ಧಾರವಾಡದಲ್ಲಿ ವಚನ ಗಾಯನ ತರಬೇತಿ ಶಿಬಿರ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ವಚನ ಹಾಡುವ ಮೊದಲು ವಚನದ ಸಾರ ತಿಳಿಯಬೇಕು

ಧಾರವಾಡ :

ಬದ್ಧತೆ ಮತ್ತು ಸ್ವರದ ಶುದ್ಧತೆಯಿಂದ ಸಂಗೀತವನ್ನು ಜನಮಾನಸಕ್ಕೆ ಹೇಗೆ ತಲುಪಿಸಬೇಕು, ಕೀರ್ತಿ ಪ್ರಶಂಸೆಯಿಂದ ದೂರವಿದ್ದು ಸಂಗೀತಕ್ಕಾಗಿ ಹೇಗೆ ಬದುಕಬೇಕೆಂಬುದನ್ನು ಸ್ವರದ ಮೂಲಕ ಜೀವನ ಕಟ್ಟಿಕೊಟ್ಟವರು ಪಂಡಿತ ಸಂಗಮೇಶ್ವರ ಗುರವ ಅವರು ಎಂದು ಡಾ. ಮೃತ್ಯುಂಜಯ ಶೆಟ್ಟರ ಹೇಳಿದರು.

ನಗರದ ಸ್ವರಸೇನ ಪಂಡಿತ ಸಂಗಮೇಶ್ವರ ಗುರವ ಪ್ರತಿಷ್ಠಾನವು ಗುರುವಾರ ಸಂಜೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಪಂಡಿತ ಸಂಗಮೇಶ್ವರ ಗುರವ ಅವರ ೧೩ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಮಾತನಾಡುತ್ತಿದ್ದರು.

ಪಂಡಿತ ಗುರವ ಅವರು ಯಾವುದೇ ಘರಾಣೆಯ ಸಂಗೀತ ಹಾಡುವ ಅಪರೂಪದ ಶಕ್ತಿ ಹೊಂದಿದ್ದರು. ಅವರು ಸಂಗೀತ ಸಾಧನೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಗಿವರೇಣ್ಯರಾಗಿದ್ದರು ಎಂದರು.

ವಚನ ಗಾಯನ ಪರಂಪರೆಯನ್ನು ನೋಡಿದಾಗ, ಬಹಳಷ್ಟು ಮಹನೀಯರನ್ನು ನಾವು ನೆನೆಯಲೇಬೇಕು. ಡಾ. ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ, ಶಿ.ಶಿ. ಬಸವನಾಳರು, ಡಾ. ಎಂ.ಎಂ.ಕಲಬುರ್ಗಿ ಅವರಂತವರ ವಚನಗಳ ಸಂರಕ್ಷಣೆಯ ಕಾರ್ಯ ಸ್ಮರಣೀಯವಾದುದು.

ವಚನ ಎಂದರೆ ವಾಂಙ್ಮಯ. ಕನ್ನಡ ಭಾಷೆಯ ಅಸ್ಮಿತೆಯ ಪ್ರಖರ ಪ್ರತೀಕಗಳಾಗಿ ಹೊರಹೊಮ್ಮಿದ ವಚನ ವಾಂಙ್ಮಯವು ವಿಶ್ವವನ್ನೇ ಪಸರಿಸಿದೆ ಎಂದರು. ವಚನ ಹಾಡುವ ಮೊದಲು ವಚನದ ಸಾರವನ್ನು ತಿಳಿಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸುಪ್ರಿಯಾ ಮಲಶೆಟ್ಟಿ ಅವರು ವಚನಗಳ ಮಹತ್ವದ ಕುರಿತು ಮಾತನಾಡುತ್ತ, ವಚನ ಅಂದರೆ ಭಾಷೆ ಕೊಡು, ನಡೆ-ನುಡಿಗಳೊಂದಾಗಬೇಕು.  ೧೨ನೇ ಶತಮಾನದ ಬಸವಾದಿ ಶರಣರು ಅನೇಕ ವಚನಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರು ಕೇವಲ ವಚನಗಳನ್ನು ಬರೆಯಲಿಲ್ಲ, ತಮ್ಮ ಜೀವನಾನುಭವಗಳನ್ನು ಸಮಾಜದಲ್ಲಿ ಜರುಗಿದ ಘಟನೆಗಳನ್ನು ಕಣ್ಣಾರೆ ಕಂಡು, ಸಮಾಜೋದ್ಧಾರಕ ಬದಲಾವಣೆಗಳಿಗೆ ಕ್ರಾಂತಿಯನ್ನೇ ಮಾಡಿ ರಚಿಸಿರುವ ವಚನಗಳು ಸಾಕ್ಷೀಭೂತವಾಗಿ ನಿಂತಿವೆ. ೧೨ನೇ ಶತಮಾನದ ವಚನಗಳು ಇಂದಿನ ಎ.ಐ. ಯುಗದಲ್ಲೂ ಪ್ರಸ್ತುತವಾಗಿವೆ ಎಂದರು.

ವಚನಗಳು ಚುಂಬಕ ಶಕ್ತಿಯಿದ್ದಂತೆ, ಅವುಗಳನ್ನು ನಾವು ಓದುತ್ತಾ ಓದುತ್ತಾ ಹೋದಂತೆ ಅವು ನಮ್ಮನ್ನು ಆಕರ್ಷಿಸುತ್ತವೆ. ವಚನಗಳು ತನ್ನದೇ ಆದ ಮುಕ್ತ ಛಂದಸ್ಸನ್ನು ಹೊಂದಿವೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಶಿಧರ ತೋಡಕರ್ ಅವರು ಅದ್ಯಕ್ಷತೆ ವಹಿಸಿ ಮಾತನಾಡುತ್ತ, ಪಂಡಿತ ಸಂಗಮೇಶ್ವರ ಗುರವ ಅವರ ಪುಣ್ಯಸ್ಮರಣೆಯು ಕೇವಲ ಸ್ಮರಣೆಯಷ್ಟೇ ಆಗದೇ ಅದೊಂದು ವಚನ ಗಾಯನ ಕಲಿಕಾ ಶಿಬಿರವಾಗುವುದರ ಮೂಲಕ ಅರ್ಥಪೂರ್ಣಗೊಂಡಿದೆ ಎಂದರು.

ಉಪಾಧ್ಯಕ್ಷರಾದ ಪಿ.ಎಚ್. ನೀರಲಕೇರಿ, ಪಂಡಿತ ಕೈವಲ್ಯಕುಮಾರ ಗುರವ, ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ, ಡಾ. ಸುಮಿತ್ರಾ ಕಾಡದೇವರಮಠ, ಪಂಡಿತ ನಂದಿಕೇಶ್ವರ ಗುರವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರವಿ ಕುಲಕರ್ಣಿ ನಿರೂಪಿಸಿದರು. ಭಾರತಿ ಪರ್ವತೀಕರ ಪ್ರಾರ್ಥಿಸಿದರು. ವಿದುಷಿ ಸುಜಾತಾ ಗುರವ ಸ್ವಾಗತಿಸಿದರು.  ಅಶೋಕ ಕಮ್ಮಾರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
1 Comment
  • ಓಂಶ್ರೀಗುರುಬಸವಲಿಂಗಾಯನಮಃ
    ಶ್ರೀ.ಮ.ನಿ.ಪ್ರ.ಸ್ವ. ಮುರುಘರಾಜೇಂದ್ರಕೋರಣೇಶ್ವರ ಮಹಾಸ್ವಾಮಿಗಳು ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿ,ಅಸೂಟಿ, ಹೊಸಕೇರಿಬಸವನಗರ, ಮೆಣಸಗಿ,ಖಜೂರಿ,
    ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಅರಹಟ್ಟಿ
    ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ವಚನ ಸಾಹಿತ್ಯ ಅರಿವಿನ ಮಹಾಮಾರ್ಗದರ್ಶನ ಸತಿಪತಿ ಸಂಸ್ಕಾರ ಅಗತ್ಯ ಆದರ್ಶ ಜೀವನ ಸ್ವಾರ್ಥಕತೆಯ ಮಂಥನ ವಚನ ಸಂವಿಧಾನ ಸದಾಕಾಲ ಪ್ರಸ್ತುತ ವಿಶ್ವ ದರ್ಶನ ಅಂತರಾತ್ಮ ಚೇತನ ,ವಿಶ್ವದ ಪ್ರಪ್ರಥಮ ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡಿದ ಪ್ರಪ್ರಥಮ ಮಹಿಳಾ ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ ವಿಶ್ವಗುರುಬಸವಣ್ಣನವರ ವಿಶ್ವಬಸವಧರ್ಮ ವಿಶ್ವಕಾಯಕ ಪ್ರತಿಜ್ಞೆಯ ಸಂಕೇತ ವಚನ

    ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮರೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ. ಘನಶಿವಭಕ್ತರಿಗೆ ಬಡತನವಿಲ್ಲ, ದುಷ್ಟ ಸಂಹಾರ ಮಾಡುವ ಗಣಾಚಾರ ಅಳವಡುವುದು, ಆಸೆ ದುರಾಸೆಯ ಕುರಿತು ಆಸೆಯೆಂಬುದು, ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮದೂತರಿಗಲ್ಲದೆ, ಅಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ. ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.ಅಂದಿನ ವಚನ ಸಾಹಿತ್ಯ ಅಡಿಗೆ ಮನೆ ಅರಿವಿನ ಮಹಾಮನೆಯಾದರೆ ,ಭ್ರಷ್ಟಾಚಾರ ಅನಾಚಾರ ನಡೆಯಲು ಸಾಧ್ಯವಿಲ್ಲ, ಅಸೆ ಅರಿವಿನ ಗುಣ ಪ್ರಸಾದ ಪಾದೋದಕ ಪಡೆಯುವವರು ನಿಜ ಜೀವನ ಸ್ವಾರ್ಥಕತೆಯ ಬದುಕಿನ ಅವಿಭಾಜ್ಯ ಅಂಗ ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;
    ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;
    ಕೊಡದೆ ತ್ಯಾಗಿ ಎನಿಸಿಕೊಂಬುದು
    ಮುಡಿಯಿಲ್ಲದ ಶೃಂಗಾರ;
    ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ
    ಸುಜಲವ ತುಂಬಿದಂತೆ,
    ಮಾರಯ್ಯಪ್ರಿಯ
    ಅಮರೇಶ್ವರಲಿಂಗವ ಮುಟ್ಟದ ಭಕ್ತಿ. ಹೊರಜಗತ್ತಿನ ಜೀವನ ಸಾಗಿಸುವವರು ನಿಜತ್ಯಾಗ ಆಡಂಬರ ಗದ್ದಲ .ಶಬ್ದ ಸ್ಪರ್ಶ ರೂಪ ರಸ ಗಂಧ ಸೂಕ್ಷ ಕ್ರಿಯೆ .ಪೂಜಿಸುವ ಕ್ರಿಯಾಬದ್ಧ ಆಚರಣೆ ಮುಖ್ಯ ದೇಹದ ಶೃಂಗಾರ ಆಡಂಬರ ಅವಶ್ಯವಿರುವದಿಲ್ಲ, ನೋಟ,ಕೂಟ,ಮಾಟ, ಮಾಂಸಪಿಂಡ ,ಮೂತ್ರಪಿಂಡವಾಗಬೇಕುಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣಬಂದಿತ್ತು.
    ಮಾಟವುಳ್ಳನ್ನಕ್ಕ ಮಹಾಪ್ರಮಥರ
    ಭಾಷೆ ಭಾಗ್ಯ ದೊರೆಕೊಂಡಿತ್ತು.
    ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ
    ಕೋಲ ಹಿಡಿದಂತಾಯಿತ್ತು.
    ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ,
    ಮಾರಯ್ಯಪ್ರಿಯ ಅಮರೇಶ್ವರಲಿಂಗವ ಕೂಡುವ ಕೂಟ. ಮನಸ್ಸಿನ ಮೇಲೆ ಪರಿಣಾಮ ಪ್ರಮಥರ ವಚನ ಸಾಹಿತ್ಯ ಅರಿವಿನ ಮಹಾಮಾರ್ಗದರ್ಶನ, ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ
    ನೇಮ ನಿತ್ಯ ಕೃತ್ಯ ಸಕಲ ಸಮೂಹ ನಿತ್ಯನೇಮದ
    ಜಂಗಮಭಕ್ತರು ಗಣಂಗಳು ಮುಂತಾದ ಸಮೂಹಸಂಪದಕ್ಕೆ
    ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ,
    ಮಾರಯ್ಯಪ್ರಿಯ ಅಮರೇಶ್ವರಲಿಂಗದ
    ಮನೆಯಲ್ಲಿ ಆದಿಹಿತೆಂದು. ಸತ್ಯ ಶುದ್ಧ ಕಾಯಕ ದಾಸೋಹ ತ್ರಿಕಾಲ ಸತ್ಯ ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
    ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
    ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
    ಮಾರಯ್ಯಪ್ರಿಯ ಅಮರೇಶ್ವರಲಿಂಗದಪ್ರಭುದೇವರು, ಸಿದ್ಧರಾಮಯ್ಯದೇವರು,
    ಮಡಿವಾಳ ಮಾಚಯ್ಯ,ಬಸವಣ್ಣ, ಚೆನ್ನಬಸವಣ್ಣ
    ಮೊದಲಾದ ಸಕಲಪ್ರಮಥಗಣಂಗಳು
    ನೇಮ ನಿತ್ಯದ ಜಂಗಮಲಿಂಗ
    ಮುಂತಾದ ಸರ್ವಸಮೂಹಕ್ಕೆ
    ತ್ರಿಕರಣಶುದ್ಧವಾಗಿ ಭಾವ ಭ್ರಮೆಯಡಗಿ
    ಜೀವವಿಕಾರ ನಿಂದು
    ಮಾಡುವ ಮಾಟದ ಸಮಯದಿಂದವೆ
    ಮಾರಯ್ಯಪ್ರಿಯ ಅಮಲೇಶ್ವರಲಿಂಗದಲ್ಲಿಯೆ ಐಕ್ಯ. ಸೇವೆಯುಳ್ಳನ್ನಕ್ಕರ. ಸತ್ಯ ಶುದ್ಧ ಪ್ರಮಾಣಿಕ ಇರುವವರಿಗೆ ಯಾವದೇ ಬಡತನವಿಲ್ಲ, ಮಾಡಿ ನೀಡಿ ಹೋದೆನೆಂಬಾಗ
    ಕೈಲಾಸವೇನು ಕೈಕೂಲಿಯೆ?
    ಮುಂದೊಂದ ಕಲ್ಪಿಸದೆ,
    ಹಿಂದೊಂದ ಭಾವಿಸದೆ ಸಲೆಸಂದಿದ್ದಾಗವೆ
    ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೆ ಕೈಲಾಸ. ಕೈಲಾಸ ಎಂಬ ಬಲ್ಲಿದರೆಂಬ ಮಾತು ಪ್ರಸಾದ ಕಾಯ ಶ್ರಮ ಸಾರ್ಥಕ ಜೀವನ ನಡೆ ನುಡಿ ಚೈತನ್ಯ ಅಂಗೈಯಲ್ಲಿ ಅರಿವೆ ಗುರು ಆಚಾರವೆ ಲಿಂಗ ಮಾಡುವ ಮಾಟವುಳ್ಳನ್ನಕ್ಕ
    ಬೇರೊಂದು ಪದವನರಸಲೇತಕ್ಕೆ?
    ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ
    ಕೈಲಾಸವೆಂಬ ಆಸೆ ಬೇಡ.
    ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೇ ಕೈಲಾಸ. ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ನಿಜ ಬದುಕಿನ ನಿತ್ಯ ಕಾಯಕ ಸಂವಿಧಾನ ವಿಶ್ವವಚನ ವಿಶ್ವವಿದ್ಯಾಲಯ ವಿಶ್ವಪಥ ವಿಶ್ವದರ್ಶನ ನಿಜಬೆಳಕು, ಸಸಿಗೆ ನೀರೆರೆದಡೆ ಎಳಕುವುದಲ್ಲದೆ,
    ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ
    ಎಳಕುವುದೆ ಮಾರಯ್ಯಾ?
    ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ
    ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಿರಯ್ಯಾ. ಭೂಮಿಯ ಮೇಲಿನ ಪ್ರಕೃತಿಯ ಭವ್ಯ ಸೃಷ್ಟಿಸುವ ಆಚರಣೆ ಮುಖ್ಯ ಶ್ರೀ.ಮ.ನಿ.ಪ್ರ.ಸ್ವ.ಜ. ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ,ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿ ಅಸೂಟಿ ಹೊಸಕೇರಿಬಸವನಗರ ಮೆಣಸಗಿ,ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಅರಹಟ್ಟಿ

Leave a Reply

Your email address will not be published. Required fields are marked *