ಜೂನ್ 13 ಆಳಂದ ಅನುಭವ ಗ್ರೀನ್ ಸಿಟಿ ಉದ್ಘಾಟನೆ

ಕಲಬುರಗಿ:

ಬೀದರನ ವಚನ ಸಮೂಹ ಸಂಸ್ಥೆ ವತಿಯಿಂದ ಅನುಭವ ಗ್ರೀನ್ ಸಿಟಿ ಯೋಜನೆಯ ಅಡಿಗಲ್ಲು, ವಚನ ಗ್ಲೋಬಲ್ ವೆಂಚರ್ಸ್ ಲಿಮಿಟೆಡ್ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭ ಜೂ. 13ರಂದು ಬೆಳಗ್ಗೆ 9 ಗಂಟೆಗೆ ಆಳಂದ ಪಟ್ಟಣದ ತಾಲ್ಲೂಕು ಆಡಳಿತ ಸೌಧ ಹತ್ತಿರವಿರುವ ಅನುಭವ ಗ್ರೀನ್ ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೇರೆ ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಹುಲಸೂರು ಡಾ. ಶಿವಾನಂದ ಸ್ವಾಮೀಜಿ, ಇಳಕಲ್ ಗುರುಮಹಾಂತ ಸ್ವಾಮಿಗಳು, ಬೆಂಗಳೂರಿನ ಚೆನ್ನಬಸವಾನಂದ ಸ್ವಾಮೀಜಿ, ಗುರುಮಠಕಲ್ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ನಿರಗುಡಿ ಹವಾ ಮಲ್ಲಿನಾಥ ಸ್ವಾಮೀಜಿ, ಮಾದನಹಿಪ್ಪರಗಾ ಅಭಿನವ ಸಿದ್ಧಲಿಂಗ ಶಿವಯೋಗಿಗಳು, ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಬೆಳವಿಯ ಶರಣಬಸವ ದೇವರು, ಬಸವಕಲ್ಯಾಣ ಗಾಯತ್ರಿ ತಾಯಿ, ಆಳಂದ ತೋಂಟದಾರ್ಯ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಮತ್ತಿತರರು ಸಮ್ಮುಖ ವಹಿಸಲಿದ್ದಾರೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಡಿಗಲ್ಲು ನೆರವೇರಿಸುವರು. ನೂತನ ಸಂಸ್ಥೆಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದು, ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ ವೃಕ್ಷೋತ್ಸವಕ್ಕೆ ಚಾಲನೆ ನೀಡುವರು. ಶಾಸಕ ಬಿ.ಆರ್. ಪಾಟೀಲ ಬಸವ ಗುರು ಪೂಜೆ ನೆರವೇರಿಸುವರು. ಡಾ.‌ ದಾಕ್ಷಾಯಿಣಿ ಅವ್ವ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಸುಭಾಷ ಗುತ್ತೇದಾರ, ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಪಿ.ಎನ್. ಶಾ, ಚಂದ್ರುಶೆಶು ಆಗಮಿಸಲಿದ್ದಾರೆ ಎಂದರು.

ಆರ್.ಜಿ. ಶೆಟಗಾರ, ಶಿವಕುಮಾರ ಸಾಲಿ, ಅಶೋಕ ಘೂಳಿ, ಚಂದ್ರಕಾಂತ ಬಿರಾದಾರ ಇತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *