ಬೀದರ ರಾಷ್ಟ್ರೀಯ ಬಸವದಳದಿಂದ ಮಹಿಳಾ ದಿನಾಚರಣೆ

ರವಿ ಪಾಪಡೆ
ರವಿ ಪಾಪಡೆ

ಬೀದರ:

ಬೀದರಿನ ರಾಷ್ಟ್ರೀಯ ಬಸವದಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಯುವ ರಾಷ್ಟ್ರೀಯ ಬಸವದಳದ ಕಾರ್ಯಾಲಯದಲ್ಲಿ ರವಿವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಕ್ತಿ ತುಪ್ಪದ ಮಾತನಾಡುತ್ತ, ಹೆಣ್ಣು ಸಂಸಾರದ ಕಣ್ಣು ಹೆಣ್ಣಿನಿಂದಲೆ ಸಂಸಾರ. ಹೆಣ್ಣು ಅನೇಕ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಇವತ್ತು ಎಲ್ಲ ರಂಗಗಳಲ್ಲಿ ಹೆಣ್ಣು ಮುಂದೆ ಬಂದು, ಹೆಣ್ಣು ಅಬಲೆಯಲ್ಲ ಅವಳು ಸಬಲೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾಳೆ ಎಂದು ಹೇಳಿದರು.

ವಿಜ್ಞಾನದ ಜೊತೆಗೆ ಶರಣೆಯರ ಹೆಜ್ಜೆ ಗುರುತು ಎಂಬ ವಿಷಯದ ಬಗ್ಗೆ ಸಾಹಿತಿ ಶೈಲಜಾ ಹುಡಗೆ ಮಾತಾಡುತ್ತ, ೧೨ನೇ ಶತಮಾನದಲ್ಲಿದ್ದ ವಚನಕಾರ್ತಿಯರು ವಚನಗಳನ್ನು ರಚನೆ ಮಾಡಿ ಜಾಗತಿಕ ಸಾಹಿತ್ಯದ ಇತಿಹಾಸದಲ್ಲಿಯೇ ಅಪೂರ್ವವೆನಿಸಿದ ಕೀರ್ತಿಗೆ‌ ಭಾಜನರಾಗಿದ್ದಾರೆ. ವಚನಸಾಹಿತ್ಯ ಎಂದಾಕ್ಷಣ ಪುರುಷರಲ್ಲಿ ಬಸವಣ್ಣನವರದ್ದು, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿಯವರದ್ದು.

ಶರಣರ ವಚನಗಳಲ್ಲಿ ಸಸ್ಯ ವಿಜ್ಞಾನ, ಮಾನವೀಯ ವಿಜ್ಞಾನ, ನೈತಿಕ ವಿಜ್ಞಾನ, ಸಮಾಜ ವಿಜ್ಞಾನ, ಮನೋವಿಜ್ಞಾನ, ಪ್ರಾಕೃತಿಕ ವಿಜ್ಞಾನ ಹೇಗೆ ಮೇಳೈಸಿವೆ ಎಂಬುದನ್ನು ವಚನಗಳ ಉದಾಹರಣೆಯೊಂದಿಗೆ ವಿವರಿಸಿದರು.

ವಿದ್ಯಾವತಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗುರು ಬಸವಪೂಜೆಯನ್ನು ಮಲ್ಲಮ್ಮ ಪಾಟೀಲ ನಡೆಸಿಕೊಟ್ಟರು. ಸಂಗೀತಾ ಪಾಟೀಲ ಧ್ವಜಾರೋಹಣ ಮಾಡಿದರು. ಸಂಕಲ್ಪಾ ಶೆಟಕಾರ ವಚನ ಗಾಯನ ಮಾಡಿದರು. ಪೂರ್ಣಿಮಾ ಪಾಟೀಲ ಸ್ವಾಗತಿಸಿದರು. ಸುಮೀತಾ ಶೆಟಕಾರ ನಿರೂಪಣೆಯನ್ನು ಮಾಡಿದರು. ಪ್ರತಿಭಾ ಸಿರ್ಸೆ ಶರಣು ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕುಶಾಲರಾವ ಪಾಟೀಲ ಖಾಜಾಪೂರ, ಗುಂಡಪ್ಪ ಹುಡಗೆ, ಸಿದ್ದು ಶೆಟಕಾರ, ರವಿ ಪಾಪಡೆ, ಸಂಗಶೆಟ್ಟಿ ಶೆಟಕಾರ, ನಾಗಶೆಟ್ಟಿ ಶೆಟಕಾರ, ಶಂಕರಯ್ಯ ಸ್ವಾಮಿ, ಚಂದ್ರಶೇಖರ್ ತುಗಾ, ನಿರಂಕಾರ ತುಪ್ಪದ, ಸುಧೀರ ಬುಜ್ಜಿ, ಅರವಿಂದ  ಧುಮನಸೂರೆ, ವಿರಶೆಟ್ಟಿ ಪಾಟೀಲ, ಅರವಿಂದ ಕಾರಬಾರಿ, ಸಂಜು ಪಾಟೀಲ ಚೋಂಡಿ,  ಗಣೇಶ ಬಿರಾದಾರ, ಮಲ್ಲು ಶಟಕಾರ ಮತ್ತಿತರರು ಹಾಜರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *

ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಷ್ಟ್ರೀಯ ಬಸವ ದಳ