ಸಾಣೇಹಳ್ಳಿ:
ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ಇಲ್ಲಿನ ಶ್ರೀ ಶಿವಕುಮಾರ ರಂಗ ಪ್ರಯೋಗಶಾಲೆ 2026-27 ನೆಯ ಸಾಲಿನ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನಿಸಿದೆ.
ಕನಿಷ್ಟ ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಆಗಿದ್ದು, ಪದವೀಧರರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಭಾರತೀಯ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿ, ಕನ್ನಡ ರಂಗಭೂಮಿ, ಸಾಹಿತ್ಯ ಪರಂಪರೆ, ಅಭಿನಯ, ಆಹಾರ್ಯ ಮತ್ತು ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ಪ್ರಸಿದ್ಧ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ನಡೆಯುವವು.

ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮುಂತಾದ ಕಾರ್ಯಾಗಾರಗಳ ಜೊತೆಗೆ ಕಾವ್ಯ, ಸಿನಿಮಾ, ಚಿತ್ರಕಲೆ, ವಚನ ಸಾಹಿತ್ಯ ಕುರಿತಾದ ಕಮ್ಮಟಗಳು ಮತ್ತು ನಾಲ್ಕರಿಂದ ಐದು ನಾಟಕಗಳ ಅಭ್ಯಾಸ ಪ್ರದರ್ಶನ ನಡೆಯುವವು.
ರಂಗಶಿಕ್ಷಣದ ಎರಡನೆಯ ವರ್ಷದ ಮುಂದುವರಿಕೆಯ ಹಂತವಾಗಿ ಒಂದು ವರ್ಷದ ಶಿವಸಂಚಾರ ತಿರುಗಾಟದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುತ್ತದೆ.
ಆಸಕ್ತರು www.theatreschoolsanehalli.in ಈ ವೆಬ್ ಸೈಟ್ ವಿಳಾಸದಲ್ಲಿ ಪ್ರವೇಶ ಅರ್ಜಿಗಳನ್ನು ಡೌನ್ ಲೋಡ್ ಮಾಡಿ ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರು ಜೂನ್ 29 ಮತ್ತು 30 ರಂದು ಸಾಣೇಹಳ್ಳಿಯಲ್ಲಿ ನಡೆಯುವ ಸಂದರ್ಶನಲ್ಲಿ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9448398144, 9880872740, 9480282791 ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ತಿಳಿಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
