ಯಾವ ರೀತಿಯ ಕಾರ್ಯಕ್ರಮಗಳು? ಮಾಡುವವರು ಯಾರು? ಹಣವೆಲ್ಲಿಂದ ಬರುತ್ತದೆ?
ಬೆಂಗಳೂರು
ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ
ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು
ಭಾಗ 3
ಅನುಭವ ಮಂಟಪದ ಮೂಲ ಉದ್ದೇಶಗಳು ಏನಿದ್ದವು? ಬಸವಣ್ಣನವರು ಅಲ್ಲಿ ಏನು ಸಾಧಿಸಲು ಹೊರಟಿದ್ದರು? ದೂರ ದೂರದಿಂದ ಬಂದು ಶರಣ ದಿಗ್ಗಜರು ಅನುಭವ ಮಂಟಪದಲ್ಲಿ ಯಾವ ಕಾರಣಕ್ಕೆ ಭಾಗವಹಿಸಿದರು? ಈ ಉದ್ದೇಶ, ಧ್ಯೇಯಗಳಿಗೆ ಈಗ ಏನಾಗಿದೆ? ಈಗಿನ ಸನ್ನಿವೇಶದಲ್ಲಿ ಅನುಭವ ಮಂಟಪದಲ್ಲಿ ಎಂಥೆಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು?
ಈ ಪ್ರಶ್ನೆಗಳನ್ನು ವಸ್ತುನಿಷ್ಠವಾಗಿ, ವಿವರವಾಗಿ ಚರ್ಚಿಸಿ ನಿರ್ಣಯಿಸಿ ಮುಂದುವರಿಯಬೇಕಾಗಿದೆ.
ಅನುಭವ ಮಂಟಪದಲ್ಲಿ ಎರಡು ರೀತಿಯ
ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಅನುಭವ ಮಂಟಪದಲ್ಲಿ ಎರಡು ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಒಂದು, ನಿರಂತರವಾಗಿ ಬೆಳಗಿನಿಂದ ಸಂಜೆಯವರೆಗೆ ದಿನಂಪ್ರತಿ ನಡೆಸುವ ಕಾರ್ಯಕ್ರಮಗಳು.
ಸಿಖ್ಖರ ಸುವರ್ಣ ಮಂದಿರದ ಚಟುವಟಿಕೆಗಳು, ರಾನಕಪುರ, ಪಾವಾಪುರಿ, ಪಾಲಿತಾನಾಗಳಲ್ಲಿ ಜೈನರು ನಡೆಸುತ್ತಿರುವ ಕಾರ್ಯಕ್ರಮಗಳು, ಬಹಾಯಿಗಳು ದಿಲ್ಲಿಯ ಕಮಲ ಭವನದಲ್ಲಿ ನಡೆಸುವ ಕಾರ್ಯಕ್ರಮಗಳ ಇದಕ್ಕೆ ಒಳ್ಳೆಯ ಉದಾಹರಣೆಗಳು.
ಎರಡನೆಯದು, ಪ್ರತಿ ವರ್ಷ ಆಯಾ ಕಾಲಕ್ಕೆ ನಡೆಯುವ ಬಸವ ಜಯಂತಿ, ವಿವಿಧ ಶರಣರ ಜಯಂತಿಗಳಂತಹ ಕಾರ್ಯಕ್ರಮಗಳು.
ಇವುಗಳ ಜೊತೆಗೆ ಪ್ರಜಾಪ್ರಭುತ್ವ ಸಬಲಗೊಳಿಸುವ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕು. ಸಂವಿಧಾನದ ಓದು, ಮತದಾರರಲ್ಲಿ ಜಾಗೃತಿ, ನಾಗರಿಕ ಶಿಕ್ಷಣ, ಸಮಾನತೆ, ವೈಚಾರಿಕತೆ ಮುಂತಾದ ವಿಷಯಗಳಿಗೆ ಪೂರಕವಾದ ಕಾರ್ಯಕ್ರಮಗಳು ನಡೆಯಬೇಕು.
ಈ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿ ಯಾರದು ಎನ್ನುವುದು ಇಲ್ಲಿ ಏಳುವ ಬಹಳ ಮುಖ್ಯವಾದ ಪ್ರಶ್ನೆ.
ಸರಕಾರ, ಬಸವಕಲ್ಯಾಣ ಅಭಿವೃದ್ದಿ ಮಂಡಳಿ, ವಿವಿಧ ಮಠಗಳ ಅಥವಾ ಮಠಗಳ ಒಕ್ಕೂಟ, ಬಸವ ತತ್ವಕ್ಕೆ ಬದ್ಧವಾದ ಸಾಮಾಜಿಕ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬಹುದು. ಕೆಲವು ಕಾರ್ಯಕ್ರಮಗಳನ್ನು ಸರಕಾರದ ಜೊತೆ ಕೈ ಜೋಡಿಸಿಯೂ ನಡೆಸಬಹುದು.
ಇವೆಲ್ಲಾ ಕಷ್ಟಕರವಾದ ಕಾರ್ಯಗಳು. ಈಗಿನಿಂದ
ಸಿದ್ಧವಾದರೆ ಮಾತ್ರ ಇವುಗಳನ್ನು ಮಾಡಬಹುದು.
ಈ ನಿಟ್ಟಿನಲ್ಲಿ ಸರಿಯಾದ ಯೋಜನೆಗಳನ್ನು ರೂಪಿಸಿ ಸರ್ಕಾರದ ಅನುಮೋದನೆ ಪಡೆಯುವುದು ಅಗತ್ಯ.
ಈ ಕಾರ್ಯಕ್ರಮಗಳಿಗೆಲ್ಲಾ ಖರ್ಚಾಗುವ ದುಡ್ಡು ಎಲ್ಲಿಂದ ಬರುತ್ತದೆ ಎಂಬ ಅಂಶದ ಬಗ್ಗೆಯೂ ಚಿಂತಿಸಿ ಸ್ಪಷ್ಟವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
ಇವೆಲ್ಲಾ ಕಷ್ಟಕರವಾದ ಕಾರ್ಯಗಳು. ಈಗಿನಿಂದ ಸಿದ್ಧವಾದರೆ ಮಾತ್ರ ಇವುಗಳನ್ನು ಮಾಡಬಹುದು. ಇಲ್ಲದಿದ್ದರೆ ಅನುಭವ ಮಂಟಪ ಸ್ಥಾವರವಾಗಿಯೇ ಉಳಿಯುತ್ತದೆ.
(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)
