ಧಾರ್ಮಿಕ ಕ್ಷೇತ್ರದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಥಮ ಕಹಳೆ ಊದಿದ ಅಕ್ಕ: ಮಂಗಳಾ ಅಂಗಡಿ

ಪ್ರೇಮಕ್ಕ ಅಂಗಡಿ
ಪ್ರೇಮಕ್ಕ ಅಂಗಡಿ

ಬೈಲಹೊಂಗಲ :

ಕನ್ನಡದ ಪ್ರಥಮ ಕವಿಯತ್ರಿ ಶರಣೆ ಅಕ್ಕಮಹಾದೇವಿ ವಿಶ್ವದ ಧಾರ್ಮಿಕ ಕ್ಷೇತ್ರದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಥಮ ಹೋರಾಟಗಾರ್ತಿ. ವಿಶ್ವ ಮಹಿಳಾ ದಿನಾಚರಣೆ ದಿನ ಅವಳ ಬದುಕು ಸಂದೇಶಗಳು ಸ್ಮರಣೀಯ ಹಾಗೂ ಶ್ಲಾಘನೀಯ ಎಂದು ಬೆಳಗಾವಿ ಮಾಜಿ ಸಂಸದೆ ಮಂಗಳ ಅಂಗಡಿ ನುಡಿದರು.

ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ, ಅಕ್ಕಮಹಾದೇವಿ ಜಯಂತಿ ಹಾಗೂ ಶ್ರೀ ಚನ್ನಬಸವೇಶ್ವರ ಸಭಾ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣದಲ್ಲಿ ಅನುಭವ ಮಂಟಪದ ಬಸವಾದಿ ಶಿವಶರಣರು ಆಕೆಗೆ ಆಶ್ರಯ ನೀಡಿದ್ದಲ್ಲದೆ ಅನೇಕ ಶರಣೆಯರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಕಾರಣ ಇಂದು ನಾವೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಯುವಂತಾಗಿದೆ.

ಬೆಳವಡಿ ಮಲ್ಲಮ್ಮ, ಕೆಳದಿಯ ಚೆನ್ನಮ್ಮ, ಕಿತ್ತೂರ ಚೆನ್ನಮ್ಮರಿಗೆ ಜನ್ಮನೀಡಿದ ಕನ್ನಡನಾಡಿನ ಮಹಿಳೆಯರಾದ ನಾವೇ ಧನ್ಯರು ಎಂದು ಹೇಳಿದರು.

ಉಪನ್ಯಾಸ ನೀಡಿದ ಧಾರವಾಡ ಹೈಕೋರ್ಟ್ ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ, ವಿಶ್ವದ ಪ್ರಥಮ ಪಾರ್ಲಿಮೆಂಟ್ ಎಂದು ಕರೆಸಿಕೊಂಡಿರುವ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡಿ ಗೌರವಿಸಿದ ಕೀರ್ತಿ ವಿಶ್ವದ ಮಹಿಳಾ ಸಮಾನತೆಗೆ ನಾಂದಿಯಾಯಿತೆಂದರು. ಬಸವಾದಿ ಶಿವಶರಣರ  ವಚನಗಳನ್ನು ಉದಾಹರಿಸಿ ಮಾತನಾಡಿದರು. ಅತಿಚಿಕ್ಕ ವಯಸ್ಸಿನ ಅಕ್ಕಮಹಾದೇವಿ ಹಾಗೂ  ಚೆನ್ನಬಸವಣ್ಣನವರು ಇವತ್ತಿನ ಯುವಕ ಯುವತಿಯರಿಗೆ ಆದರ್ಶರಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಂತೇಶ ಕೌಜಲಗಿ, ಪತ್ರಿ ಬಸವನಗರದ ನಾಗರಿಕರು ಮುಂದಿಟ್ಟ  ಸಾರ್ವತ್ರಿಕ ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವೆ ಎಂದರು. ಕೆಎಲ್ಇ ನಿರ್ದೇಶಕ ವಿಜಯ ಮೆಟಗುಡ್ಡ ಸೇವೆ ಮಾಡುವ ಅವಕಾಶ ನೀಡಿ ಆಶೀರ್ವದಿಸಿದ್ದೀರಿ, ಹೆಚ್ಚಿನ ಸೇವೆ ಮಾಡುವ ಹಾಗೂ ಋಣ ತೀರಿಸಲು ತಮ್ಮ ಮಾರ್ಗದರ್ಶನ ಪ್ರೋತ್ಸಾಹ ಅವಶ್ಶವಾಗಿದೆ ಎಂದರು.

ಕೆಎಲ್ಇ ನಿರ್ದೇಶಕ ಬಸವರಾಜ ತಟವಟಿ, ವಿಶ್ವ ಮಹಿಳಾ ದಿನಾಚರಣೆಯ ನಿಮಿತ್ಯ ಮಹಿಳಾ ಸಾಧಕಿಯರಾದ ಮುಕ್ತಾಯಕ್ಕ ಬಳಗದ ಪಾರ್ವತಿ ಮೊಳಕೂರ, ಪಾರ್ವತಿ ಎತ್ತಿನಗುಡ್ಡ, ಗುರುಪಾದ ಕಳ್ಳಿ, ಪತ್ರಿಕಾ ಕ್ಷೇತ್ರದ ರವಿ ಹುಲಕುಂದ, ಮಹಾಂತೇಶ ರಾಜಗೋಳಿ, ಉದಯಕುಮಾರ ಬೋಂಗಾಳೆ ಕುಡಚಿಮಠ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.

ಸಂಘದ ಕಾರ್ಯದರ್ಶಿ ಸುವರ್ಣಾ ಬಿಜಗುಪ್ಪಿ, ಕಾಡಪ್ಪ ರಾಮಗುಂಡಿ, ಡಾ. ನಿಂಗನಗೌಡ ಪಾಟೀಲ, ಪುಂಡಲೀಕ ಕಡಕೋಳ, ಮಹಾದೇವ ಕರಡಿಗುದ್ದಿ, ಮೋಹನ ಬೇವಿನಗಿಡದ, ಈರಣ್ಣ ಹವಳಪ್ಪನವರ, ನಿಂಗನಗೌಡ ದ್ಯಾಮನಗೌಡರ, ನಾಗನಗೌಡ ಪಾಟೀಲ, ಗಂಗಣ್ಣ ಅಂಗಡಿ, ಬಸವರಾಜ ಮಾಟೊಳ್ಳಿ, ಅಶೋಕ ಸಾಲಿ, ದುಂಡಯ್ಯ ಕುಲಕರ್ಣಿ, ಪತ್ರಯ್ಯ ಕುಲಕರ್ಣಿ, ಮಂಗಳಾ ಅಕ್ಕಿ, ಕಲಾವತಿ ಕಡಕೋಳ, ಮಹಾದೇವಿ ಹಿರೇಮಠ, ಶಿವಲೀಲಾ ಹುಲಿಕಟ್ಟಿ, ಗಂಗಮ್ಮ ಮೆಳವಂಕಿ, ಗೀತಾ ಅರಳಿಕಟ್ಟಿ, ಪುರಸಭೆ ಸದಸ್ಯರಾದ ಅರ್ಜುನ ಕಲಕುಟಕರ, ಶ್ರೀದೇವಿ ದೇವಲಾಪುರ, ಮುಕ್ತಾಯಕ್ಕ ಅಜಗಣ್ಣ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಕ್ತಾಯಕ್ಕ ಬಳಗದ ಸದಸ್ಯರು ಅಕ್ಕನ ಯೋಗಾಂಗ ತ್ರಿವಿಧಿ ಪಠಿಸಿ ಪ್ರಾರ್ಥಿಸಿದರು. ಸಂತೋಷ ಕೊಳವಿ ಸ್ವಾಗತಿಸಿದರು. ವಿಜಯಾ ಡಾ.ಮಹಾಂತೇಶ ಕಳ್ಳಿಬಡ್ಡಿ ದಂಪತಿ ಧ್ವಜಾರೋಹಣ ನೇರವಿರಿಸಿದರು. ವೀರಭದ್ರ ಕಾಪಸೆ ವಂದಿಸಿದರು. ವಿದ್ಯಾ ನೀಲಪ್ಪನವರ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *