ಪಂಚಪೀಠ ಗುರುಗಳು, ವಿರಕ್ತ ಮಠದ ಸ್ವಾಮೀಜಿಗಳು ಒಂದಾಗಲಿ: ಎಂ. ಬಿ. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

“ಸಚಿವ ಎಂ.ಬಿ.ಪಾಟೀಲ ಸಿಎಂ ಆಗಲು ಪಂಚಪೀಠಗಳು ಕರುಣಿಸಬೇಕು.”

ವಿಜಯಪುರ

ಪಂಚಪೀಠದ ಗುರುಗಳು ಹಾಗೂ ವಿರಕ್ತಮಠದ ಸ್ವಾಮೀಜಿಗಳು ಒಂದಾಗಬೇಕು. ಸ್ವಾಮೀಜಿಗಳು ಒಂದಾದರೇ ನಾವೆಲ್ಲರೂ ಒಂದಾಗಿ ಬಿಡುತ್ತೇವೆ, ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶನಿವಾರ ಹೇಳಿದರು.

ನಗರದ ಸುರಭಿ ನಗರದಲ್ಲಿ ನಡೆದ ರಂಭಾಪುರಿ ಪೀಠದ ಶಾಖಾಮಠದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು, “ನಾನು ಈ ಹಿಂದೆ ಲಿಂಗಾಯತ ಧರ್ಮದ ಬಗ್ಗೆ ಹೋರಾಟ ಮಾಡಿದ್ದೇನೆ. ನಮ್ಮಲ್ಲಿ ಆಚರಣೆ ಬೇರೆ ಇರಬಹುದು. ಆದರೆ, ಉದ್ದೇಶ ಒಂದೇ ಇರುತ್ತದೆ.

ಒಬ್ಬರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ ಇನ್ನೊಬ್ಬರು ದಯವೇ ಧರ್ಮದ ಮೂಲ ಮತ್ತು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆಯನ್ನಿರಿಸಿದ್ದಾರೆ. ಹೀಗಾಗಿ ವ್ಯತ್ಯಾಸ ಏನೇ ಇದ್ದರೂ ಸಾಮಾನ್ಯ ತತ್ವದಡಿ ಪಂಚಪೀಠ ಹಾಗೂ ವಿರಕ್ತಮಠ ಎಲ್ಲವೂ ಒಂದಾಗಲಿ,” ಎಂದು ಮನವಿ ಮಾಡಿದರು.

ನಾನು ಯಾವುದೇ ರಾಜಕೀಯ ಉದ್ದೇಶದಿಂದ ರಂಭಾಪುರಿ ಪೀಠ ಶಾಖಾ ಮಠದ ಸ್ಥಾಪಿಸಲು ನೆರವಾಗಿಲ್ಲ. ನಾನು ಈ ಹಿಂದೆಯೇ ಮಾತುಕೊಟ್ಟಿದ್ದೆ. ಅದರಂತೆ ಮಾಡಿದ್ದೇನೆ. ವಿಜಯಪುರದಲ್ಲಿ ಸುಂದರವಾದ ಶಾಖಾ ಮಠ ನಿರ್ಮಾಣ ಮಾಡಲು ಸಹಕಾರ ಮಾಡುತ್ತೇನೆ,. ಈ ಐತಿಹಾಸಿಕ ಶಾಖಾ ಮಠವು ವಿಜಯಪುರ ಜಿಲ್ಲೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿಯಲಿದೆ, ಎಂದು ಹೇಳಿದರು.

ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಗುರುವಿರಕ್ತರ ಜೊತೆ ಒಂದಾಗಲು ರಂಭಾಪುರಿ ಪೀಠ ಮೊದಲ ಸ್ಥಾನದಲ್ಲಿ ಇರುತ್ತದೆ, ಎಂದು ಹೇಳಿದರು.

ಆಂತರಿಕವಾಗಿ ಸಮಸ್ಯೆ ಇದೆ ಎಂದು ಎಂ.ಬಿ. ಪಾಟೀಲ ಹೇಳಿರೋದು ಸತ್ಯ. ಗುರು ವಿರಕ್ತ ಒಂದಾಗಬೇಕು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಪಂಚಾಚಾರ್ಯರು ಹಾಗೂ ವಿರಕ್ತರನ್ನು ಒಂದಾಗಿಸುವ ಕೆಲಸ ಅವರು ಮಾಡಲಿ. ಆಚಾರ್ಯರು ಹಾಗೂ ಬಸವಾದಿ ಶರಣರು ಹೇಳಿರುವುದು ಒಂದೇ. ವೀರಶೈವ ಲಿಂಗಾಯತ ಒಂದಾಗಿ ಕೆಲಸ ಮಾಡಿದರೆ ನಮ್ಮ ಶಕ್ತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಈ ಭಾಗದಲ್ಲಿ ಮಠ ಬೇಕೆಂದು ಅಭಿಲಾಷೆ ಇತ್ತು. ಭಕ್ತರ ಅಭಿಲಾಷೆಯನ್ನು ಎಂ.ಬಿ.ಪಾಟೀಲರು ಮಾಡಿದ್ದಾರೆ. ಈ ಕಾರ್ಯಕ್ರಮ ಮಾಡಿರುವುದು ಭಕ್ತರಿಗೆ ಸಂತಸ ತಂದಿದೆ, ಎಂದರು.

ಎಂ.ಬಿ.ಪಾಟೀಲ ಸಿಎಂ

ಸಚಿವ ಎಂ.ಬಿ.ಪಾಟೀಲರಲ್ಲಿ ಸಿಎಂ ಆಗುವ ಸಾಮರ್ಥ್ಯವಿದೆ. ಅವರು ಸಿಎಂ ಆಗಲು ಪಂಚಪೀಠಗಳು ಕರುಣಿಸಬೇಕು ಎಂದು ವಿಜಯಪುರ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹಾಗೂ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚ೦ದ್ರ ಶೇಖರ ಶಿವಾಚಾರ್ಯರು ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ಮಹಾದೇವ ಶಿವಾಚಾರ್ಯರು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಯರನಾಳದ ಸಂಗನಬಸವ ಸ್ವಾಮೀಜಿ, ಕೋಲ್ಹಾರದ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ರಾಜು ಆಲಗೂರ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಪೊಲೀಸ್ ಅಧಿಕಾರಿ ಚೌಕಿಮಠ, ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಬಿಎಲ್‌ಡಿಇ ಸಂಸ್ಥೆ ಕುಲಪತಿ ಬಸನಗೌಡ ಎಂ. ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
14 Comments
  • ಬಾಳೆ ಹೊಣ್ಣೂರಿನ ರಂಭಾಪುರಿ ಪೀಠ ಸ್ಥಾಪನೆ ಕುರುಬರ ರೇವಣ ಸಿದ್ದರು ಸ್ಥಾಪಿಸಿದರು ಅನ್ನುತ್ತಾರೆ.
    ಅದನ್ನು ಅದರ ಶಾಖೆಗಳನ್ನು ಹಾಲುಮತದವರಿಗೆ ಕೊಡಬೇಕಾಗಿ ಬಂದರೆ, ವೀರಶೈವರ ಸ್ಥಾನ ಎಲ್ಲಿದೆ?

    • ಪಂಚಪೀಠದವರು ಎಂದೂ ಬಸವಣ್ಣನವರನ್ನು ಲಿಂಗಾಯತ ಧರ್ಮ ಗುರು ಎಂದು ಒಪ್ಪುವುದಿಲ್ಲ.

      1) ಆ ಕಾರಣಕ್ಕಾಗಿ ಪಂಚಪೀಠದವರು ಮತ್ತು ವಿರಕ್ತರು ಎಂದೂ ಒಂದಾಗುವುದಿಲ್ಲವೆಂಬುದು ಎಂ ಬಿ ಪಾಟೀಲರಿಗೆ ಶೇ 100 ರಷ್ಟು ಗೊತ್ತಿರುವ ಸಂಗತಿ.
      2) ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ಪಡೆಯಲು ಕೇವಲ ಶೇ 3 ರಷ್ಟಿರುವ ಪಂಚಪೀಠದವರ ಬೆಂಬಲದ ಅಗತ್ಯವು ಇಲ್ಲವೆಂಬುದೂ ಅವರಿಗೆ ಗೊತ್ತು. ಅದಕ್ಕೆ ಬೇಕಿರುವುದು ಉಳಿದ ಲಿಂಗಾಯತ ಒಳಪಂಗಡಗಳ ಒಗ್ಗೂಡುವವಿಕೆ ಮಾತ್ರ.

      ಹಾಗಿದ್ದೂ ಪಂಚಪೀಠ ಮತ್ತು ವಿರಕ್ತರನ್ನು ಒಂದಾಗಿಸುವ ಪ್ರಯತ್ನವಾಗಿ ವಿಜಾಪುರದಲ್ಲಿ ಪಂಚಪೀಠದವರ ಶಾಖಾಮಠ ತೆರೆಯಲು ಬೆಂಬಲಿಸುತ್ತಿದ್ದೇನೆಂದು ಎಂ ಬಿ ಪಾಟೀಲರು ಹೇಳುತ್ತಿರುವುದು ಕೇವಲ ಬೂಟಾಟಿಕೆಯ ಮಾತು. ಪಂಚಪೀಠದವರು ಮತ್ತು ಅವರ ಮುಖೇನ RSS ನವರನ್ನು ಮನವೊಲಿಸುವುದು ಮುಖ್ಯಮಂತ್ರಿ ಕುರ್ಚಿ ಹಿಡಿಯಲು ಅನುಕೂಲಕರವೆಂಬುದು ಎಂ ಬಿ ಪಾಟೀಲರ ಲೆಕ್ಕಾಚಾರವೆ ಹೊರತು ಶತಾಯಗತಾಯ ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ಪಡೆಯಬೇಕೆಂಬುದು ಅವರ ಗುರಿಯಲ್ಲ.

      ಇಂತಹ ಧರ್ಮ ದ್ರೋಹಿಗಳನ್ನು ನಂಬಬಾರದು. JLM ನವರು ಇವರನ್ನು ಅವಲಂಬಿಸುವುದು, ಬೆಂಬಲಿಸುವುದು ಒಳ್ಳೆಯದಲ್ಲ. ಇಂತಹವರ ನೆರವಿಲ್ಲದೆ(ಆರ್ಥಿಕ,ರಾಜಕೀಯ) ಮುನ್ನೆಡೆಯುವುದನ್ನು ರೂಢಿಸಿಕೊಳ್ಳಬೇಕಷ್ಟೆ.

      • ರಾಜಕಾರಣಿಗಳಿಗೆ ಎಲ್ಲರೂ ಬೇಕು. ಈ ನೀಚ ಪೀಠಾಧೀಶರು ವೋಟ್ ಗಳನ್ನು ಒಡೆದು ಬೇರೆಯವರಿಗೆ ಹಾಕಲು ಹೇಳುತ್ತಾರೆ. ಅನ್ನುವ ಭಯದಿಂದ ಇವರಿಗೆ ಬೆಂಬಲ ಮಾಡಿರುತ್ತಾರೆ.
        ಕುರುಬರ ಪೀಠ, ಕುರುಬರಿಗೆ ಮರಳಿ ಪಡೆಯಲು ಬೆಂಬಲ ಮಾಡಿರಿ, ಕುರುಬ ರನ್ನು ಹುರುದು ಬಿಸಿರಿ. ಸಾಕು, ಕಳ್ಳತನದ ಅಸ್ತಿತ್ವ ಹೊರಟು ಹೋಗಲಿ.

  • ಎಂ ಬಿ ಪಾಟೀಲರು ತಪ್ಪು ಮಾಡಿದರು. ಅವರು ಬಸವಣ್ಣನವರನ್ನು ಧರ್ಮಗುರು ಅಂತ ಒಪ್ಪಲ್ಲ. ಗು-ವಿ ಒಂದಾಗಲ್ಲ.

  • ಪಂಚಪೀಠಗಳ ಸ್ವಾಮಿಗಳು ಬಸವಣ್ಣನವರು ಲಿಂಗಾಯತ ಧರ್ಮ ಸಂಸ್ಥಾಪಕರು ಎಂದು ಒಪ್ಪಿಕೊಂಡರೆ ಒಂದು ಆದಂತೆಯೆ, ಇದನ್ನು ಅರ್ಥ ಮಾಡಿಕೊಳ್ಳಬೇಕು

  • ವೈರ್ ಮರ್ತು ಒಂದಾದ್ರು ಅಂದ್ರೆ ಎಲ್ಲ ಇವ್ರೇ ಆಗುವದರಲ್ಲಿ ಯಾವ ಅನುಮಾನ ಬೇಡ. ಸಹಾಯ ಸಾಕಾರ ಸಹಕಾರ ಇದ್ದರೆ ರಾಜ್ಜ್ಯ ಆಳಬಹುದು ದೇಶ ಆಳಲು ಬಹುದು. ಲಿಂಗಾಯತ ಧರ್ಮ ಇಬ್ಬರಿಗೂ ಬೇಕು. ಕೇವಲ ಮೀಸಲಾತಿ ಹೋರಾಟ ಮಾಡದೆ ಧರ್ಮದ ರಕ್ಷಣೆ ಮಾಡಿ. ಹೋರಾಟ ಬಿಟ್ಟು ಇಷ್ಟ ಪಟ್ಟು ಲಿಂಗಾಯತ ಧರ್ಮದ ನಿಷ್ಠೆ ಮಾಡಿ ಬೆಳಿಸಿ ಉಳಿಸಿ 👏🏻ಶರಣು 👏🏻

  • 2017 ರಿಂದ ಇಲ್ಲಿಯವರೆಗೂ ಪಂಪೀಗಳು ಲಿಂಗಾಯತರ ವಿರುದ್ಧ ನಡೆದುಕೊಂಡೇ ಬಂದಿದ್ದಾರೆ ಬರುತ್ತಿದ್ದಾರೆ…ನಮ್ಮ ಗುರುಗಳು ಕಲ್ಲಿನಿಂದ ಎದ್ದು ನಿಂತು ಆಕಾಶ ಮಾರ್ಗವಾಗಿ ಎಲ್ಲೆಡೆ ಸಂಚರಿಸಿದ್ದಾರೆ ಎಂಬ ರೈಲು ರೀಲು ರೀಲಾಗಿ ಅಂದಿನಿಂದ ಇಂದಿನವರೆಗೂ ಓಡುತ್ತಲೇ ಇದೆ! ಬಸವಣ್ಣನನ್ನು ಗುರು ಎಂದು ಒಪ್ಪದ ಇವರಿಗೆ ವಿರಕ್ತರಲ್ಲಿ ಒಂದಾಗಿ ಬೆರೆಯುವ ರಕ್ತದ ಗುಣವೇ ಇಲ್ಲ. ತಾವು ಪಾತಾಳಕ್ಕೆ ಳಿದಿರುವಾಗ ಲಿಂಗಾಯತರ ಜುಟ್ಟು ಹಿಡಿದುಕೊಂಡು ಬದುಕುಳಿಯುವ ಹುನ್ನಾರ ಇವರದು ಎಂದು ಲಿಂಗಾಯತರಿಗೆ ಗೊತ್ತಿದೆ. ಹಿಡಿದ ದೊಣ್ಣೆ ಕಮಂಡಲಗಳನ್ನೆಲ್ಲ ಬಿಸಾಕಿ ನಿರ್ಮಲ ಭಾವದಿಂದ ಬಸವಣ್ಣನೇ ನಮ್ಮ ಧರ್ಮಗುರು..ಲಿಂಗಾಯತ ಕಾರ್ಯಕ ಪಂಗಡಗಳಲ್ಲಿ ತಟ್ಟೆ ಹಿಡಿದು ಗಂಟೆ ಬಾರಿಸುವ ನಾವು ಬಸವಣ್ಣನನ್ನು ಬೆಳಗಿಸುವವರು ಎಂದು ಕೇವಲ ನಾಲಿಗೆಯಿಂದಲ್ಲ…. ಹ್ರುದಯಾಂತರಾಳದಿಂದ ನುಡಿದುವಿರಕ್ತರ ಪಾದ ಹಿಡಿದು ಬಸವ ಕೃಪೆಗಾಗಿ ಭಿನ್ನವಿಸಲಿ! ಅಣ್ಣ ಒಪ್ಪುತ್ತಾನೋ ಬಿಡುತ್ತಾನೋ ಆನಂತರದ ಮಾತು ಅಷ್ಟೇ!

  • ಬಸವ ಧರ್ಮ ತತ್ವ ಸಿದ್ಧಾಂತ ಒಪ್ಪಿಕೊಂಡು ಬರುವದಾದರೆ ಬರಲಿ.

  • ಅಧಿಕಾರಕ್ಕಾಗಿ ಧರ್ಮನಾಶಮಾಡಲು ಹೊರಟಿದ್ದಾರೆ ಎಂ.ಬಿ. ಪಾಟೀಲರು. ಬಸವಾನುಯಾಯಿಗಳ ನಿಷ್ಠೆ ಕೆಣಕಿದ್ದಾರೆ. ಯಾರು ವಚನಸಾಹಿತ್ಯ ಸಂರಕ್ಷಿಸಿ ಬಸವಾದಿ ಶರಣರ ವಿಚಾರವನ್ನು ಜಗತ್ತಿಗೆ ತಿಳಿಯಲು, ಲಿಂಗಾಯತ ಧರ್ಮ ಉಳಿಯಲು ಕಾರಣಕರ್ತರಾದ ಫ ಗುಹಳಕಟ್ಸಿ ಸಂಸ್ಥೆಯ ಮುಖ್ಯಸ್ಥರಾಗಿ ಫ.ಗು.ಹಳಕಟ್ಟಿಯವರಿಗೂ ದ್ರೋಹ ಬಗೆದಂತೆ. ಇಲ್ಲಿಯ ವರೆಗು ಅವರ ಧರ್ಮ ನಿಷ್ಠೆ, ತತ್ವ ನಿಷ್ಠೆ ಹುಸಿ.

  • ವೀರಶೈವ ಮತ್ತು ಲಿಂಗಾಯತ ಮಠಗಳು ಮಾರ್ಗದರ್ಶನ ಮಾಡಿ ಸಮಾಜವನ್ನು ಒಂದು ಮಾಡದೆ ಹೋದರೆ ಇಬ್ಬರಿಗೂ ಉಳಿಗಾಲ ಇಲ್ಲ

  • ಪಂಚಪೀಠದವರು ಎಂದೂ ಬಸವಣ್ಣನವರನ್ನು ಲಿಂಗಾಯತ ಧರ್ಮ ಗುರು ಎಂದು ಒಪ್ಪುವುದಿಲ್ಲ.

    1) ಆ ಕಾರಣಕ್ಕಾಗಿ ಪಂಚಪೀಠದವರು ಮತ್ತು ವಿರಕ್ತರು ಎಂದೂ ಒಂದಾಗುವುದಿಲ್ಲವೆಂಬುದು ಎಂ ಬಿ ಪಾಟೀಲರಿಗೆ ಶೇ 100 ರಷ್ಟು ಗೊತ್ತಿರುವ ಸಂಗತಿ.
    2) ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ಪಡೆಯಲು ಕೇವಲ ಶೇ 3 ರಷ್ಟಿರುವ ಪಂಚಪೀಠದವರ ಬೆಂಬಲದ ಅಗತ್ಯವು ಇಲ್ಲವೆಂಬುದೂ ಅವರಿಗೆ ಗೊತ್ತು. ಅದಕ್ಕೆ ಬೇಕಿರುವುದು ಉಳಿದ ಲಿಂಗಾಯತ ಒಳಪಂಗಡಗಳ ಒಗ್ಗೂಡುವವಿಕೆ ಮಾತ್ರ.

    ಹಾಗಿದ್ದೂ ಪಂಚಪೀಠ ಮತ್ತು ವಿರಕ್ತರನ್ನು ಒಂದಾಗಿಸುವ ಪ್ರಯತ್ನವಾಗಿ ವಿಜಾಪುರದಲ್ಲಿ ಪಂಚಪೀಠದವರ ಶಾಖಾಮಠ ತೆರೆಯಲು ಬೆಂಬಲಿಸುತ್ತಿದ್ದೇನೆಂದು ಎಂ ಬಿ ಪಾಟೀಲರು ಹೇಳುತ್ತಿರುವುದು ಕೇವಲ ಬೂಟಾಟಿಕೆಯ ಮಾತು. ಪಂಚಪೀಠದವರು ಮತ್ತು ಅವರ ಮುಖೇನ RSS ನವರನ್ನು ಮನವೊಲಿಸುವುದು ಮುಖ್ಯಮಂತ್ರಿ ಕುರ್ಚಿ ಹಿಡಿಯಲು ಅನುಕೂಲಕರವೆಂಬುದು ಎಂ ಬಿ ಪಾಟೀಲರ ಲೆಕ್ಕಾಚಾರವೆ ಹೊರತು ಶತಾಯಗತಾಯ ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ಪಡೆಯಬೇಕೆಂಬುದು ಅವರ ಗುರಿಯಲ್ಲ.

    ಇಂತಹ ಧರ್ಮ ದ್ರೋಹಿಗಳನ್ನು ನಂಬಬಾರದು. JLM ನವರು ಇವರನ್ನು ಅವಲಂಬಿಸುವುದು, ಬೆಂಬಲಿಸುವುದು ಒಳ್ಳೆಯದಲ್ಲ. ಇಂತಹವರ ನೆರವಿಲ್ಲದೆ(ಆರ್ಥಿಕ,ರಾಜಕೀಯ) ಮುನ್ನೆಡೆಯುವುದನ್ನು ರೂಢಿಸಿಕೊಳ್ಳಬೇಕಷ್ಟೆ.

  • ಗುರುಗಳು – ವಿರಕ್ತ ಸ್ವಾಮೀಜಿಗಳು ಒಂದಾಗುವುದು ಎಂದರೆ ಏನು? ಮತ್ತು ಹೇಗೆ? ಅಂತ ತಿಳಿಸಿದರೆ ಒಳ್ಳೆಯದು. ನಾವೆಲ್ಲಾ ಒಂದಾಗಿದ್ದೇವೆ ಅಂತ ಸಭೆ ಸಮಾರಂಭಗಳಲ್ಲಿ ಒಂದೇ ತರಹದ ಕುರ್ಚಿಗಳಲ್ಲಿ ಕುಳಿತರೆ ಮುಗಿಯಿತಾ, ಒಂದಾಗಿದ್ದೇವೆ ಅಂತ ಜೊತೆಯಲ್ಲಿ ಫೋಟೋ ತೆಗೆಕೊಂಡರೆ ಆಯ್ತಾ, ಆ ಜೊತೆಯಾಗುವ ಕ್ರಮದ ಬಗ್ಗೆ ದಯವಿಟ್ಟು ವಿವರಿಸಿ.

    ಗುರು ಪರಂಪರೆಯವರು ಬಸವಣ್ಣನನ್ನು ಧರ್ಮ ಗುರು ಅಂತ ಒಪ್ಪಿಕೊಳ್ಳುತ್ತಾರಾ? ಲಿಂಗಾಯತ ಸ್ವತಂತ್ರವಾದ ಧರ್ಮ ಅಂತ ಒಪ್ಪಿಕೊಂಡು ಸ್ವತಂತ್ರ ಧರ್ಮದ ಮಾನ್ಯತೆಗೆ ಬೆಂಬಲ ಕೊಡುತ್ತಾರಾ? ಸಾವಿರಾರು ವರ್ಷಗಳ ಇತಿಹಾಸವಿದೆ, ವೀರಶೈವವು ಹಿಂದೂ ಧರ್ಮದ ಅವೈಭಜ್ಯ ಅಂಗ ಅನ್ನುವುದನ್ನು ಬಿಟ್ಟುಕೊಡುತ್ತಾರಾ? ಬಹುದೇವತಾ ಆರಾಧನೆಯನ್ನು ತೊರೆದು ಇಷ್ಟಲಿಂಗ (ಏಕದೇವೋಪಸನೆಗೆ ) ಕ್ಕೆ ಏಕೈಕ ದೇವರು ಎಂಬ ಸ್ಥಾನವನ್ನು ಒಪ್ಪುತ್ತಾರಾ ) ಮಡಿ ಮೈಲಿಗೆ ಬಿಟ್ಟುಕೊಡುತ್ತಾರಾ? ಲಿಂಗಾಯತರಲ್ಲೇ ಬ್ರಾಹ್ಮಣ ಸ್ಥಾನಮಾನ ಅವರಿಗೆ ಇರಬೇಕು ಅನ್ನುವ ಅವರ ಪ್ರತಿಷ್ಠೆಯ ವಿಷಯವನ್ನು ಬಿಟ್ಟುಕೊಟ್ಟು ಸಾಮಾನ್ಯ ಲಿಂಗಾಯತ ಆಗಲು ತಯಾರಿದ್ದಾರಾ? ಅಥವಾ ವೀರಶೈವವು ಲಿಂಗಾಯತ ಧರ್ಮದಲ್ಲಿ ಉಪಪಂಗಡ ಅನ್ನುವುದನ್ನು ಒಪ್ಪಿಕೊಳ್ಳುತ್ತಾರಾ? ಹೀಗೆ ಉತ್ತರವೇ ಇಲ್ಲದ ಹತ್ತಾರು ಪ್ರಶ್ನೆಗಳಿದ್ದಾವೆ.

    ಅಥವಾ ಬಸವಣ್ಣ ಮತ್ತು ಶರಣರ ಹನ್ನೆರಡನೇ ಶತಮಾನದ ಕ್ರಾಂತಿಕಾರಕ ದೇವರು (ಇಷ್ಟಲಿಂಗ), ಕಾಯಕ ಮತ್ತು ದಾಸೋಹದಂತಹ ಪರಿಕಲ್ಪನೆಗಳ ಮೂಲಕ ಶೂದ್ರಾತಿ ಶೂದ್ರರು, ಕಸುಬುದಾರರು, ಮತ್ತು ಸಮಾಜದಲ್ಲಿ ಯಾವುದೇ ಗುರುತು ಮತ್ತು ಸ್ಥಾನಮಾನ ಇಲ್ಲದವರಿಗೆ ಸಮಾಸಮಾಜದ ಪರಿಕಲ್ಪನೆಯನ್ನು ಕೊಟ್ಟು ಎಲ್ಲರನ್ನೂ ಅಪ್ಪಿಕೊಳ್ಳುವ ವಾತಾವರಣ ಸೃಷ್ಟಿಮಾಡಿ, ಕಾಯಕವನ್ನು (ಯಾವುದೇ ಕಾಯಕವಾಗಲಿ) ದೈವತ್ವಕ್ಕೆ ಏರಿಸಿ ಕ್ರಾಂತಿಯನ್ನೇ ಮಾಡಿದ ಬಸವಣ್ಣ ಮತ್ತು ಶರಣರ ಸ್ಥಾನದಲ್ಲಿ ನಾವು ಗುರು – ವೀರಕ್ತರಿಗೆ ಸಮೀಕರಿಸಿಕೊಂಡು ಭಜನೆ ಮಾಡಿಕೊಂಡು ಇರುವುದಾ? ಬಿಡಿಸಿ ಹೇಳಬೇಕು.

    ಅಥವಾ ಒಂದಾಗುವುದು ಎಂದರೆ ರಾಜ್ಯದಲ್ಲಿ ರಾಜಕೀಯ ಅಧಿಕಾರ ಹಿಡಿಯುವುದಾ? ಹೀಗೆ ಪ್ರಶೆಗಳ ಮಹಾಪೂರವೇ ಹರಿಯುತ್ತದೆ. ಧರ್ಮ ಎಂದರೆ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವುದಾ? ಏನೂ ಅರ್ಥವಾಗುತ್ತಿಲ್ಲ.

  • ಒಂದಾಗಬೇಕು ಎಂದವರು ಒಂದು ಮಾಡಿಸಬೇಕು ಎನ್ನುವವರಿಗೆ ವಿನಂತಿ ಏನೆಂದರೆ ?ಮೊದಲು ಬಸವಣ್ಣ ನಮ್ಮ ಧರ್ಮಗುರು ವಚನಸಾಹಿತ್ಯ ನಮ್ಮ ಧರ್ಮಗ್ರಂಥ ಎಂದು ಬಹಿರಂಗವಾಗಿ ಹೇಳಲಿ .ಅದರಂತೆ ವಚನಗಳು ಹೇಳಿದ ಹಾಗೆ ನಡೆ ನುಡಿ ಒಂದಾದಲ್ಲಿ ಮಾತ್ರ ಲಿಂಗಾಯತ ವೀರಶೈವ ಒಂದಾಗಲು ಸಾಧ್ಯ.ಲಿಂಗಾಯತ ಮೊದಲು ನಂತರ ವೀರಶೈವ=ಲಿಂಗಾಯತ ವೀರಶೈವ ಎಂದಾದಲ್ಲಿ ಮಾತ್ರ ಒಂದಾಗಿರಲು ಸಾಧ್ಯ.ಲಿಂಗಾಯತ ಧರ್ಮ ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿದ ಧರ್ಮ ಸತ್ಯ.ಲಿಂಗಾಯತ ಧರ್ಮಗುರು ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ ಸತ್ಯ.ಧರ್ಮ ಗುರುವಿಗೆ ಮಾದಲಾಂಬಿಕೆ ಮಾದರಸ ಎಂಬ ತಂದೆ ತಾಯಿ ಇರುವುದು ಸತ್ಯ .ವಚನ ಸಾಹಿತ್ಯ ಲಿಂಗಾಯತ ಧರ್ಮ ಗ್ರಂಥ ಎಂಬುದು ಸತ್ಯ.ಲಿಂಗಾಯತದಲ್ಲಿ ಯಾವುದೂ ಕಾಲ್ಪನಿಕವಲ್ಲ. ಲಿಂಗಾಯತಕ್ಕೆ ಇತಿಹಾಸ ಮತ್ತು ನಿಖರವಾದ ಈಶ್ವಿಗಳಿವೆ.ಎಂ ಬಿ ಪಾಟೀಲ್ ಮುಖ್ಯಮಂತ್ರಿ ಆಗೊಕೆ ಧರ್ಮಕ್ಕೂ ಏನು ಸಂಬಂಧ.ಯಾರೊ ಬೀಸಿದ ಬಲೆಗೆ ಲಿಂಗಾಯತ ಧರ್ಮ ಸಿಲುಕುವುದಿಲ್ಲಾ.ಈ ಹಿಂದೆ ಲಿಂಗಾಯತ ಧರ್ಮ ತುಳಿಯಬೇಕು ಎಂದವರಿಗೆ ಸಾಧ್ಯವಾಗಿಲ್ಲ್ಲ.ಕಾರಣ ಲಿಂಗಾಯತ ಧರ್ಮ ಕಾಲ್ಪನಿಕ ಧರ್ಮವಲ್ಲ.ಬಸವಾದಿ ಶರಣರಿಂದ ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿದ ಸತ್ಯ ಧರ್ಮ.ಇವೆಲ್ಲವನ್ನೂ ಒಪ್ಪಿಕೊಂಡಾಗ ಮಾತ್ರ ಲಿಂಗಾಯತ ವೀರಶೈವ ಒಂದಾಗಿರಲು ಸಾಧ್ಯ
    ಶರಣು ಶರಣಾರ್ಥಿಗಳು 🙏🙏

  • ಎಷ್ಟು ಮಾತನಾಡಿದರೂ ಒಂದೇ. ಮೊದಲು ಅವರು ಗುರು ವಿರಕ್ತ ಭೇದ ಬಿಡಬೇಕು. ಧರ್ಮಗುರು ಬಸವಣ್ಣ ಮಾತ್ರ ಗುರು. ಪಂಚಪೀಠದವರು ಬಸವಣ್ಣನವರನ್ನು ಧರ್ಮಗುರುವೆಂದು ಒಪ್ಪಿ ವೖಧಿಕ ಪರಂಪರೆಯ ಆಚರಣೆಗಳನ್ನು ಬಿಟ್ಟರೆ ಅವರಿಗೆ ದಾರಿ ಸುಗಮವಾಗಿದೆ. ಅನ್ಯಥಾ ನಾವು ಜಂಗಮರು, ಅಯ್ಯನವರು, ನಾವು ಮೇಲು ಎನ್ನುವದಾದರೆ ಅದು ಹೇಗೆ ಒಂದಾಗಲು ಸಾಧ್ಯ? ವೀರಶೈವ ಅನ್ನುವದೇ ಈ ಪಂಗಡಕ್ಕೆ. ಅದರಲ್ಲಿ ಈಗಾಗಲೇ ಎಷ್ಟೋ ಜನರು ಬಸವತತ್ವವನ್ನು ಅಪ್ಪಿ ಲಿಂಗಾಯತ ಧರ್ಮಾಚರಣೆಯಲ್ಲಿ ತೊಡಗಿದ್ದಾರೆ, ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿದ್ದಾರೆ.

Leave a Reply

Your email address will not be published. Required fields are marked *