ಕನ್ನೇರಿ ಸ್ವಾಮಿ ಬಿಟ್ಟು ಸಮಾವೇಶ ನಡೆಯಲಿ: ಹೈಕೋರ್ಟ್‌ಗೆ ಸರಕಾರದ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಾದಿ ಶರಣರ ಹಿಂದೂ ಸಮಾವೇಶದ ಬಗ್ಗೆ ಇಂದು ಮಧ್ಯಾಹ್ನ ಹೈಕೋರ್ಟ್ ಆದೇಶ

ಕಲಬುರಗಿ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಜೂನ್ 28 ಕನ್ನೇರಿ ಸ್ವಾಮಿಯ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಇಂದು ಮಧ್ಯಾಹ್ನ ಹೈಕೋರ್ಟ್ ಆದೇಶ ನೀಡಲಿದೆ.

ಈ ವಿಷಯವಾಗಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಎಸ್. ಆರ್. ಕೃಷ್ಣಕುಮಾ‌ರ್ ಮಂಗಳವಾರ ಮಧ್ಯಾಹ್ನ ನಡೆಸಿದರು.

ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕನ್ನೇರಿ ಸ್ವಾಮಿ ಬಸವಾನುಯಾಯಿಗಳನ್ನು ಬಸವ ತಾಲಿಬಾನಿಗಳೆಂದು ನಿಂದಿಸಿ ಬಸವಣ್ಣನರ ಕರ್ಮಭೂಮಿಗೆ ಬರುತ್ತಿದ್ದಾರೆ. ಇದರಿಂದ ಕಾನೂನು-ಸುವ್ಯವಸ್ಥೆ ಸಮಸ್ಯೆ ಹುಟ್ಟುಹಾಕುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸ್ಥಳೀಯ ಆಡಳಿತದ ಆತಂಕವಾಗಿದೆ ಎಂದರು.

ಅವರು ಅಲ್ಲಿಗೆ ಬರುವುದಾದರೆ ಅದು ಸ್ಥಳೀಯರ ಭಾವನೆಗಳಿಗೂ ಧಕ್ಕೆಯಾದಂತೆ. ಹೀಗಾಗಿ ಕನ್ನೇರಿ ಸ್ವಾಮೀಜಿ ಹೊರತುಪಡಿಸಿ ಬಸವ ಕಲ್ಯಾಣ ಸಮಾವೇಶ ನಡೆಯಬೇಕೆಂದು ವಾದಿಸಿದರು.

ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿರುವುದರಿಂದ, ಅಗತ್ಯ ಭದ್ರತಾ ಪಡೆಗಳನ್ನು ನಿಯೋಜಿಸಲು ಸರ್ಕಾರಕ್ಕೆ ಸಮಯಾವಕಾಶವಿಲ್ಲ ಎಂಬುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಕನ್ನೇರಿ ಸ್ವಾಮಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ವೆಂಕಟೇಶ ದಳವಾಯಿ ಯವರು, ಕನ್ನೇರಿ ಮಠದಿಂದಲೇ ಸಮಾವೇಶ ಆಯೋಜಿಸಲಾಗುತ್ತಿದೆ. ಕಾಡಸಿದ್ದೇಶ್ವರ ಗುರುಗಳಿಲ್ಲದೆ ಸಮಾವೇಶ ಹೇಗೆ ಸಂಘಟಿಸಲು ಸಾಧ್ಯ ಎಂದು ಕೇಳಿದರು.

ಕನ್ನೇರಿ ಸ್ವಾಮಿ ಬಸವಕಲ್ಯಾಣದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಪರವಾನಿಗೆ ನೀಡುವಂತೆ ಹಿಂದಿನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

ಇಂದು ಬೆಳಗ್ಗೆ ಯಾವುದೇ ವಿವಾದಾತ್ಮಕ ವಿಚಾರಗಳನ್ನು ಬಸವ ಕಲ್ಯಾಣದ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಪ್ರಸ್ತಾಪಿಸುವುದಿಲ್ಲವೆಂದು ಅವರ ವಕೀಲರಾದ ವೆಂಕಟೇಶ ದಳವಾಯಿ ಹೈಕೋರ್ಟ್‌ಗೆ ಸಲ್ಲಿಸುವ ನಿರೀಕ್ಷೆ ಇದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment
  • ಬಸವ ಪರ ಸಂಘಟನೆಗಳ ಪರವಾಗಿ ವಾದ ಮಾಡುತ್ತಿರುವ
    ವಕೀಲರಿಗೆ ಸಂಘಟಕರು ಕನ್ನೇರಿ ಸ್ವಾಮೀಜಿ ಇಲ್ಲದೇ
    ಬಸವಾದಿ ಶರಣರ ಹೆಸರು ಕೈ ಬಿಟ್ಟು ಕೇವಲ
    ಹಿಂದೂ ಸಮಾವೇಶ ಮಾಡಲು ಒಪ್ಪಿಗೆ ಸೂಚಿಸುವುದು ರೊಂದಿಗೆ ಬಸವಾದಿ ಶರಣರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುವುದಕ್ಕೆ, ಹಿಂದುತ್ವಕ್ಕೆ ಸಮೀಕರಿಸುವ
    ಮಾತುಗಳನ್ನು ಆಡದೆ ಹಿಂದೂ ಧರ್ಮಕ್ಕೆ ಅನ್ವಯವಾಗುವ
    ಮಾತಗಳನ್ನಾಡಿದರೆ ಅವಕಾಶ ನೀಡುವುದಕ್ಕೆ ಒಪ್ಪಿಗೆ ನೀಡಿ.
    ಇದಲ್ಲದೇ ಸರ್ಕಾರವೇ ನ್ಯಾಯಾಲಯ ಮೂಲಕ
    ಕನ್ನೇರಿ ತಂಡಕ್ಕೆ ಮತ್ತು ಬಸವ ಪರ ತಂಡಕ್ಕೆ ಸೈದ್ಧಾಂತಿಕ
    ವಿಷಯಗಳನ್ನು ಆರೋಗ್ಯಕರವಾಗಿ ಚರ್ಚೆಗೆ ಅವಕಾಶ
    ಮಾಡಿ ಜನತಾ ನ್ಯಾಯಾಲಯದಲ್ಲಿ ಇದನ್ನು ಅಂತಿಮಗೊಳಿಸಸಲು ಸೂಚಿಸುವಂತೆ ಒತ್ತಾಯ
    ತರಲಿ ಎಂದು ಎಲ್ಲಾ ಬಸವ ಪರ ಸಂಘಟನೆಗಳಲ್ಲಿ
    ವಿನಂತಿಸುಕೊಳ್ಳುತ್ತೇನೆ.

Leave a Reply

Your email address will not be published. Required fields are marked *