ಕೊಳ್ಳೇಗಾಲ
ಪಟ್ಟಣದ ಪ್ರಮುಖ ವೃತ್ತಕ್ಕೆ ಬಸವೇಶ್ವರ ವೃತ್ತ ಎಂದು ಹೆಸರಿಡಲು ಬಸವಪರ ಸಂಘಟನೆಗಳ ಮುಖಂಡರು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮನವಿ ಮಾಡಿದ್ದಾರೆ.
ಕಳೆದ ರವಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರಿಗೆ ಮನವಿಪತ್ರ ಸಲ್ಲಿಸಲಾಯಿತು.
ಇದಕ್ಕೆ ಸ್ಪಂದಿಸಿದ ಶಾಸಕರು ವೃತ್ತಕ್ಕೆ ಬಸವೇಶ್ವರರ ಹೆಸರು ಇಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
“ಸುತ್ತೂರು ಶ್ರೀಗಳು ಕೊಳ್ಳೇಗಾಲ ಪಟ್ಟಣದ ಪ್ರಮುಖ ವೃತ್ತಕ್ಕೆ ಶ್ರೀಬಸವೇಶ್ವರ ವೃತ್ತ ಎಂಬ ಹೆಸರನ್ನು ನಾಮಕರಣ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ. ಅದರಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಸವೇಶ್ವರರ ವೃತ್ತದ ನಾಮಕರಣ ಮಾಡಲು ಪ್ರಯತ್ನ ಮಾಡುತ್ತೇನೆ,” ಎಂದರು.

