ಚಾಮರಾಜನಗರ: ಬಸವ ಕಪ್ ಗೆದ್ದ ಆಲೂರು ಕ್ರಿಕೆಟ್ ತಂಡ

ಬಸವ ಮೀಡಿಯಾ
ಬಸವ ಮೀಡಿಯಾ

ಚಾಮರಾಜನಗರ:

ಬಸವ ಬಳಗದ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಕಪ್ -1ನೇ ಆವೃತ್ತಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನ ಆಲೂರು ತಂಡವು ಪ್ರಥಮ ಬಹುಮಾನ ಪಡೆದು ಕಪ್ ಜೊತೆಗೆ 1,11,011  ನಗದು ಬಹುಮಾನವನ್ನು ಪಡೆದುಕೊಂಡಿತು.

ಸುಮಾರು 14 ತಂಡಗಳು ಭಾಗವಹಿಸಿದ್ದ, ಪಂದ್ಯದಲ್ಲಿ ಆಲೂರು ತಂಡ ಹಾಗೂ ನಂಜನಗೂಡು ಇಲೆವೆನ್ ಫೈಟರ್ಸ್ ತಂಡಗಳು ಅಂತಿಮ ಪ್ರವೇಶ ಪಡೆದಿದ್ದವು.

ಫೈನಲ್‌ನಲ್ಲಿ ಆಲೂರು ತಂಡವು ನಂಜನಗೂಡು ಇಲೆವೆನ್ ಫೈಟರ್ಸ್ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಪಡೆದುಕೊಂಡಿತು. ನಂಜನಗೂಡು ಇಲೆವೆನ್ ಫೈಟರ್ಸ್ ತಂಡವು ದ್ವಿತೀಯ ಸ್ಥಾನ ಪಡೆದು ಕಪ್ ಜೊತೆ 55,555 ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಬಸವಬಳಗದ ಶಂಕರ, ಅಶ್ವಿನ್, ರುದ್ರಸ್ವಾಮಿ, ಶಶಾಂಕ, ಸುಪ್ರೀತ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಪ್ರಥಮ ಬಹುಮಾನವನ್ನು ಉದ್ಯಮಿ ಕಟ್ನವಾಡಿ ಕೆ.ಎಂ. ಮಂಜುನಾಥ, ದ್ವಿತೀಯ ಬಹುಮಾನವನ್ನು ಕಲ್ಪತರು ಶಿವು ನೀಡಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ಕಟ್ಟವಾಡಿ ಮಂಜುನಾಥ, ಕಲ್ಪತರು ಶಿವು, ತಾಲೂಕ ಪಂಚಾಯತ ಮಾಜಿ ಸದಸ್ಯ ಹಾಗೂ ಉದ್ಯಮಿ ದಯಾನಿಧಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮುಖಂಡರಾದ ಬಿಸಲವಾಡಿ ಉಮೇಶ, ಹೊಸೂರು ಶಮಿತ್, ಆಲೂರು ಬಾಬಣ್ಣ, ಮಲ್ಲೇಶ್ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *