ಬೀದರ:
‘ಬಸವಾದಿ ಶರಣರ ಹಿಂದೂ ಸಮಾವೇಶ’ ನಿಷೇಧಿಸಲು ರಾಷ್ಟ್ರೀಯ ಬಸವದಳ, ಲಿಂಗಾಯತ ಸಮನ್ವಯ ಸಮಿತಿ, ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳು ಸಚಿವ ಈಶ್ವರ ಖಂಡ್ರೆ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿ ತೀವ್ರವಾಗಿ ಒತ್ತಾಯಿಸಿವೆ.
ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ, ಆದರೆ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದು ಬೇಡ ಹಾಗೂ ಸಮಾವೇಶದಲ್ಲಿ ಬಸವಾದಿ ಶರಣರ ವಚನಗಳನ್ನು ಅವಹೇಳನ ಮಾಡುವದು ಖಂಡನೀಯವಾಗಿದೆ.

ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ವಚನಗಳು ತಿರಚುತ್ತ ವಚನಗಳ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದೆಂದು ತಾವು ಜಿಲ್ಲಾಡಳಿತಕ್ಕೆ ನಿರ್ದೇಶನ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಪೂಜ್ಯ ಡಾ.ಸಿದ್ಧರಾಮ ಶರಣರು ಬೆಲ್ದಾಳ, ಪೂಜ್ಯ ಜಗದ್ಗುರು ಡಾ.ಚೆನ್ನಬಸವಾನಂದ ಸ್ವಾಮೀಜಿ, ಪೂಜ್ಯ ಸತ್ಯಾದೇವಿ ಮಾತಾಜಿ, ರಾಜಶ್ರೀ ಸ್ವಾಮಿ, ಶಿವರಾಜ ಪಾಟೀಲ ಅತಿವಾಳ, ಶ್ರೀಕಾಂತ ಸ್ವಾಮಿ, ಶಿವಶರಣಪ್ಪ ಪಾಟೀಲ ಹಾರುರಗೇರಿ, ರವಿಕಾಂತ ಬಿರಾದಾರ, ಧರ್ಮೇಂದ್ರ , ಓಂಪ್ರಕಾಶ ರೊಟ್ಟಿ, ಜಗದೀಶ್ವರ ಬಿರಾದಾರ, ಶ್ರೀನಾಥ ಕೋರೆ, ಮುಂತಾದವರು ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

ಕನ್ನೇರಿ ಸ್ವಾಮಿಗಳನ್ನು ಬಹಿಷ್ಕರಿಸುವುದು ಸಂತೋಷದ ವಿಷಯ