ಬಸವ ಜಯಂತಿ : ಮೂರು ದಿನ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ

ಪ್ರೇಮಕ್ಕ ಅಂಗಡಿ
ಪ್ರೇಮಕ್ಕ ಅಂಗಡಿ

ಬೈಲಹೊಂಗಲ:

ಪಟ್ಟಣದ ಪತ್ರಿ ಬಸವನಗರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಏಪ್ರೀಲ್ 18ರಿಂದ 20ರವರೆಗೆ ಮೂರುದಿನ ಬಸವ ಜಯಂತಿ, ಪತ್ರಿ ಬಸವೇಶ್ವರ ಜಾತ್ರೆ, ಶರಣ ಸಂಸ್ಕೃತಿ ಉತ್ಸವವು ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಜರುಗಲಿದೆ.

18 ಮುಂಜಾನೆ 9 ಗಂಟೆಗೆ ಅನಿತಾ ಪುಟ್ಟಣ್ಣ ಅಗಸಗಿ ದಂಪತಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ಹಿಸುವರು. ಗೋಪಾಲಸಿಂಗ್ ರಜಪೂತ, ಅಜಗಣ್ಣ ಮುಕ್ತಾಯಕ್ಕ ಬಳಗದವರು ಉಪಸ್ಥಿತರಿರುವರು.

 ಸಾಯಂಕಾಲ 6 ಗಂಟೆಗೆ ಪ್ರಥಮ ಗೋಷ್ಠಿಯ ಸಾನಿಧ್ಯವನ್ನು ಮುರುಗೋಡದ ಪೂಜ್ಯ ನೀಲಕಂಠ ಶ್ರೀಗಳು ವಹಿಸುವರು. ಮುದಗಲ್ ಕಲ್ಯಾಣ ಆಶ್ರಮದ ಪೂಜ್ಯ ಮಹಾಂತ ಸ್ವಾಮೀಜಿ ಅವರು ಅಲ್ಲಮಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಕುರಿತು ಅನುಭಾವ ನೀಡುವರು. ರಂಗ ಕಲಾವಿದ  ಸಿ.ಕೆ. ಮೆಕ್ಕೇದ ಕಾರ್ಯಕ್ರಮ ಉದ್ಘಾಟಿಸುವರು. ಕಾಡಪ್ಪ ರಾಮಗುಂಡಿ ಅಧ್ಯಕ್ಷತೆ ವಹಿಸುವರು. ಪ್ರೇಮಕ್ಕ ಅಂಗಡಿ ಅವರು ನೇತೃತ್ವ ವಹಿಸುವರು.

19ರಂದು ಮುಂಜಾನೆ 9 ಗಂಟೆಗೆ ಉಚಿತ ಆರೋಗ್ಯ ತಪಾಸಣೆ  ಡಾ. ರವೀಂದ್ರ ಜಕನೂರ ಹಾಗೂ ಸಾಹಾಯಕ ವೈದ್ಯಾಧಿಕಾರಿಗಳು ತಾಲೂಕ ಆರೋಗ್ಯ ಕೇಂದ್ರ, ಬೈಲಹೊಂಗಲ ಇವರ ನೇತೃತ್ವದಲ್ಲಿ ನಡೆಯಲಿದೆ. ಡಾ. ಅಶೋಕ ದೊಡವಾಡ, ಡಾ. ಮಂಜುನಾಥ ಮುದುಕನಗೌಡರ  ಉಪಸ್ಥಿತಿರಿದ್ದು, ಸುವರ್ಣ ಬಿಜುಗುಪ್ಪಿ ಅಧ್ಯಕ್ಷತೆ ವಹಿಸುವರು.

ಸಾಯಂಕಾಲ 6 ಗಂಟೆಗೆ ದ್ವಿತೀಯ ಗೋಷ್ಠಿಯ ಸಾನಿಧ್ಯವನ್ನು ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ಸಮ್ಮುಖವನ್ನು ಮೂರುಸಾವಿರ ಮಠದ  ಪ್ರಭು ನೀಲಕಂಠ ಸ್ವಾಮಿಗಳು, ಪ್ರವಚನವನ್ನು ಪುರುಷೋತ್ತಮಕುಮಾರ ಸ್ವಾಮಿಗಳು, ಅಂತೂರ ಬೆಂತೂರ ಶ್ರೀಗಳು ಪ್ರಭುದೇವರ ಆರೋಪಣೆ ಪ್ರಸಂಗ ಕುರಿತು ಅನುಭಾವ  ನೀಡುವರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅದೃಶ್ಯಪ್ಪ ಸಿದ್ದರಾಮಣಿ  ಉದ್ಘಾಟಿಸುವರು. ಶಂಕರ ಬೋಳನ್ನವರ ಅಧ್ಯಕ್ಷತೆ ವಹಿಸುವರು.

20 ಮುಂಜಾನೆ ಏಳು ಗಂಟೆಗೆ ಬಸವ ಜಯಂತಿ ನಿಮಿತ್ಯ ಬಸವೇಶ್ವರ ಮಹಾಪೂಜೆ ಹಾಗೂ ಷಟಸ್ಥಲ ಧ್ವಜಾರೋಹಣ ಜ್ಯೋತಿ  ಮುರುಗೇಶ ಹುಲಿಕಟ್ಟಿ ದಂಪತಿಗಳಿಂದ ನಡೆಯುವದು. ವಚನ ಸಾಹಿತ್ಯ ಹಾಗೂ ಬಸವೇಶ್ವರರ  ಮೆರವಣಿಗೆಯ ಸಾನಿಧ್ಯ ವರ್ತಿಮಠದ ಶಂಕರದೇವರು ವಹಿಸುವರು. ದುಂಡಯ್ಯ ಕುಲಕರ್ಣಿ, ಸಂತೋಷ ಕೊಳವಿ ಕಾರ್ಯಕ್ರಮ ನಿರ್ವಹಿಸುವರು.

ಸಾಯಂಕಾಲ 6 ಗಂಟೆಗೆ ಮಹಿಳಾ ಗೋಷ್ಠಿಯ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮಿಗಳು, ಸಮ್ಮುಖವನ್ನು ಬಸವಪ್ರಕಾಶ ಸ್ವಾಮಿಗಳು ವಹಿಸಲಿದ್ದು, ರಾಮದುರ್ಗದ ಬಸವಗೀತಾ ಮಾತಾಜಿ ಅಕ್ಕ ಅಲ್ಲಮರ ಸಂವಾದ ವಿಷಯ ಕುರಿತು ಅನುಭಾವ ನೀಡುವರು. ಹೇಮ ಜ್ಯೋತಿ ದೇಶನೂರ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಭಾರತಿ ತಟವಟಿ ವಹಿಸುವರು. ಪ್ರತಿನಿತ್ಯ ವಚನ ಚಿಂತನೆ, ವಚನ ಪಠಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು ಎಂದು ಪತ್ರಿ ಬಸವ ನಗರ ಅಭಿವೃದ್ಧಿ ಸಂಘ ತಿಳಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *