ಬಸವನಬಾಗೇವಾಡಿ: ಏಪ್ರೀಲ್ 18 ವಚನ ಕಂಠಪಾಠ, ವಚನ ಗಾಯನ ಸ್ಪರ್ಧೆ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ:

ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಏಪ್ರೀಲ್ 20ರಂದು ಆಚರಿಸಲ್ಪಡುವ ಬಸವ ಜಯಂತಿ ನಿಮಿತ್ತ ಶಾಲಾ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆಯನ್ನು ಏಪ್ರೀಲ್ 18ರಂದು ಹಮ್ಮಿಕೊಂಡಿದೆ.

4ನೇ ತರಗತಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳು ವಚನ ಕಂಠಪಾಠ ಸ್ಪರ್ಧೆ, 8ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಎರಡು ಸ್ಪರ್ಧೆಗಳು ಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಪ್ರಾಧಿಕಾರದ ಕೋಣೆಗಳಲ್ಲಿ 18 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗುವದು. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಸುಭಾಸ ಹಡಪದ ಮೊ-8197709764, ಬಸವರಾಜ ನಂದಿಹಾಳ ಮೊ. 9916402368 ಇಲ್ಲವೇ ಬಸವೇಶ್ವರ ದೇವಸ್ಥಾನದ ಪ್ರಾಧಿಕಾರ ಕಚೇರಿಯಲ್ಲಿಯೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಚನ್ನಬಸವ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *