ಬಸವತತ್ವ ದರ್ಶನ: ಶರಣರ ಬದುಕು ದಾರಿದೀಪ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

(893ನೇ ಬಸವ ಜಯಂತಿ ಅಂಗವಾಗಿ ಕಲಬುರ್ಗಿಯಲ್ಲಿ ನಡೆಯುತ್ತಿರುವ  ‘ಬಸವತತ್ವ ದರ್ಶನ ಪ್ರವಚನ’ದ ಮುಖ್ಯಾಂಶಗಳು)

ಕಲಬುರ್ಗಿ :

ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ, ಅತ್ತಿವೇರಿ

ಸ್ಥಳ: ಬಸವ ಮಂಟಪ, ಮಾಕಾ ಲೇಔಟ್‌, ಕಲಬುರಗಿ

ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ

17 ಏಪ್ರಿಲ್ 2026

ಕಲಬುರಗಿಯಲ್ಲಿ ನಡೆದ 893ನೇ ಬಸವ ಜಯಂತಿ ಪ್ರಯುಕ್ತ ಆಯೋಜಿಸಲಾದ ಬಸವತತ್ವ ದರ್ಶನ ಪ್ರವಚನದಲ್ಲಿ ಪೂಜ್ಯ ಬಸವೇಶ್ವರಿ ಮಾತಾಜಿಯವರು ಬಸವತತ್ವದ ಆಳವಾದ ಅರ್ಥವನ್ನು ಸರಳವಾಗಿ ನಿರೂಪಿಸಿದರು. ಮಾನವ ಜೀವನದ ಸಾರ್ಥಕತೆ ಸಾಧನೆಗೆ ಶರಣರ ಬದುಕು ದಾರಿದೀಪವಾಗಿದ್ದು, ದೇಶ-ವಿದೇಶಗಳಿಂದ ಕಲ್ಯಾಣಕ್ಕೆ ಆಗಮಿಸಿದ ಶರಣರಲ್ಲಿ ಅಕ್ಕಮಹಾದೇವಿಯವರ ಪಾತ್ರ ವಿಶಿಷ್ಟವಾಗಿದೆ ಎಂದು ಹೇಳಿದರು.

ಅಕ್ಕಮಹಾದೇವಿಯವರ ಜನನ, ಅವರ ತಾಯಿ-ತಂದೆಯರ ಭಕ್ತಿ ಹಾಗೂ ಕಲ್ಯಾಣಕ್ಕೆ ಆಗಮಿಸಿದ ಪ್ರಸಂಗಗಳನ್ನು ವಿವರಿಸಿದ ಅವರು, ಗುರುಲಿಂಗದೇವರಿಂದ ಪಡೆದ ಲಿಂಗದೀಕ್ಷೆಯ ಮಹತ್ವವನ್ನು ತಿಳಿಸಿದರು. ಶರಣಸತಿ-ಲಿಂಗಪತಿ ಭಾವದಿಂದ ಆರಾಧನೆ ಮಾಡುವ ಮೂಲಕ ಆತ್ಮಶುದ್ಧಿ ಮತ್ತು ಆತ್ಮಜ್ಞಾನವನ್ನು ಸಾಧಿಸಬಹುದು ಎಂಬ ಸಂದೇಶವನ್ನು ನೀಡಿದರು.

ಸಾಮಾಜಿಕ ಟೀಕೆ-ಟಿಪ್ಪಣಿಗಳ ನಡುವೆಯೂ ಅಕ್ಕಮಹಾದೇವಿಯವರು ಧೈರ್ಯದಿಂದ ಸಾಧನೆಯ ಮಾರ್ಗವನ್ನು ಆರಿಸಿಕೊಂಡರು. “ಹೆದರದಿರು ಮನವೇ, ಬೆದರದಿರು ಮನವೇ” ಎಂಬ ಅವರ ಮನೋಭಾವ, ಜೀವನದಲ್ಲಿ ಸ್ತುತಿ-ನಿಂದೆಗಳನ್ನು ಸಮಭಾವದಿಂದ ಸ್ವೀಕರಿಸುವ ಶಾಂತಚಿತ್ತತೆಯನ್ನು ಸಾರುತ್ತದೆ. ಈ ವಿಚಾರಕ್ಕೆ ಚೆನ್ನಬಸವಣ್ಣನವರ “ಲೋಕದಿಚ್ಚೆಯ ನಡೆಯ, ಲೋಕದಿಚ್ಚೆಯ ನುಡಿಯ” ಎಂಬ ವಚನವು ಪೂರಕವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಸ್ವಭಾವದ ಜನರು ಇರುವುದನ್ನು ಉಲ್ಲೇಖಿಸಿ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂಬ ಅಕ್ಕಮಹಾದೇವಿಯವರ ಸಂದೇಶವನ್ನು ವಿವರಿಸಿದರು. ಕೌಶಿಕ ಮಹಾರಾಜರೊಂದಿಗೆ ಅವರ ವಿವಾಹದ ಪ್ರಸಂಗ ಹಾಗೂ ಗುರುಗಳ ಮಾರ್ಗದರ್ಶನದ ಮಹತ್ವವನ್ನು ಸ್ಪಷ್ಟಪಡಿಸಿದರು.

ಪ್ರವಚನದ ನಂತರ, ಸೊಲ್ಲಾಪುರದ ಶಂಕರ ಲಿಂಗ ಮಹಿಳಾ ಮಂಡಳಿಯವರು ಪ್ರಸ್ತುತಪಡಿಸಿದ “ಅಕ್ಕನ ರೂಪಕ” ನಾಟಕವು ವಿಶೇಷ ಆಕರ್ಷಣೆಯಾಗಿತ್ತು. ಅನುಭವ ಮಂಟಪಕ್ಕೆ ಅಕ್ಕಮಹಾದೇವಿಯವರ ಆಗಮನ ಹಾಗೂ ಅಲ್ಲಮಪ್ರಭು ಸೇರಿದಂತೆ ಶರಣರೊಂದಿಗೆ ನಡೆದ ಆಳವಾದ ಆಧ್ಯಾತ್ಮಿಕ ಸಂವಾದವನ್ನು ಮನೋಜ್ಞವಾಗಿ ಪ್ರದರ್ಶಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ಕಾರ್ಯಕ್ರಮವು ಬಸವತತ್ವದ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.