ಬಸವ ಜಯಂತಿ: ಕಲಬುರ್ಗಿಯಲ್ಲಿ ಉತ್ಸವ ಸಮಿತಿ ಆಯ್ಕೆ, ಅತ್ತಿವೇರಿ ಮಾತಾಜಿ ಪ್ರವಚನ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಜೇವರ್ಗಿ ಕಾಲೊನಿ, ಮಾಕಾ ಲೇಔಟ್ ವತಿಯಿಂದ 893ನೇ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಈಚೆಗೆ ಸಭೆ ಸೇರಿ ಸರ್ವಾನುಮತದಿಂದ ಬಸವ ಜಯಂತಿ ಉತ್ಸವ ಸಮಿತಿ ರಚನೆ ಮಾಡಲಾಗಿದೆ.

ಅಧ್ಯಕ್ಷರಾಗಿ ಡಾ. ಬಾಬುರಾವ ಶೇರಿಕಾರ, ಗೌರವಾಧ್ಯಕ್ಷರಾಗಿ ಮಹಾಂತೇಶ ಕೊಣ್ಣೂರ, ಉಪಾಧ್ಯಕ್ಷರಾಗಿ ರವೀಂದ್ರ ಮಾಲಿಪಾಟೀಲ, ಕೋಶಾಧ್ಯಕ್ಷರಾಗಿ ಆದಪ್ಪ ಬಗಲಿ ಅವರು ಆಯ್ಕೆಗೊಂಡರು.

ಸಭೆಯಲ್ಲಿ ಮಲ್ಲಿಕಾರ್ಜುನ ಜಾಮಗೊಂಡ, ಶಿವಾನಂದ ಮಾಲಗತ್ತಿ, ನಾಗಣ್ಣಗೌಡ ಪಾಟೀಲ, ಶಿವಾನಂದ ದಾನಮಗುಡಿ, ಅಯ್ಯಣ್ಣ ನಂದಿ, ಹಣಮಂತರಾಯ ಐನಳ್ಳಿ, ಶಿವಕುಮಾರ ಧರ್ಮಗೊಂಡ, ಅಶೋಕ ಗೂಳಿ, ಸಂಗಮೇಶ ಸಿದ್ದರಾಮ ವಾಲಿ, ನಾಗರಾಜ ಕಾಮಾ, ಸೂರ್ಯಕಾಂತ ಡುಮ್ಮ, ರಮೇಶ ಚೌಹಾಣ, ಪ್ರಸನ್ನ ವಾಂಜರಖೇಡೆ, ಡಾ. ಸಂಜುಕುಮಾರ ಶಟಕಾರ, ಚಂದ್ರಶೇಖರ ಅಂಕಲಿಗಿ, ರಾಜಶೇಖರ ಸಿನ್ನೂರ, ಬಸವರಾಜ ಮಡಿವಾಳ, ಸತೀಶ ಸಜ್ಜನ ಮತ್ತಿತರರು ಉಪಸ್ಥಿತರಿದ್ದರು.

‘ಬಸವತತ್ವ ದರ್ಶನ ಪ್ರವಚನ’

ಬಸವ ಜಯಂತಿ ಉತ್ಸವ-2026ರ ಅಂಗವಾಗಿ, ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರ ಮಾತಾಜಿ ಅವರಿಂದ, ಬಸವತತ್ವ ದರ್ಶನದ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್ 9ರಿಂದ 20ರವರೆಗೆ ಪ್ರತಿದಿನ ಸಂಜೆ 7 ರಿಂದ 8 ಗಂಟೆಯವರೆಗೆ ಮಾಕಾ ಲೇಔಟ್, ಎನ್‌ಜಿಓ ಬಡಾವಣೆ, ಜೇವರ್ಗಿ ಕಾಲನಿಯಲ್ಲಿ ಪ್ರವಚನ ನಡೆಯಲಿದೆ. ಮತ್ತಿತರ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದು ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *