ಬಸವಣ್ಣದೇವರ ಮಠದ ವಚನ ಕಂಠಪಾಠ ಸ್ಪರ್ಧೆ ವಿಜೇತರ ಮೆರವಣಿಗೆ
ನೆಲಮಂಗಲ
ನಗರದ ಪವಾಡ ಬಸವಣ್ಣದೇವರ ಮಠದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೋಮವಾರ ಅಭಿನಂದನೆ ಸಲ್ಲಿಸಿ ನಗದು ಬಹುಮಾನ ನೀಡಲಾಯಿತು.
ಬಸವಣ್ಣ ದೇವರಮಠದಲ್ಲಿ ಬಸವ ಜಯಂತಿಯ ಅಂಗವಾಗಿ ನಡೆದ ವಚನಕಂಠ ಪಾಠ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾಗವಹಿಸಿದ್ದರು.

ಬಸವಣ್ಣದೇವರಮಠ ಪ್ರಖ್ಯಾತ ವಚನಕಂಠ ಪಾಠ ಸ್ಪರ್ಧೆಯಲ್ಲಿ ನಿರಂತರವಾಗಿ 1420 ವಚನಗಳನ್ನು ಹೇಳಿದ ಹಾಸನ ಜಿಲ್ಲೆಯ ಬೇಲೂರಿನ ನೀಲಾ ನಾಗಭೂಷಣ್ ಅವರಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು 1 ಲಕ್ಷ ಬಹುಮಾನ ನೀಡಿ ಗೌರವಿಸಿದರು.
ಕಲಬುರಗಿಯ ಚಿಮ್ಮನ್ ಚೂಡ್ ನ ಜಗದೀಶ್ ಮರಪಳ್ಳಿ 870 ವಚನಗಳನ್ನು ಹೇಳುವ ಮೂಲಕ 2ನೇ ಸ್ಥಾನ ಪಡೆದು 75 ಸಾವಿರ ರೂ. ಪಡೆದರೆ, ಬೆಳಗಾವಿಯ ರಾಯಭಾಗದ ಲತಾ ಶಿವಾನಂದ ಪಾಟೀಲ್ 852 ವಚನಗಳನ್ನು ಹೇಳುವ ಮೂಲಕ ತೃತೀಯ ಸ್ಥಾನ ಪಡೆದು 50 ಸಾವಿರ ಬಹುಮಾನ ಪಡೆದುಕೊಂಡರು.

845 ವಚನ ಹೇಳಿದ ಬೆಳಗಾವಿ ಸವದತ್ತಿಯ ಈರಮ ನಾಲ್ಕನೇ ಸ್ಥಾನ ಪಡೆದಿದ್ದು, 25 ಸಾವಿರ ನಗದು ಬಹುಮಾನ ನೀಡಿದರು.
836 ವಚನ ಹೇಳಿದ ವಿನಾಯಕ ಹಾಗೂ ಸವಿತಾ ಅವರಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದರ ಜತೆ 1,118 ವಚನಗಳನ್ನು ಹೇಳಿದ ಸ್ಥಾನ ಪಡೆದ ಲಾವಣ್ಯ ಅಂಗಡಿ ಗೌರವ ಧನ ನೀಡಲಾಯಿತು. ಲಾವಣ್ಯ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದ್ದರು.
ಈ ಬಾರಿಯ ಸ್ಪರ್ಧೆಯಲ್ಲಿ ಒಟ್ಟಾರೆ 15,705 ವಚನಗಳನ್ನು ಸ್ಪರ್ಧಿಗಳು ಕಂಠಪಾಠ ಮಾಡಿ ಹೇಳಿದ್ದಾರೆ. ದೇಶದಲ್ಲಿ ಇದೇ ದೊಡ್ಡ ವಚನ ಕಂಠಪಾಠ ಸ್ಪರ್ಧೆಯಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.

ಬಸವಣ್ಣನವರ ಜಯಂತಿಯಲ್ಲಿ ಮಾದರಿ ಕೆಲಸ ಮಾಡುವ ನಿಟ್ಟಿನಲ್ಲಿ ಆರಂಭವಾದ ವಚನ ಕಂಠಪಾಠ ಸ್ಪರ್ಧೆ ಇಂದು ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ವಚನಗಳ ಕಲಿಕೆಗೆ ಇದು ಪ್ರೋತ್ಸಾಹವಾಗಿದೆ, ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಮೆರವಣಿಗೆ
ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವ ಸಲ್ಲಿಸುವ ಜತೆ ಬಸವಣ್ಣ ಜಯಂತಿಯ ಉತ್ಸವದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಅವರನ್ನು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ಮಾಜಿ ಶಾಸಕ ಎಂ.ವಿ. ನಾಗರಾಜು, ಎನ್ಪಿಎ ಅಧ್ಯಕ್ಷಎಂ. ಕೆ. ನಾಗರಾಜು, ಮಾಜಿ ಅಧ್ಯಕ್ಷ ಮಲ್ಲಯ್ಯ, ನಗರಸಭೆ ಸದಸ್ಯ ಸಿ. ಪ್ರದೀಪ್ ಸೇರಿದಂತೆ ಮತ್ತಿತರರಿದ್ದರು.

ಶರಣೆ ನೀಲಾ ನಾಗಭೂಷಣ್ ಅವರು 1420 ವಚನಗಳನ್ನು ಹೇಳಿದ್ದು ಒಂದು ಹೊಸ ದಾಖಲೆ, ಅವರಿಗೂ ಮತ್ತು ಇಂತಹ ಕಾರ್ಯಕ್ರಮ ಆಯೋಜಿಸಿದ ಪೂಜ್ಯರಿಗೂ ಶರಣು ಶರಣಾರ್ಥಿಗಳು. ಇನ್ನು ಮುಂದೆ ಈ ವಚನ ಸ್ಪರ್ಧೆ ಇದೊಂದು ದಾಖಲೆಯಾಗಲಿದೆ
ಶರಣೆ ನೀಲಾ ನಾಗಭೂಷಣ್ ಅವರಿಗೆ ಶರಣು ಶರಣಾರ್ಥಿಗಳು
ಅಕ್ಕವರಿಗೆ ಅಭಿನಂದನೆಗಳು
ರಾಷ್ಟ್ರೀಯ ಮಟ್ಟದಲ್ಲಿ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಿ ದೊಡ್ಡ ಮೊತ್ತದ ಬಹುಮಾನಗಳ ನೀಡಿ ಪ್ರೋತ್ಸಾಹಿಸುವ ಉದಾರ ಮನೋಭಾವ ಹೊಂದಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ನನ್ನ ಶರಣು ಶರಣಾರತಿ.
ನೀಲಾ ನಾಗಭೂಷಣ್ ನನ್ನ ಸಹೋದರಿ ಎಂದು ಹೇಳಿಕೊಳ್ಳಲು ಅತೀವ ಆನಂದವಾಗುತ್ತಿದೆ. ಶರಣೆ ನೀಲಳಿಗೆ ಅಭಿನಂದನೆಗಳು 💐🙏
She is an inspiration to the new generation
wish we see that on you tube regularly