ಬಸವಕಲ್ಯಾಣ :
ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದ ಇಲ್ಲಿನ ಹರಳಯ್ಯ ಗವಿಯಲ್ಲಿ ಶರಣು ಶರಣಾರ್ಥಿ ಸಮಾವೇಶ ಹಾಗೂ ವಿಶ್ವಕಲ್ಯಾಣ ಮಕ್ಕಳ ಪರಿಷತ್ತು ಸಹಯೋಗದಲ್ಲಿ ಮಕ್ಕಳ ಕೂಟ ನಡೆಯಿತು.

ಲಿಂಗಾಯತ ಧರ್ಮದ ಅಷ್ವಾವರಣಗಳ ಕುರಿತು ವಿಘ್ನೇಶ, ಶ್ರಾವ್ಯ, ಶ್ರಾವಣಿ, ನೈತಿಕ ಖಂಡಾಳೆ, ಸ್ವರಾಜ ಧನಗಾವೆ, ನಾಗರಾಜ ಧನಗಾವೆ, ಅಬೋಲಿ ಬಿರಾದಾರ, ಸ್ವಾತಿ ಮಂಜುನಾಥ ಮಾತನಾಡಿದರು.
ಪಂಚಾಚಾರಗಳ ಕುರಿತು ಖುಷಿ ನಾಗಣ್ಣ, ಪ್ರಿಯಾಂಕಾ ನರೇಂದ್ರ, ಪ್ರೀತಿ ನಾಗಣ್ಣ, ಶರಣ ಸಂತೋಷ, ಸಾನ್ವಿ ನಾಗಣ್ಣ ಮಾತನಾಡಿದರು.
ಷಟಸ್ಥಲ ಕುರಿತು ಶ್ರಾವ್ಯ ಮಾತನಾಡಿದರು.

ವಿವೇಕಾನಂದ ಗಡ್ಡೆ, ಶ್ರೀಶೈಲಾ ವಡ್ಡೆ, ವಚನಶ್ರೀ ಗಡ್ಡೆ, ಆರಾಧ್ಯ, ವೀರಬಸವ ಕನ್ನಾಡೆ, ಬಸವಣ್ಣ, ಅಕ್ಕಮಹಾದೇವಿ ಸಿದ್ಧರಾಮ, ಅಲ್ಲಮಪ್ರಭು, ಚೆನ್ನಬಸವಣ್ಣ ಅವರ ಜೀವನದ ಬಗ್ಗೆ ಕನ್ನಡ ಮತ್ತು ಇಂಗ್ಲೀಷನಲ್ಲಿ ಮಾತನಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.
ಬಸವರಾಜ, ಭೂಮಿಕಾ, ವಿರೇಶ, ವರ್ಷಾ ವಚನ ಗಾಯನ ಮಾಡಿದರು.
ಪೃಥ್ವಿ ಸೂರ್ಯಕಾಂತ, ಸಾಯಿಪ್ರಿಯ ರಗಟೆ, ಸೃಷ್ಠ ಜೋಕಾರೆ ಅವರಿಂದ ವಚನ ನೃತ್ಯಗಳು ನಡೆದವು.
ಶ್ರೀಶೈಲಾ, ಅನಿರುದ್ಧ, ವಿವೇಕ ಶರಣ ಪಾತ್ರಧಾರ ಪ್ರದರ್ಶಿಸಿದರು. ನೀಲಾಂಬಿಕಾ ಮಡಿವಾಳ, ಸ್ಪೂರ್ತಿ ಮಜಗೆ, ಶಿವಾಂಶ ಮಜಗೆ ವಚನ ಪಠಣ ಮಾಡಿದರು.

ಗಂಗಾಂಬಿಕಾ ಮಡಿವಾಳ ‘ಎ’ದಿಂದ ‘ಝಡ್’ವರಗೆ ಶರಣರ ಹೆಸರುಗಳನ್ನು ಸ್ಮರಿಸಿದರು. ಸಕಲೇಶ ಹೂಗಾರ ಧ್ವಜಗೀತೆ ಹಾಡಿದರೆ, ಸಕಲೇಶ ರಾಜೇಶ್ವರ, ಸಂಸ್ಕೃತಿ ಪಾಟೀಲ, ಸಂಸ್ಕೃತಿ ರಾಜೇಶ್ವರ ಗುರುಪೂಜೆ ನಡೆಸಿಕೊಟ್ಟರು.
ವಚನಾ, ಅನನ್ಯ, ಆಯುಷ್ಮಾನ ಅವರಿಂದ ನಡೆದ ಕರಾಟೆ ಪ್ರದರ್ಶನ ಗಮನ ಸೆಳೆದವು.
ಸಾನಿಧ್ಯ ವಹಿಸಿಕೊಂಡಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಮಕ್ಕಳಿಗೆ ಹೇಳಿ ಕಲಿಸುವ ಆಚರಣೆಗಿಂತ ಅವರು ಅನುಕರಣೆಯಿಂದ ಕಲಿಯುವ ವಿಚಾರಗಳು ಹೆಚ್ಚಾಗಿವೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ತಾಯಿಯೇ ಮೊದಲ ಗುರು, ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ತಾಯಿಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಬೇರೆ ಬೇರೆ ವಯಸ್ಸಿನ ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಅವರಲ್ಲಿ ಬಾಳುವ ಸಂಸ್ಕೃತಿ ಮೈಗೂಡುತ್ತದೆ ಎಂದರು.
ಬಸವಕಲ್ಯಾಣ ಕ್ಷೇತ್ರ ಸಮಿತಿಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಾತೂರಿನ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಾಧವರಾವ ಪಾಟೀಲ ಟಾಕಳಿಕರ ಮಾತನಾಡಿ, ಬಸವಾದಿ ಶರಣರು ಬದುಕಿನಲ್ಲಿ ಕಂಡುಕೊಂಡ ಅನುಭವಗಳೇ ವಚನಗಳ ಮೂಲಕ ಅನಾವರಣಗೊಂಡವು. ಅಂತಹ ಅನರ್ಘ್ಯರತ್ನಗಳಾದ ವಚನಗಳನ್ನು ಪಸರಿಸುವ ಕೆಲಸದಲ್ಲಿ ಮಕ್ಕಳ ಕೂಟದ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ನಿವೃತ್ತ ಡೀನ್ ಅಮರನಾಥ ಸೋಲಪುರೆ, ಸೋಲಾಪುರದ ವಿಜಯಕುಮರಾ ಹತ್ತೂರೆ ನಾಂದೇಡದ ಪ್ರೊ. ಶೇಷವರಾವ ಸೇಟೆ, ರೇಣುಕಾ ಹೋಗ್ತಾಪೂರೆ, ಕವಿತಾ ರಾಜೋಳೆ ಮಾತನಾಡಿದರು. ಹರಳಯ್ಯ ಸಮಾಜದ ಮುಖಂಡ ಸುಧಾಕರ ಗೋಖಲೆ ಧ್ವಜಾರೋಹಣ ಗೈದರು.
ಗಂಗಾಂಬಿಕಾ ಮಡಿವಾಳ ಸ್ವಾಗತಿಸಿದರೆ, ಶ್ರೀಶೈಲಾ ವಡ್ಡೆ ನಿರೂಪಿಸಿದರು. ಉಷಾ ಶಿವಶಂಕರ ಕನ್ನಾಡೆ ಪ್ರಸಾದ ದಾಸೋಹಗೈದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
