ತುಮಕೂರಲ್ಲಿ ಮೇ 12 ಬಸವ ಜಯಂತಿ, ವಿವಿಧ ಸ್ಪರ್ಧೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ತುಮಕೂರು :

ಬಸವ ಕೇಂದ್ರ, ಜಯದೇವ ವಿದ್ಯಾರ್ಥಿ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸಮಸ್ತ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 12 “ಜಗಜ್ಯೋತಿ ಬಸವೇಶ್ವರರ ಜಯಂತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮೇ 10ರಂದು ಬೆಳಿಗ್ಗೆ 10-30 ಗಂಟೆಗೆ ಜಯದೇವ ಮುರುಘರಾಜೇಂದ್ರ ಸಭಾಂಗಣ, ತುಮಕೂರು ಇಲ್ಲಿ ಸ್ಪರ್ಧೆಗಳು ನಡೆಯಲಿವೆ.

ಸ್ಪರ್ಧೆಗಳ ವಿವರ:

1) ವಚನ ಕಂಠಪಾಠ ಸ್ಪರ್ಧೆ 10 ನಿಮಿಷ ಬಸವಣ್ಣನವರ ವಚನಗಳು ಹೇಳಬೇಕು.

 2) ಪ್ರಬಂಧ ಬರೆಯುವ ಸ್ಪರ್ಧೆ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ವಿಷಯವಾಗಿ ಅರ್ಧಗಂಟೆ ಅವಧಿಯಲ್ಲಿ ಬರೆಯಬೇಕು.

3) ವಚನ ಗಾಯನ ಸ್ಪರ್ಧೆ ಬಸವಣ್ಣನವರ ಎರಡು ವಚನಗಳನ್ನು ಹಾಡಬೇಕು.

ಈ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಥಮ ಮೂವರಿಗೆ ಜಯಂತಿ ಕಾರ್ಯಕ್ರಮದಂದು ಬಹುಮಾನ ನೀಡಿ ಸತ್ಕರಿಸಲಾಗುವದು.

ಷರತ್ತುಗಳು;

1)ಎಲ್ಲಾ ಸ್ಪರ್ಧೆಗಳಲ್ಲೂ ತೀರ್ಪುಗಾರರ ತೀರ್ಮಾನವೇ ಅಂತಿಮ.

2)ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ಏರ್ಪಡಿಸಲಾಗಿದ್ದು, 1ನೇ ಹಂತದಲ್ಲಿ 8 ವರ್ಷದಿಂದ 20 ವರ್ಷದ ಒಳಗಿನವರು. 2ನೇ ಹಂತದಲ್ಲಿ 21ನೇ ವರ್ಷದಿಂದ ಮೇಲ್ಪಟ್ಟವರಿಗೆ ಅವಕಾಶ ನೀಡಲಾಗುವುದು.

3)ಸ್ಪರ್ಧಾರ್ಥಿಗಳು ಸ್ಪರ್ಧೆಯ ದಿನದ ಪೂರ್ವದಲ್ಲಿ ಈ ಕೆಳಕಂಡ ಸಂಘಟಕರ ಬಳಿ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

4)ಹೆಚ್ಚಿನ ಮಾಹಿತಿಗೆ ಕಲ್ಪನಾ ಉಮೇಶ ಮೊ: 9448479405 ಅಧ್ಯಕ್ಷರು, ಮಹಿಳಾ ಬಸವ ಕೇಂದ್ರ, ಜಿ. ಬಿ. ನಾಗಭೂಷಣ ಮೊ: 9964030475 ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ, ಪ್ರೇಮ ಪ್ರಸಾದ ಮೊ: 9032982860 ಮಹಿಳಾ ಬಸವಕೇಂದ್ರ ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *