ್ಲ.

ತತ್ವ ತಿಳಿದವರ ಜೊತೆ ನಾವು ಚರ್ಚಿಸಲು ಸಿದ್ದ. ಆದರೆ ಇಂತಹ ಸಮಾಜಘಾತುಕ, ಬಾಯಿ ಹರಕ, ಧರ್ಮದ್ರೋಹಿ ಜೊತೆ ನಮ್ಮ ಚರ್ಚೆ ಇಲ್ಲ.

ಅಂತ್ಯ ಕಾಲದಲ್ಲಿ ದೀಪ ಜೋರಾಗಿ ಉರಿಯುವಂತೆ ಕನ್ನೇರಿ ಸ್ವಾಮಿಯು ಈಗ ಉರಿಯುತ್ತಿರುವನು. ಕನ್ನೇರಿ ಸ್ವಾಮಿಯಂಥ ಹುಚ್ಚನ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
1 Comment
  • ನಮ್ಮ ಉತ್ತರ ಕರ್ನಾಟಕದ ಕಡೆ ಈ ಕನ್ನೆರಿಗೆ ಸ್ವಾಮಿ ಹಂತವನಿಗೆ ಗಂಡು ಹಿಜಡಾ ಅಂತ ಕರೆಯುತ್ತಾರೆ ಇಂಥ ದುಷ್ಟ ಸ್ವಾಮಿಗೆ ಬಾಯಿಯಲ್ಲಿ ಚಪ್ಪಲಿ ಹಾಕಿ ಹೊಡಿಬೇಕು ನಾಲಾಯಕ್ ಹಂದಿಗಿಂತಲೂ ಕೀಳ ಇಂತಹ ಇವನಿಗೆ ಸ್ವಾಮಿ ಅನ್ನೋದೇ ತಪ್ಪು. ಹಳ್ಳಿಗಳಲ್ಲಿ ಮಾಟ ಮಂತ್ರ ಮಾಡುವಂತಹ ವ್ಯಕ್ತಿಗಳು ಹೆಂಗಿರ್ತರಲ್ಲ ಅಂತ ಮಾಟ ಮಂತ್ರ ಮಾಡುವ ಕನ್ನೆರಿ ಸ*****

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.