ಬಸವಕಲ್ಯಾಣ
ಕನ್ನೇರಿ ಸ್ವಾಮಿಯ ಸಮಾವೇಶದ ವಿರುದ್ಧ ನಡೆಯುತ್ತಿರುವ ಬಸವ ಸಂಘಟನೆಗಳ ಪ್ರತಿಭಟನೆಯನ್ನು ಪರಿಗಣಿಸದೆ ಜೂನ್ 28 ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬೇಕೆಂದು, ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಂಗಳವಾರ ಹೇಳಿದರು.
ಬಸವಕಲ್ಯಾಣ ತಾಲ್ಲೂಕಿನ ತಡೋಳಾದಲ್ಲಿ ಸಚಿವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಿ ಹಿಂದೂ ಸಮಾವೇಶದ ಬಗ್ಗೆ ಮನವಿ ಮಾಡಿದರು.
“ಕನ್ನೇರಿ ಸ್ವಾಮಿಯ ಕಠೋರ ಮಾತಿನ ಹಿಂದೆ ನೋವಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಿಂದೂ ಧರ್ಮಕ್ಕೆ ಚ್ಯುತಿ ತರುವುದಕ್ಕೆ ಯಾರೂ ಪ್ರಯತ್ನಿಸಬಾರದು. ಶಿವಶರಣರು ಹಿಂದೂ ವಿರೋಧಿಗಳಲ್ಲ. ಕೆಲ ಲೋಪದೋಷಗಳನ್ನು ಸರಿಪಡಿಸಿ ಧರ್ಮದ ಪುನರುತ್ಥಾನಕ್ಕೆ ಕಾರಣರಾಗಿದ್ದಾರೆ,” ಎಂದರು.
“ಶಿವಶರಣರ ಹಿಂದೂ ಸಮಾವೇಶದಲ್ಲಿ, ಶರಣರ ನಿಜ ಸಂಗತಿಗಳನ್ನು ಸಾಮಾನ್ಯರಿಗೆ ತಿಳಿಸಿಕೊಡುವ ಅಗತ್ಯವಿದೆ. ಈ ದಿಸೆಯಲ್ಲಿ ಕನ್ನೇರಿ ಸ್ವಾಮಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದನ್ನು ಅಲ್ಲಗಳೆಯಲಾಗದು. ಅವರ ಮಾತು ನಿಷ್ಠುರವಾಗಿದ್ದರೂ ಸತ್ಯದ ಪರವಾಗಿದೆ,” ಎಂದು ಹೇಳಿದರು.
ಭಕ್ತಿ ಭಂಡಾರಿ ಬಸವಣ್ಣನವರ ಧಾರ್ಮಿಕ, ಸಾಮಾಜಿಕ ಕ್ರಾಂತಿ ಸಾಮಾನ್ಯವಾದುದ್ದಲ್ಲ. ಇವ ನಮ್ಮವ ಇವ ನಮ್ಮವ ಎಂದು ಸಾರಿದ ಬಸವಣ್ಣನವರ ವಿಶಾಲ ಮನೋಭಾವ ಅರಿಯದೆ ಕೆಲ ಮಠಾಧೀಶರು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಸಮಾವೇಶ ವಿರೋಧಿಸುವ ಮಠಾಧೀಶರು ಹಠಕ್ಕೆ ಬೀಳಬಾರದು. ಅದರಿಂದ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಪುಣ್ಯ ಭೂಮಿಯಲ್ಲಿ ಸಂಘರ್ಷಕ್ಕೆ ಅವಕಾಶ ಕೊಡದೆ ಎಲ್ಲರೂ ಸೇರಿ ಸಲಹೆ ಶುದ್ಧ ಮನಸ್ಸಿನಿಂದ ಕಾರ್ಯಕ್ರಮ ಮಾಡುವುದು, ‘ ಎಂದು ಸಲಹೆ ನೀಡಿದರು.
‘ಈಶ್ವರ ಖಂಡ್ರೆ ಅವರು ಬರೀ ಸಚಿವರಲ್ಲ. ಮುಂದೆ ಮುಖ್ಯಮಂತ್ರಿಯೂ ಆಗುವ ಅರ್ಹತೆ ಇದೆ. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಆದ್ದರಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಜವಾಬ್ದಾರಿ ಅವರದ್ದಾಗಿದೆ, ಎಂದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಬಸವಾದಿ ಶರಣರಾಗಲಿ, ರೇಣುಕಾದಿ ಆಚಾರ್ಯರಾಗಲಿ ಇವರ ಬಗ್ಗೆ ಎಲ್ಲರೂ ಗೌರವ ಹೊಂದಿರಬೇಕು. ಅವರವರ ತತ್ವ, ಸಿದ್ಧಾಂತ ಬಗ್ಗೆ ಅಭಿಮಾನ ಹೊಂದಿರಬೇಕು. ಆದರೆ, ಇದರ ಹೆಸರಲ್ಲಿ ಬೈದಾಡಿಕೊಳ್ಳುವುದು ಬೇಡ. ಇದರಿಂದ ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆಗೆ ಭಂಗ ಬರುತ್ತದೆ. ಈ ವರ್ತನೆ ಯಾರಿಗೂ ಶೋಭೆ ತರದು’ ಎಂದು ಹೇಳಿದರು.
‘ಸಮಾವೇಶದ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ಶಾಂತಿ, ಸುವ್ಯವಸ್ಥೆ ಕಾಪಾಡುವುದಕ್ಕೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ,’ ಎಂದು ತಿಳಿಸಿದರು.
ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿದರು. ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ, ಬಜರಂಗದಳ ಸಂಚಾಲಕ ರವಿ ನಾವದ್ಗೇಕರ್, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಸಾಯಗಾಂವ ಶಿವಾನಂದ ಸ್ವಾಮೀಜಿ, ರಾಜೇಶ್ವರ ಘನಲಿಂಗ ರುದ್ರಮುನಿ ಶಿವಾಚಾರ್ಯ, ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯ, ಖೇರ್ಡಾ ಶಿವಲಿಂಗೇಶ್ವರ ಸ್ವಾಮೀಜಿ, ಕಿಟ್ಟಾ ಸಿದ್ದೇಶ್ವರ ಶಿವಾಚಾರ್ಯ ಮತ್ತಿತರರು ಇದ್ದರು.

ಗುರು ಬಸವಣ್ಣನವರ ಬಸವ ತತ್ವದ ವಿರೋಧಿಗಳು ಒಂದಾಗಿದ್ದಾರೆ ಅದು ಸಾಮಾನ್ಯ
ಪಂಚಾಚಾರ್ಯರು ಯಾವಾಗಲೂ ಬಸವಾದಿ ಶರಣರ ವಿರೋಧಿಗಳೇ , ಕನ್ಯೇರಿ ಸ್ವಾಮಿ ಪರ ವಹಿಸುವ ಇವರು ಲಿಂಗಾಯತರ ಹಿತವನ್ನು ಬಯಸಲಾರರು , ಧಿಕ್ಕಾರವಿರಲಿ ಇವರ ನಡೆಗೆ
Pachapita swamiji don’t have proper stand
ಪಂಚಾಚಾರ್ಯರು ಮೊದಲಿನಿಂದಲೂ ಬಸವಣ್ಣನವರ ಹಿಂಗೂ ಲಿಂಗಾಯತ ಧರ್ಮದ ಅಪ್ಪಟ ವಿರೋಧಿಗಳು,ಇಂಥವರ ಹೇಳಿಕೆಗಳು ನಮಗೆ ಹೊಸದೇನಲ್ಲ, ಅದಕ್ಕೆ ಈ ಹೊಲಸು ಬಾಯಿ ಬಗ್ಗೆ ಸಹಾನುಭೂತಿ ಬೇಡವೇ ಬೇಡ.
ಇವರೆಲ್ಲರೂ ಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ವಿರೋಧಿ ಗುಂಪಿನವರೇ. ಬಸವಾದಿ ಶರಣರನ್ನು ಹಿಂದು ಸಂಸ್ಕೃತಿಗೆ ಸೇರಿಸುವ ಇವರ ಕುತಂತ್ರಕ್ಕೆ ಸಚಿವರು ಕಿವಿಗೊಡಬಾರದು. ಲಿಂಗಾಯತರು ಯಾರೂ ಯಾರ ವಿರೋಧಿಗಳು ಅಲ್ಲ. ಲಿಂಗಾಯತ ಧರ್ಮದ ಪರ. ಬಸವಾದಿ ಶರಣರ ಪರ. ಶಾಂತಿ, ಸಹೋದರತೆ, ಅಹಿಂಸೆ, ಸಮಾನತೆ, ಪರಧರ್ಮ ಸಹಿಷ್ಣುತೆ ಪರ.
Those who have assassinated 1lakh 96 sharanas in Basavakalyan in 12th century are slowly coming infront of
Society with the support of RSS and other insane and immature selfish supporters.
Dharma drohigalu ee panchapeetadavaru
ಇವರು ಯಾವಾಗಲೂ ಬಸವಾದಿ ಶರಣರ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ, ಈಗ್ಗೆ ಸುಮಾರು ೨೫ ವರ್ಷಗಳ ಹಿಂದೆಯೇ ಇವರು ತಮ್ಮ ಮೆರವಣಿಗೆಯ ವೇಳೆಯಲ್ಲಿ ತಲೆಯ ಮೇಲೆ ಬಸವಣ್ಣನವರ ಭಾವಚಿತ್ರ ಬರಬಾರದೆಂದು ಅದನ್ನು ತೆರವುಗೊಳಿಸಿದವರು. ಬಸವಾದಿ ಶರಣರ ತತ್ವ ಗಳ ಪ್ರಸಾರದಿಂದ ತಮ್ಮ ಉರವಣಿಗೆ ಮೆರವಣಿಗೆಗಳಿಗೆ ಮತ್ತು ಮನುಷ್ಯ ಮನುಷ್ಯರಲ್ಲಿ ಭಿನ್ನವಾಗಿ ಕಾಣುವ ಶ್ರೇಣೀಕೃತ ವ್ಯವಸ್ಥೆಗೆ ಸಂಚಕಾರ ಬರುವದು ಶತಸಿದ್ಧವೆಂಬುದು ಬಹಳದಿನಗಳ ಹಿಂದೆಯೇ ಇವರಿಗೆ ಅರಿವಾಗಿದೆ ಹೀಗಾಗಿ ಶರಣರ ನಿಜತತ್ವಗಳು ಜನಮಾನಸಕ್ಕೆ ಗೊತ್ತಾಗಬಾರದೆಂದು ತಮ್ಮ ಶಕ್ತಿಮೀರಿ ವ್ಯವಸ್ಥಿತ ಕಾರ್ಯಗಳನ್ನು ನಿರ್ವಹಿಸುತ್ತಲೇ ಬರುತ್ತಿದ್ದಾರೆ. ಇವೆಲ್ಲವೂ ಆ ಹಿಡನ್ ಅಜೆಂಡಾದ ಭಾಗವೆ.
ಇವರನ್ನು ನಂಬಿ ಕೆಡುವುದು ಬೇಡ ಎಚ್ಚರ ವಹಿಸಿ ನಮ್ಮ ಬಸವ ಧರ್ಮದ ಹಾದಿಯಲ್ಲಿ ನಡೆಯೋಣ. ಬಸವ ಫೋಟೋ ಇಲ್ಲದ ಮಠ ನಮಗೆ ಬೇಡ. 👏🏻ಶರಣು 👏🏻👏🏻
ಇವರೆಲ್ಲ ಬಸವಾದಿ ಶರಣರ ಲಿಂಗಾಯತ ಧರ್ಮದ ಅತ್ಯಂತ ವಿರೋಧಿಗಳು. ಇವರು ಈಗಷ್ಟೇ ಬಸವಣ್ಣನವರ ಬಗ್ಗೆ ಒಂದಿಷ್ಟು ಮಾತಾಡುತ್ತಾರೆ. ಇವರಾರೂ ತಮ್ಮ ಮಠಗಳಲ್ಲಿ ಯಾವುದೇ ಶರಣರ ಪೋಟೋ ಕೂಡಾ ಇರಲ್ಲ.. ಶರಣು ಶರಣಾರ್ಥಿಗಳು 🙏🙏🌺
ರಂಭಾಪುರಿ ಸ್ವಾಮಿ ಬಸವಣ್ಣ ವಿರೋಧಿ ಸ್ವಾಮಿ. ಬಸವಣ್ಣನವರ ಪೋಟೋ ಇದ್ದರೆ, ಕಿತ್ತು ಹಾಕಿಸಿ ಮುಂದೆ ಸಾಗಿದ ಕೀರ್ತಿ ಈ ಸ್ವಾಮಿಗೆ ಇದೆ.
ಈತನಿಗೆ ತನ್ನ ಜಾತಿ ಜಂಗಮರ ಪಂಗಡ, ವೀರಶೈವ ಪಂಗಡಕ್ಕೆ ಶೂದ್ರರಿಗೆ ಕೊಡುವ ಮೀಸಲಾತಿ ಬೇಕಿದೆ. ಹರಿಜನ ಮೀಸಲಾತಿ ಹಿಂದೂ ಧರ್ಮ ಅಂದರೆ ಮಾತ್ರ ಕೊಡುತ್ತಾರೆ. ಕಾರಣ ಲಿಂಗಾಯತರಿಗೆ ಹಿಂದೂ ಅನ್ನುವ ಅಯೋಗ್ಯ ಕನ್ಹೆರಿ ಸ್ವಾಮಿಗೆ ಈತ ಬೆಂಬಲ ಮಾಡುತ್ತಿದ್ದಾನೆ.
ಒಂದು ವೇಳೆ ಖಂಡ್ರೆ, ವೀರಶೈವರ ಮಹಾಸಭೆ ಮಾಜಿ ಅಧ್ಯಕ್ಷ ಅಂತ, ಬಸವಣ್ಣನವರಿಗೆ ಅವಮಾನ ಮಾಡಿದವರಿಗೆ ಬೆಂಬಲ ಮಾಡಿದರೆ, ಉತ್ತರ ಚುನಾವಣೆ ಯಲ್ಲಿ ಲಿಂಗಾಯತರು, ಬಸವ ಭಕ್ತರು ಕೊಡಬೇಕಾಗಿ ವಿನಂತಿ
ವಿರೂಪಾಕ್ಷಿ