ಮೂರು ದಿನಗಳ ಬಸವ ಸಂಸ್ಕೃತಿ ಚಿಂತನ ಶಿಬಿರ ಶುರು

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಪಟ್ಟಣದಲ್ಲಿ ಮೂರು ದಿವಸಗಳ ಬಸವ ಸಂಸ್ಕೃತಿ ಚಿಂತನ ಶಿಬಿರದ ಉದ್ಘಾಟನೆ ಮಂಗಳವಾರ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಡಾ.ಬಸವಲಿಂಗ ಪಟ್ಟದ್ದೇವರು ಇಂತಹ ಶಿಬಿರಗಳಿಂದ ಯುವಕರಲ್ಲಿ ಬಸವತತ್ವದ ನಿಜವಾದ ಅರಿವು ಮೂಡುತ್ತದೆ. ಮೂರು ದಿವಸಗಳಲ್ಲಿ ಬಸವಾದಿ ಶರಣರ, ಲಿಂಗಾಯತ ಧರ್ಮದ ಕುರಿತು ಸುಮಾರು ೨೦ ವಿಷಯಗಳ ಮೇಲೆ ವಿದ್ವಾಂಸರಿಂದ ಅನುಭಾವ ಚಿಂತನೆ ನಡೆಯಲಿದೆ ಎಂದು ಹೇಳಿದರು.

ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ನೆರವೇರಿಸಿ, ಶರಣರು ಸಮಸಮಾಜದ ಜೊತೆಗೆ ದುಶ್ಚಟ, ದುರ್ವ್ಯಸನಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಮಾಡಿದರು. ವ್ಯಸನಮುಕ್ತ ಸಮಾಜದ ಮೌಲ್ಯಗಳನ್ನು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಸಮಾಜದಲ್ಲಿ ಜಾಗೃತಿ ಮಾಡುವ ಕಾರ್ಯ ಮಾಡುತ್ತಿವೆ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.

ಜಗನ್ನಾಥರೆಡ್ಡಿ ಅವರು ಅಧ್ಯಕ್ಷತೆ ವಹಿಸಿದರು. ಪೂಜ್ಯ ಗುರುಬಸವ ಪಟ್ಟದ್ದೇವರು ಆಶಯ ನುಡಿಗಳನ್ನು ನುಡಿದರು. ಪೂಜ್ಯ ಶಿವಾನಂದ ಸ್ವಾಮಿಗಳು, ಲಾವಣ್ಯ ಮಾತಾಜಿ ಅವರು ನೇತೃತ್ವ ವಹಿಸಿದರು.

ಡಾ.ಎಸ್.ಬಿ.ದುರ್ಗೆ ಅವರಿಂದ ಬಸವಗುರುಪೂಜೆ ನೆರವೇರಿತು. ಜಯಪ್ರಕಾಶ ಸದಾನಂದೆ, ಕಲ್ಯಾಣರಾವ ಶಿವಣಕರ್, ಜಗನ್ನಾಥ ಪತಂಗೆ ಅವರು ಮುಖ್ಯಅತಿಥಿಗಳಾಗಿ ಆಗಮಿಸಿದರು. ಗೌತವಬುದ್ಧ, ನಂದೀಶ ಎಂ.ಎಸ್., ಕೆ.ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.  ಸಂಗಮೇಶ ತೊಗರಖೇಡೆ ನಿರೂಪಿಸಿದರು. ಸಚೀನ್ ಕೌಂಟೆ ಶರಣು ಸಮರ್ಪಣೆ ಮಾಡಿದರು.

ಬಸವಕಲ್ಯಾಣದ ಅನುಭವಮಂಟಪ ಆವರಣದಲ್ಲಿ ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ, ಬಸವಕಲ್ಯಾಣ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಕಾರ್ಯಕ್ರಮ ಆಯೋಜಿತವಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *