ಮುಖ್ಯ ಅತಿಥಿಯಾಗಿ ಬರಲಿರುವ ನಿವೃತ ಪೊಲೀಸ್ ಅಧಿಕಾರಿ ಅಜಯಕುಮಾರ್ ಸಿಂಗ್
ಬೆಂಗಳೂರು
ಇತ್ತೀಚಿಗೆ ಪ್ರಕಟವಾದ “ಅನನ್ಯ ಅಲ್ಲಮ” ಅಲ್ಲಮರ ಎಪ್ಪತ್ತೈದು ಆಯ್ದ ವಚನಗಳಲ್ಲಿ ಪ್ರಯೋಗವಾಗಿರುವ ಅನನ್ಯ ಪದಗಳನ್ನು ಗುರುತಿಸಿ ವಿಶ್ಲೇಷಿಸಿರುವ ವಿಭಿನ್ನ ವಚನ ಪುಸ್ತಕ.
ಹರಿಹರ ಶಿವಕುಮಾರ ಬರೆದಿರುವ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಕುರಿತು ಒಂದು ಸಂವಾದ ಕಾರ್ಯಕ್ರಮ ಇದೇ ಮೇ 31 ರಂದು ಬೆಂಗಳೂರಿನಲ್ಲಿ ಏರ್ಪಾಡಾಗಿದೆ.ಮುಖ್ಯ ಅತಿಥಿಗಳಾಗಿ ಕರ್ನಾಟಕದ ನಿವೃತ ಐಪಿಎಸ್ ಅಧಿಕಾರಿ ಅಜಯಕುಮಾರ್ ಸಿಂಗ್ ಆಗಮಿಸುತಿದ್ದಾರೆ.
ಕರ್ನಾಟಕದ ಮಾಜಿ ಡಿಜಿ ಮತ್ತು ಐಜಿಪಿ ಆಗಿಯೂ ಕಾರ್ಯನಿರ್ವಹಿಸಿದ್ದ ಸಿಂಗ್, ಪ್ರಸಿದ್ಧ ಹಿಂದಿ ಕವಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಅಲ್ಲಮನ ವಚನಗಳಿಂದ ಪ್ರಭಾವಿತರಾದ ಅಜಯ ಕುಮಾರ್ ಸಿಂಗ್
“ಅಲ್ಲಮ ಮತ್ತು ಕಬೀರ” ವಿಷಯದ ಮೇಲೆ ಪ್ರೌಢ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದವರು.
ಕನ್ನಡದ ಪ್ರಮುಖ ಕಥೆಗಾರರಾದ ಕುಸುಮ ಆಯರಹಳ್ಳಿ ಸಂವಾದವನ್ನು ನಡೆಸಿಕೊಡಲಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು “ಅನನ್ಯ ಅಲ್ಲಮ” ಪ್ರಕಾಶಕ ಹರಿವು ಬುಕ್ಸ್ ಪ್ರಕಾಶನ ಸಂಸ್ಥೆ ಮನವಿ ಮಾಡಿದೆ.
ದಿನಾಂಕ : 31 ಮೇ 2026 ಭಾನುವಾರ
ಬೆಳಿಗ್ಗೆ 10.30
ಸ್ಥಳ : ನಂ 67, ಸೌತ್ ಅವೆನ್ಯೂ ಕಾಂಪ್ಲೆಕ್ಸ್,
ಡಿವಿಜಿ ರಸ್ತೆ, ನಾಗಸಂದ್ರ ವೃತ್ತ ಹತ್ತಿರ,
ಬಸವನಗುಡಿ ಬೆಂಗಳೂರು 560004
