‘ಎಲ್ಲರೂ ಕಲೆಕ್ಟರ್ ಆಗಬೇಕೆಂದರೆ ಸಾಧ್ಯವೇ… ತಮ್ಮ ತಮ್ಮ ಸ್ಥಾನದಲ್ಲಿ ಎಲ್ಲರೂ ಸಂತುಷ್ಟರಾಗಿ ಕೆಲಸ ಮಾಡಬೇಕು‘
ಬೆಂಗಳೂರು
ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಹುಟ್ಟಿನಿಂದಲೇ ಜನರ ಸ್ಥಾನಮಾನ, ಕಾಯಕ, ಘನತೆ ನಿರ್ಧರಿಸುವ ಕ್ರೂರ ವ್ಯವಸ್ಥೆಯಾಗಿ ವರ್ಣಾಶ್ರಮ ಪದ್ಧತಿ ಬೆಳೆದಿದೆ.
12ನೇ ಶತಮಾನದಲ್ಲಿ ಬಸವಾದಿ ಶರಣರು ವರ್ಣಾಶ್ರಮ ಪದ್ದತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರು.
ಈ ಕಾರಣದಿಂದಲೇ ಭಾರತದ ಹಲವಾರು ಸಮುದಾಯಗಳು 900 ವರ್ಷವಾದರೂ ಇನ್ನೂ ಬಸವಾದಿ ಶರಣರನ್ನು ಆರಾಧಿಸುತ್ತಿವೆ, ಅನುಸರಿಸುತ್ತಿವೆ.
ಸಮಾಜದಲ್ಲಿ ರಭಸದಿಂದ ಬೆಳೆಯುತ್ತಿರುವ ಬಸವ ಪ್ರಜ್ಞೆಯನ್ನು ದಾರಿ ತಪ್ಪಿಸಲು ಸಂಘ ಪರಿವಾರ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ನಡೆಸುತ್ತಿದೆ. ಅದರ ನೇತೃತ್ವವನ್ನು ವಿರಕ್ತ ಪರಂಪರೆಯ ಪ್ರಮುಖ ಮಠದ ಪೀಠಾಧಿಪತಿಯಾದರೂ ದಾರಿ ತಪ್ಪಿದ ಮಗನಂತೆ ನಡೆದುಕೊಳ್ಳುತ್ತಿರುವ ಕನ್ನೇರಿ ಸ್ವಾಮಿಗೆ ಒಪ್ಪಿಸಿದೆ.
ಈಚೆಗೆ ಶಹಾಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಸಮಾಜದಲ್ಲಿ ಸಮಾನತೆ ಕೇಳುತ್ತಿರುವ ಬಸವತತ್ವ ಪ್ರತಿಪಾದಕರನ್ನು ವಿರೋಧಿಸುವ ಭರದಲ್ಲಿ ಅವರನ್ನು ‘ಕಮ್ಯುನಿಸ್ಟ’ರೆಂದು ಕರೆದು ಕನ್ನೇರಿ ಸ್ವಾಮಿ ಮತ್ತೆ ವರ್ಣಾಶ್ರಮ ಪದ್ಧತಿ ಆಚರಿಸಲು ಕರೆ ಕೊಟ್ಟರು.
“ಈ ಕಮ್ಯುನಿಸ್ಟರು ಎಲ್ಲದರಲ್ಲಿಯೂ ಸಮಾನತೆ ಕೇಳುತ್ತಿದ್ದಾರೆ. ನಮ್ಮ ಶರೀರದಲ್ಲಿಯೇ ಸಮಾನತೆಯಿಲ್ಲ. ಒಂದು ಬೆರಳು ದೊಡ್ಡದಿದೆ, ಒಂದು ಬೆರಳು ಚಿಕ್ಕದಿದೆ, ಎಲ್ಲಾ ಒಂದೇ ಸೈಜಿಗೆ ಬಂದರೆ ಸಮಾನತೆ ಆಗೋದಿಲ್ಲ,” ಎಂದರು.
ಎಲ್ಲರೂ ಕಲೆಕ್ಟರ್ ಆಗಬೇಕೆಂದರೆ ಸಾಧ್ಯವೇ, ಎಸ್ಪಿನೂ ಬೇಕು ಪೊಲೀಸ್ ಪೇದೆಗಳೂ ಬೇಕು, ಎಂದು ಹೇಳಿದರು.
“ಸಮಾಜದಲ್ಲಿರುವವರು ತಮ್ಮ ತಮ್ಮ ಸ್ಥಾನದಲ್ಲಿ ಸಂತುಷ್ಟರಾಗಿ ಎಲ್ಲರ ಕೂಡಿ ಕೆಲಸ ಮಾಡಬೇಕು ಅನ್ನೋ ಭಾವನೆ ತಾಳಬೇಕು,” ಎಂದು ಕನ್ನೇರಿ ಸ್ವಾಮಿ ಕರೆ ಕೊಟ್ಟರು.
ಸಂಘ ಪರಿವಾರ ಮೆಚ್ಚಿಸಲು ಮತ್ತೆ ವರ್ಣಾಶ್ರಮ ಸ್ಥಾಪಿಸಲು ಹೊರಟಿರುವ ಕನ್ನೇರಿ ಸ್ವಾಮಿಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.
ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮುತ್ತು ಬಿಳೆಯಲಿ ಜಾತಿ ವ್ಯವಸ್ಥೆ ಇದ್ದಂತೆಯೇ ಇರಲಿ ಎಂದು ಪ್ರತಿಪಾದಿಸುತ್ತ ಕನ್ನೇರಿ ಸ್ವಾಮಿ ನೇರ ಅಸ್ಪೃಶ್ಯತೆ ಆಚರಣೆಯನ್ನು ಬೆಂಬಲಿಸಿದ್ದಾರೆ, ದಲಿತರನ್ನು ಹೀಯಾಳಿಸಿದ್ದಾರೆ, ಎಂದು ಟೀಕಿಸಿದ್ದಾರೆ.

ಈ ಕನ್ಹೆರಿ ಸ್ವಾಮಿಗೆ ಹಿಂದುತ್ವದ ಬಗ್ಗೆ ವ್ಯಾಮೋಹ ಅಭಿಮಾನ ಇರುವುದರಿಂದ, ಒಂದು ಉಡುಪಿ ಮಠಕ್ಕೆ ಇವನನ್ನು ಸ್ವಾಮಿ ಯಾಗಿ ಸಂಘ ಪರಿವಾರ ಮತ್ತು ಹಿಂದುತ್ವ ಪಡೆ ಮಾಡಲಿ.
ಲಿಂಗಾಯತ ಮಠಕ್ಕೆ ಇವನು ಸ್ವಾಮಿಯಾಗಬಹುದು ಯಾಕೆಂದರೆ ಇದು ಬಸವ ತತ್ವ ಯಾರು ಬೇಕಾದರೂ ಸ್ವಾಮಿಯಾಗಬಹುದು , ಅದೇ ಉಡುಪಿ ಹಿಂದೂ ಮಠದ ಇವನು ಪೀಠ ಏರಿ ತೋರಿಸಲಿ ಅಲ್ಲಿ ಇದೆ ಕನ್ಹೆರಿ ಯನ್ನು ಒಳಗೆ ಬಿಡಲ್ಲ
Though I do not belong to the religion and practices of Lingayat religion I am very proud of Basavanna who brought respect to labour and labours which was neglected so to say condemnable which is the base of the survival of the society so to say survival of the all living beings.Kadasiddeshwar Swamiji what he says about Varnadhrama is acceptable because already the Varnashrama exist in our society today we all have accepted and tolerating but the non acceptance is Varnashrama by birth not by achievement of the individual.Swamiji I think has not been clear what for the demand and agitation is going on.Basavanna being against the established system brought new way and thoughts into practice which loved and accepted by many thus it was the revolution of the practices.I firmly think and accept that Basavanna originated new religion (thoughts and practices) which called Lingayat religion . The demand is to Government to accept Lingayat religion as a separate independent religion like already accepted Jain Sick….. etc and constitutional benifits be extended to Lingayats.The language calling Lingayat Talibanis and Communist Lingayat are not the words to be used by the cultured person being shown as adviser and ideal to the community.Swamijis of Lingayat Peethas are for the community not for self how they are to be called is also ……
ಬಸವಾದಿ ಶರಣರ ಸಿದ್ಧಾಂತ ಮಠದ ಅನ್ನ ಉಂಡು ಆ ಸಿದ್ಧಾಂತಕ್ಕೆ ದ್ರೋಹವೆಸಗುತ್ತಿರುವ ಇವರನ್ನು ಮಠದಿಂದ ನಿರ್ಗಮಿಸಲಿ, ವರ್ಣಾಶ್ರಮದ ಮಠದ ಅಧಿಪತಿ ಆಗಲಿ.
ಆತ ತನ್ನ ಸ್ಥಾನ ಏನು ಎಂದು ಪರೋಕ್ಷವಾಗಿ ತಿಳಿಸಿದ್ದಾನೆ.
ಆ ಧರ್ಮದಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರಾರೂ ಸ್ವಾಮೀಜಿಯಾಗಲು ಸಾಧ್ಯವಿಲ್ಲ, ನನ್ನನ್ನೂ ಸೇರಿಸಿ ಎಂದು ನುಡಿದಿದ್ದಾನೆ.
ಆತನಿಗೆ ಸದ್ಗತಿ ದೊರೆಯಲಿ.