ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಉಸಿರು: ವಿವೇಕಾನಂದ ಕಲ್ಯಾಣಶೆಟ್ಟಿ

ಬಸವನಬಾಗೇವಾಡಿ

ಬಸವಾದಿ ಶರಣರ ಕಾಲದ ವಚನಕಾರರು ಸಮಸಮಾಜದ ಪ್ರತಿಪಾದಕರಾಗಿದ್ದಾರೆ. ಹನ್ನೇರಡನೆಯ ಶತಮಾನದ ಅನುಭವ ಮಂಟಪ ವಿಶ್ವಕ್ಕೆ ಮಾದರಿಯಾಗಿತ್ತು. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಉಸಿರು ಎಂದು ಶರಣ ಚಿಂತಕ ವಿವೇಕಾನಂದ ಕಲ್ಯಾಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಐ ಕ್ಯೂ ಎ ಎಸ್ ಕಾಲೇಜು ಬಸವನಬಾಗೇವಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಬಸವನಬಾಗೇವಾಡಿ ಆಶ್ರಯದಲ್ಲಿ ಲಿಂಗೈಕ್ಯ ಮಲ್ಲಮ್ಮಗೌಡತಿ ಶಂಕರಪ್ಪಗೌಡ ಪಾಟೀಲ ದತ್ತಿ, ಲಿಂಗೈಕ್ಯ ಸಿದ್ದಪ್ಪ ಬಸಲಿಂಗಪ್ಪ ಹಂಚಲಿ ದತ್ತಿ, ಶ್ರೀಮತಿ ಕಸ್ತೂರಿ ಮತ್ತು ಗಿರಿಮಲ್ಲಪ್ಪ ಬೆಣ್ಣೂರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಈಚೆಗೆ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಿವಶರಣೆಯರು ಕಾಯಕನಿಷ್ಠೆ, ಸಾಮಾಜಿಕ ಸಮಾನತೆ ಮತ್ತು ದಾಸೋಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸತ್ಯ, ಧಮ೯ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವನಬಾಗೇವಾಡಿಯ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಸೂಯ೯ವಂಶಿ ಮಾತನಾಡಿ, ಬಸವಣ್ಣ ದಯವೇ ಧಮ೯ದ ಮೂಲವಯ್ಯಾ, ದಯವಿಲ್ಲದ ಧಮ೯ ಅದಾವುದಯ್ಯಾ ಎಂಬ ವಚನದ ಅರಿವು ಮೂಡಿಸುವ ಅವಶ್ಯಕತೆಯಿದೆ. ಯುವ ವಿದ್ಯಾರ್ಥಿ ಬಸವಾದಿ ಶರಣರ ಸಾಹಿತ್ಯ ಅಧ್ಯಯನ ಮಾಡಬೇಕು. ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದರು.

ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯದ ಸಾಮಾಜಿಕ ಮೌಲ್ಯಗಳು ಕುರಿತು ಅಜು೯ಣಗಿ ಸರಕಾರಿ ಪ ಪೂ ಕಾಲೇಜಿನ ಉಪನ್ಯಾಸಕಿ ಡಾ. ಸವಿತಾ ಝಳಕಿ ಉಪನ್ಯಾಸ ನೀಡಿ, ಬಸವಾದಿ ಶರಣರ ವಚನಗಳು ಇಂದಿಗೂ ಪ್ರಸ್ತುತ. ಬಸವ ಸಂದೇಶಗಳ ಕುರಿತು ವಿಶ್ವದ ಅನೇಕ ಭಾಷೆಗಳಿಗೆ ಅನುವಾದದಿಂದ ಬಸವಣ್ಣ ವಿಶ್ವದ ಶ್ರೇಷ್ಠ ಮಾನವತಾವಾದಿಯಾಗಿ ಪ್ರಸಿದ್ಧರಾಗಿದ್ದಾರೆ. ಅಕ್ಕಮಹಾದೇವಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ನುಲಿಯ ಚಂದಯ್ಯ, ಸೂಳೆ ಸಂಕವ್ವ, ಚನ್ನಬಸವಣ್ಣ ಮುಂತಾದ ಪ್ರಮುಖ ವಚನಕಾರ ಸಂದೇಶ ಪಾಲಿಸಬೇಕೆಂದರು.

ಯಾದಗಿರಿ ಶ್ರೀ ಮೈಲಾರಲಿಂಗೇಶ್ವರನ ಚರಿತ್ರೆ ಕುರಿತು ಸಾಹಿತಿ ಮತ್ತು ಕವಿಯಿತ್ರಿ ಶಾಂತಾ ಬಿರಾದಾರ(ಚೌರಿ) ಉಪನ್ಯಾಸ ನೀಡಿ, ಯಾದಗಿರಿ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಾಲಯ 15 ನೇ ಶತಮಾನಕ್ಕೆ ಸೇರಿದೆ. ಮೈಲಾರಲಿಂಗೇಶ್ವರನಿಗೆ ಬಂಡಾರದ ದೊರೆ ಎಂದು ಕರೆಯುತ್ತಾರೆ. ದೀಪಾವಳಿ ಹಾಗೂ ಸಂಕ್ರಾಂತಿಗೆ ವಷ೯ದ ಎರಡು ಸಲ ಜಾತ್ರೆ ನೆರವೇರಿಸುತ್ತಾರೆ. ಜಾತ್ರೆಯಲ್ಲಿ ಭಕ್ತರು ಬಂಡಾರ ಹಚ್ಚಿಕೊಂಡು ದಶ೯ನ ಮಾಡುತ್ತಾರೆ ಎಂದರು. ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು.

ಸಾಹಿತಿ ಅಶೋಕ ಹಂಚಲಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿದರು. ಪ್ರಕಾಶ ಗಿರಿಮಲ್ಲಪ್ಪ ಬೆಣ್ಣೂರ, ಈರನಗೌಡ ಶಿವನಗೌಡ ಪಾಟೀಲ ವೇದಿಕೆಯ ಮೇಲಿದ್ದರು.

ಕನಾ೯ಟಕ ರಾಜ್ಯ ನಾಟಕ ಬರಹಗಾರರ (ಕವಿಗಳ ) ಸಂಘ ವಾಯ್ ಎಚ್ ಅಂಗಡಗೇರಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಜರುಗಿದ ಜಾನಪದ ಉತ್ಸವ 2026 ಹಾಗೂ ಮೋಜಿನ ಆಟಗಳ ಮುಕ್ತಾಯ ಸಮಾರಂಭ ಮತ್ತು ವಿಧ್ಯಾಥಿ೯ಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.

ಪ್ರೊ. ಚತ್ರಸಿಂಗ ದಡೆಕರ, ಡಾ ಬಸವರಾಜ ಸಾಲವಾಡಗಿ, ಡಾ. ಯಲ್ಲಪ್ಪ, ಶ್ರೀರಾಮ ವಿಜಯಪುರ, ಶಿವಮೂರ್ತಿ ಚಿಕನತಿ೯, ಡಾ. ಶೋಭಾ ಜನಗೊಂಡ, ಎಸ್ ಜೆ ಸೂಯ೯ವಂಶಿ, ಎಂ ಕೆ ಯಾಧವ, ರುಕ್ಸಾನಾ ಮುಜಾವರ, ಅಂಬಿಕಾ ಪಾಟೀಲ, ಅಶ್ವಿನಿ ನಂದಿ, ಪಿ ಎಸ್ ಹೊರಕೇರಿ. ಡಾ. ಕಿರಣ ಸೂದಿ, ಪ್ರಶಾಂತ ಎಂ ಜಿ, ಸಿ ಬಿ ಬಿರಾದಾರ, ರಮೇಶ ತಳವಾರ, ಎಲ್ ಎಲ್ ರಾಠೋಡ, ಜಿ ಜಿ ಪೂಜಾರಿ ಉಪಸ್ಥಿತರಿದ್ದರು.

ಠಾಖಾದೇವಿ ಲಮಾಣಿ ಪ್ರಾಥಿ೯ಸಿದರು. ಬಿ ವಿ ಚಕ್ರಮನಿ ಪರಿಚಯಿಸಿ ಗೌರವಿಸಿದರು. ಶಿವು ಮಡಕೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಕಾವೇರಿ ಅಡಗಿಮನಿ ನಿರೂಪಿಸಿದರು.
ಜ್ಯೋತಿ ಕುಂಬಾರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *