ಮೇ 31 ಶಿವಗಂಗೆ ಸ್ವಚ್ಛ ಮಾಡಲಿರುವ ಲಿಂಗಾಯತ ಯುವ ಬಳಗ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಲಿಂಗಾಯತ ಯುವ ಬಳಗವು ಮೇ 31, ರವಿವಾರದಂದು ಮುಂಜಾನೆ 6 ಗಂಟೆಗೆ ಶಿವಗಂಗೆ ಪರ್ವತದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಪರಿಸರ ಕಾಪಾಡುವ ಹಿತದೃಷ್ಟಿಯಿಂದ ಈ ಬೆಟ್ಟದಲ್ಲಿ ಇರುವ ಪ್ಲಾಸ್ಟಿಕ್ ಬಾಟಲಿ, ಕವರ್ ಮತ್ತು ಗಾಜಿನ ವಸ್ತುಗಳನ್ನು ಸ್ವಚ್ಛಗೊಳಿಸಿ, ಕ್ಷೇತ್ರದ ಸ್ವಚ್ಛತೆ ಕಾಪಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇತ್ತೀಚೆಗೆ ಬೆಂಗಳೂರಿನ ಹಾಗೂ ಸುತ್ತಮುತ್ತಲ ಪ್ರದೇಶಗಳ ನೈಸರ್ಗಿಕ ವಾತಾವರಣ ಹದಗೆಡುತ್ತಿದ್ದು, ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಲು ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಯುವ ಬಳಗದ ಸ್ಥಾಪಕರಾದ ಶಿವಾನಂದ ಗುಂಡಾನವರ, ವಿವೇಕ, ಪ್ರಕಾಶ ಮತ್ತು ದೀಪಕ ಅವರ ನೇತೃತ್ವದಲ್ಲಿ ಶಿವಗಂಗೆ ಪರ್ವತ ಸ್ವಚ್ಚತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

೭ ವರ್ಷ ಪೂರ್ಣಗೊಂಡಿರುವ ಲಿಂಗಾಯತ ಯುವ ಬಳಗಕ್ಕೆ ಅನೇಕ ಅನೇಕ IT ಉದ್ಯಮದ ಸದಸ್ಯರಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಮಹಾಮನೆ, ಬಯಲಲ್ಲಿ ಬಯಲು, ಬಯಲಲ್ಲಿ ಬೆರಗು ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.

ಬಸವ ಅರಿವು, ಜನಸ್ನೇಹಿ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವುದು ಸಂಘಟನೆಯ ಉದ್ದೇಶ, ಎಂದು ಶಿವಾನಂದ ಗುಂಡಾನವರ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 8867734336ಗೆ ಕರೆ ಮಾಡಲು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • , ನಮ್ಮ ಲಿಂಗವಂತ ಯುವಕರು ಕೋಮುವಾದಿ ಆರೆಸೆಸನ್ನು ಧಿಕ್ಕರಿಸಿ ಅದರಿಂದ ನಮ್ಮ ಯುವತರುಣರನ್ನು ದೂರ ಇರುವಂತೆ ಎಚ್ಚರಿಕೆ ವಹಿಸಬೇಕು. ನಮ್ಮ ಸೇವೆ ನಮಗೆಲ್ಲರಿಗೂ ಮಾರ್ಗದರ್ಶನ ವಾಗಬೇಕು.

Leave a Reply

Your email address will not be published. Required fields are marked *