ಸಂತೆಮರಹಳ್ಳಿಯಲ್ಲಿ ಶ್ರದ್ದೆ, ಭಕ್ತಿಯಿಂದ ನಡೆದ ಬಸವ ಜಯಂತಿ

ಚಾಮರಾಜನಗರ :

ಸಂತೆಮರಹಳ್ಳಿಯಲ್ಲಿ ಬಸವ ಕೇಂದ್ರದ ವತಿಯಿಂದ ಸೋಮವಾರ ಬಸವ ಜಯಂತೋತ್ಸವವನ್ನು ಅತ್ಯಂತ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.

ಬಸವಣ್ಣನವರ ತತ್ವಗಳು, ಸಮಾನತೆ, ಶರಣರ ದರ್ಶನ ಮತ್ತು ಸಮಾಜ ಪರಿವರ್ತನೆಯ ಸಂದೇಶಗಳನ್ನು ಸಾರುವ ಈ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.

ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲರು ಬಸವೇಶ್ವರರ ವಚನಗಳನ್ನು ಪಠಿಸಿ, ಅವರ ಜೀವನ ಸಂದೇಶಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಹೊನ್ನೂರು ಪರಮೇಶ್ ಅವರು ಸ್ವಾಗತ ಭಾಷಣ ಮಾಡಿ, ಬಸವ ಜಯಂತಿಯ ಮಹತ್ವವನ್ನು ವಿವರಿಸಿದರು. ಬಸವಣ್ಣನವರ ಸಮಾನತೆಯ ಸಂದೇಶವು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧ್ಯಕ್ಷರಾದ ಎನ್ ರಿಚ್ ಮಹದೇವಸ್ವಾಮಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ಚಿಂತನೆಗಳು ಕೇವಲ ಧಾರ್ಮಿಕವಲ್ಲ, ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗೂ ಕಾರಣವಾಗಿವೆ ಎಂದು ತಿಳಿಸಿದರು. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಪ್ರವಚನಕಾರರಾದ ಮಾಸ್ಟರ್ ಮಹದೇವಸ್ವಾಮಿ ಅವರು ಬಸವೇಶ್ವರರ ಜೀವನ, ಅವರ ತತ್ವಶಾಸ್ತ್ರ ಹಾಗೂ ಶರಣರ ಚಳುವಳಿಯ ಮಹತ್ವವನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿದರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪವು ಜಗತ್ತಿನ ಮೊದಲ ಪ್ರಜಾಪ್ರಭುತ್ವ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಹೊನ್ನೂರು ಮಂಜು, ಹೆಗ್ಗವಾಡಿ ಮಹದೇವ, ಪ್ರಭು, ಆರ್.ಎಸ್. ಪ್ರಸಾದ್, ಎಚ್.ವೈ. ಜಿತೇಂದ್ರ ಹಾಗೂ ಬಸವ ಕೇಂದ್ರದ ಖಜಾಂಚಿಯಾದ ಮಲ್ಲಿಗೆಹಳ್ಳಿ ಗಣೇಶ, ಹೆಗ್ಗವಾಡಿಪುರ ನಂದೀಶ, ಸಂತೆಮರಳ್ಳಿ ಕಲಾವಿದ ಪ್ರಭು ಉಪಸ್ಥಿತರಿದ್ದರು. ಜೊತೆಗೆ ವೀರಶೈವ ಮಹಾಸಭೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಬಸವ ಅಭಿಮಾನಿಗಳು ಭಾಗವಹಿಸಿದರು.

ಬಸವಣ್ಣನವರ ವಚನಗಳ ಪಠಣ, ಚಿಂತನೆಗಳ ಹಂಚಿಕೆ ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಸಂಕಲ್ಪದೊಂದಿಗೆ ಯಶಸ್ವಿಯಾಗಿ ನಡೆಯಿತು.

ಈ ಬಸವ ಜಯಂತಿ ಉತ್ಸವವು ಬಸವ ತತ್ವಗಳ ಪ್ರಸಾರಕ್ಕೆ ಮತ್ತಷ್ಟು ಬಲ ನೀಡುವಂತೆ ಹಾಗೂ ಯುವ ಪೀಳಿಗೆಗೆ ಪ್ರೇರಣೆಯಾಗುವಂತೆ ನೆರವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ವೀರಶೈವ ಮಹಾಸಭಾ ಬೆಂಗಳೂರು, ಬಸವ ಕೇಂದ್ರ ಚಾಮರಾಜನಗರ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಚಾಮರಾಜನಗರ