ಅರಿವು, ಸಮಾನತೆ ಸಮಾಜ ನಿರ್ಮಾಣದ ಕಡೆ ಆದ್ಯತೆ ನೀಡಬೇಕಿದೆ : ಬಿ.ಆರ್. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಆಳಂದ:

ಕಲಬುರಗಿ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಅವರನ್ನು ಇಲ್ಲಿನ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಈಚೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಅಭಿನಂದಿಸಿ, ಸತ್ಕರಿಸಲಾಯಿತು.

ಬಿ.ಆರ್. ಪಾಟೀಲ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಸಮಾಜದ ಏಳಿಗೆಗೆ ಬಸವ ಜಯಂತಿ ಉತ್ಸವವನ್ನು ಆಡಂಬರಕ್ಕಿಂತ ಪ್ರಗತಿಯಡಿ, ವೈಚಾರಿಕ ಮತ್ತು ಸಮಾನತೆಯ ವಿಚಾರಗಳನ್ನು ಬಿತ್ತುವ ಉದ್ದೇಶದೊಂದಿಗೆ ಆಚರಿಸುವುದು ಅಗತ್ಯವಾಗಿದೆ ಎಂದರು.

ವಿಶ್ವದ ಸಕಲ ಜೀವರಾಶಿಗಳಿಗೆ ಒಳಿತನ್ನು ಬಯಸಿದ ವಿಶ್ವಗುರು ಬಸವಣ್ಣನವರು ಮಾನವೀಯತೆಯ ಪ್ರತಿರೂಪ, ಅವರ ಜಯಂತಿಯು ಹಬ್ಬಗಳ ರೀತಿಯಲ್ಲಿ ನಮ್ಮ ಭಾಗದಲ್ಲಿ ಆಚರಿಸಲಾಗುತ್ತದೆ. ಹಬ್ಬಗಳ ಜೊತೆಗೆ ಅರಿವಿನ ಸಮಾಜ ನಿರ್ಮಾಣದತ್ತ ಆಧ್ಯತೆ ನೀಡಬೇಕಿದೆ ಎಂದು ಅವರು ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೀರಶೈವ ಮಹಾಸಭಾ, ಹತ್ಯಾನಗಲ್ಲಿ ಅಭಿಮಾನಿಗಳು, ಶರಣ ಸಾಹಿತ್ಯ ಪರಿಷತ್ತು, ತಡಕಲ್ಲ, ಮುನ್ನೊಳ್ಳಿ, ಖಜೂರಿ ಗ್ರಾಮಗಳ ವಿವಿಧ ಸಂಘಟನೆಗಳ ಮುಖಂಡರು ಸಹ ಶಾಸಕ ಬಿ.ಆರ್. ಪಾಟೀಲ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದ ಸ್ವಾಗತವನ್ನು ಸತೀಶ ಸನ್ಮುಖ, ನಿರೂಪಣೆ ಸಂಜಯ ಪಾಟೀಲ ಮಾಡಿದರು, ಸಿದ್ದುಗೌಡ ಮೋಘಾ ಬಿ. ವಂದನಾರ್ಪಣೆ ಸಲ್ಲಿಸಿದರು.

ಶಿವಪುತ್ರಪ್ಪ ಪಾಟೀಲ, ಗುರುಶರಣ ಪಾಟೀಲ, ಮಲ್ಲಪ್ಪ ಹತ್ತರಕಿ, ರೇವಣಸಿದ್ದಪ್ಪ ನಾಗೂರೆ, ಬಿ.ವಿ. ಪಾಟೀಲ, ಸಿದ್ದರಾಮ ಪ್ಯಾಟಿ, ಬಸವರಾಜ ವಾಲಿ, ಸಿದ್ದುಗೌಡ ಪಾಟೀಲ ಗುಳ್ಕೊಳ್ಳಿ, ಬಾಬುರಾವ ಮಡ್ಡೆ, ಗಣೇಶ ಪಾಟೀಲ, ಸಂಗನಬಸವ ಪಾಟೀಲ, ಆನಂದ ಪಾಟೀಲ, ಶ್ರೀಶೈಲ ಹತ್ತರಕಿ, ಶ್ರೀಶೈಲ ಖಜೂರಿ, ಸಿದ್ದರಾಮ ನಂದಗಾಂವ, ಬಾಬುರಾವ ಗೊಬ್ಲೂರೆ, ಸೋಮಶೇಖರ ಮುಲಗೆ, ರಾಹುಲ ಪಾಟೀಲ, ಪುಟ್ಟಪ್ಪ ಅಪ್ಲಾಸಾಹೇಬ ತೀರ್ಥ, ಶಿವಾ ನಾಗೂರೆ, ಲಿಂಗರಾಜ ಪಾಟೀಲ, ಅಭಿನಂದನ ಬೇಡಗೆ, ಕಶ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *