ಕನ್ನೇರಿ ಸ್ವಾಮಿ ಉಪಸ್ಥಿತಿಯಲ್ಲಿಯೇ ಹಿಂದೂ ಸಮಾವೇಶಕ್ಕೆ ಹೈ ಕೋರ್ಟ್ ಅನುಮತಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಷರತ್ತುಬದ್ಧ ಅನುಮತಿ ನೀಡಿದ ಹೈ ಕೋರ್ಟ್

ಕಲಬುರಗಿ

ಬಸವ ಕಲ್ಯಾಣದಲ್ಲಿ ಜೂನ್ 28ರಂದು ಆಯೋಜಿಸಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಕಲಬುರಗಿ ಹೈ ಕೋರ್ಟ್ ಪೀಠದಿಂದ ಕೆಲವು ಷರತ್ತುಗಳೊಂದಿಗೆ ಅನುಮತಿ ದೊರತಿದೆ.

ಈ ಮುಂಚೆ ಸಮಾವೇಶಕ್ಕೆ ತಾಲ್ಲೂಕು ಆಡಳಿತ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಆಯೋಜಕರು ಕಲಬುರಗಿ ಹೈ ಕೋರ್ಟ್ ಮೊರೆ ಹೋಗಿದ್ದರು.

ಈ ವಿಷಯವಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾ‌ರ್ ಇಂದು ಮಧ್ಯಾಹ್ನ ಆದೇಶ ನೀಡಿದರು.

ನ್ಯಾಯಮೂರ್ತಿಗಳು ಸಮಾವೇಶಕ್ಕೆ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಕನ್ನೇರಿ ಸ್ವಾಮಿ ಕಾರ್ಯಕ್ರಮ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಮಾತಾಡುವಂತಿಲ್ಲ. ಅಲ್ಲದೆ ಬೇರೆಯವರು ಕೂಡ ಪ್ರಚೋದನಕಾರಿಯಾಗಿ ಮಾತನಾಡುವಂತಿಲ್ಲ ಎಂದು ಷರತ್ತು ಹಾಕಿದೆ.

ಅಷ್ಟೇ ಅಲ್ಲದೆ ಅರ್ಜಿದಾರಿಂದ ಒಂದು ಪ್ರಮಾಣ ಪತ್ರ ಹಾಗೂ ಕನ್ನೇರಿ ಸ್ವಾಮಿಯಿಂದಲೂ ಎರಡು ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲಾಗಿದೆ.

ಬಸವ ಅನುಯಾಯಿಗಳನ್ನು, ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದ ಕನ್ನೇರಿ ಸ್ವಾಮಿಯನ್ನು ಬಸವ ಕಲ್ಯಾಣ ಪ್ರವೇಶಿಸಲು ಬಿಡುವುದಿಲ್ಲ ಎಂದು ಬಸವ ಸಂಘಟನೆಗಳು ಹಲವಾರು ಪೂರ್ವಭಾವಿ ಸಭೆಗಳನ್ನು ಮಾಡಿ ಹೋರಾಟ ಶುರು ಮಾಡಿದ್ದವು.

ನೆನ್ನೆ ಔರಾದಿನಲ್ಲಿ ಬಸವಾದಿ ಶರಣರನ್ನು ಅವಹೇಳನ ಮಾಡಿದವರನ್ನು ಹಿಂದೂ ಸಮಾವೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಎಚ್ಚರಿಕೆ ನೀಡಿದ್ದರು.

ಸರ್ಕಾರದ ಪರ ಮಂಗಳವಾರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕನ್ನೇರಿ ಸ್ವಾಮಿ ಬಸವಾನುಯಾಯಿಗಳನ್ನು ಬಸವ ತಾಲಿಬಾನಿಗಳೆಂದು ನಿಂದಿಸಿ ಬಸವಣ್ಣನರ ಕರ್ಮಭೂಮಿಗೆ ಬರುತ್ತಿದ್ದಾರೆ. ಇದರಿಂದ ಕಾನೂನು-ಸುವ್ಯವಸ್ಥೆ ಸಮಸ್ಯೆ ಹುಟ್ಟುಹಾಕುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸ್ಥಳೀಯ ಆಡಳಿತದ ಆತಂಕವಾಗಿದೆ ಎಂದಿದ್ದರು.

ಈಗ ವಿರೋಧದ ನಡುವೆಯೂ ಕನ್ನೇರಿ ಸ್ವಾಮಿಯ ಉಪಸ್ಥಿತಿಯಲ್ಲಿಯೇ ಕಾರ್ಯಕ್ರಮ ನಡೆಯುವುದು ಖಚಿತವಾದಂತಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
7 Comments
  • ಲಿಂಗಾಯತ ಪ್ರತಿಪಾದನೆಯ ಹಿಂದೂ ಲಿಂಗಾಯತ ಜನರು ಅಲ್ಲಿ ಇದ್ದರೆ ಯಾವ ರೀತಿ ಹೇಳುತ್ತಾರೆ ಎಂಬುದು ಅರಿತು ಮುಂದೆ ನಡೆ ಇಡುವದು ಸರಿಯಾದ ಕ್ರಮ ಅನುಸರಿಸಿ ಪ್ರತಿ ವಿಚಾರ ಮಂಡಿಸಿ ಅವರನ್ನು ನಮ್ಮ ದಾರಿಗೆ ತರೋದು, ಇಲ್ಲದಿರೆ ದಂಡೋಪಾಯ ಜಾರಿಗೆ ತರೋದು. ಶರಣು 👏🏻👏🏻

  • ಕಾರ್ಯಕ್ರಮ ಮುಂದೂಡುತ್ತಾರೆ. ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಮೇಲ್ಮನವಿ ಅವಕಾಶವನ್ನು ಕಳೆದುಕೊಂಡಿರುತ್ತಾರೆ. ಆದರೆ ಅವರು ಈ ಕಾರ್ಯಕ್ರಮ ಮಾಡದಿದ್ದರೆ ನಂತರದಲ್ಲಿ ದಿನಗಳಲ್ಲಿ ಬೇರೆಕಡೆ ಮಾಡಲು ತೊಂದರೆಯಾಗುತ್ತದೆ.

  • ಬಸವಾದಿ ಶರಣರು ಬೇರೆ ಹಿಂದೂಗಳೇ ಬೇರೆ ಇದನ್ನು ಚೆನ್ನಾಗಿ ಗ್ರಹಿಸಬೇಕು ಸರಕಾರ ಈ ಮೂಲಕ ಕಾನೂನಾತ್ಮಕವಾದ ಕ್ರಮಗಳನ್ನು ಕೈಗೊಳ್ಳಬೇಕು ಕನ್ನೇರಿ ಇದರಿಂದ ಹಿಂದೆ ಸರಿಯಲು ಕೋರ್ಟ್ ಆದೇಶಿಸಬೇಕು.
    ಬಸವ ಭಕ್ತರಿಂದ ಜಾಣತನದ ಕಾನೂನಾತ್ಮಕ ಹೋರಾಟ ತುಂಬಾ ತುಂಬಾ ಅಗತ್ಯ

  • ಕಣ್ಣೀರಿ ಸ್ವಾಮಿಗಳೇ ನೀವು ಯಾವ ರೀತಿ ಬಸವ ಅನುಯಾಯಿಗಳನ್ನು ತಾಲಿಬಾನಿಗಳು ಎಂದು ಉಚ್ಚರಿಸಿದಿರೋ ಗೊತ್ತಾಗ್ತಿಲ್ಲ ನಾವು ಯಾವತ್ತಿದ್ರೂ ಹಿಂದೂಗಳು ವಿರುದ್ದ ಯುದ್ಧ ಮಾಡಿಲ್ಲ ಹಾಗೇನೇ ಯಾವತ್ತೂ ಕೂಡ ಯಾವುದೇ ಉಗ್ರ ಚಟುವಟಿಕೆ ge ಪ್ರಚೋದನೆ ಕೊಟ್ಟಿಲ್ಲ, ನೀವ್ ಮಾಡ್ತಿರೋದು ಉಗ್ರ ಚಟುವಟಿಕೆ ಅಂತ ಅನಿಸುತ್ತೆ ಆದರಿಂದ ಜನರು ಅರ್ಥ ಮಾಡ್ಕೊಂಡು ಈ ಸ್ವಾಮಿ ನ ಆದಷ್ಟು ಸಮಾಜದಿಂದ ದೂರ ಇಡೋದೇ ಒಳ್ಳೇದು ಅನಿಸುತ್ತೆ

  • ಬಸವಾದಿ ಶರಣರ ಎಂದರೆ ಹಿಂದಿನಿಂದಲೂ ಇವರಿಗೆ ಯಾಕಿಷ್ಟು ಉರಿ. ಲಿಂಗಾಯತರಿ ಹೀಗೆ ಸುಮ್ಮನೆ ಬಿಟ್ಟರೆ ಹಿಂದೂ ಧರ್ಮ ಹೇಳಿಕಂೂಳ್ಳಾಕ ಇರಲ್ಲ ಎನ್ನುವ ಭುಗಿಲು ಈ ಜನಕ್ಕೆ. ಕಣ್ಣು ನಮ್ಮದೇ ಬೆರಳು ನಮ್ಮದೇ ಚುಚ್ಚಿ ಆಟವಾಡಿಸುವವರು ಸನಾತನಿಗಳು ಸೂ. ಮಗ ಮುತಾಲಿಕನಂತಹ ಕುತಂತ್ರಿಗಳು ನಮ್ಮ ಜನಕ್ಕೆ ಇದು ಅರ್ಥವಾಗುತ್ತಿಲ್ಲ ಹಿಂದೂ ಹಿಂದೂ ಅಂತ ಹುಚ್ಚು ನಾಯಿಯಂಗ ಕನ್ನೇರಿ ಸುತ್ತ ಕುಂಯ್ ಕುಂಯ್ ಕುಂಯ್ ಕುಂಯ್ ಅಂತ ಗಿರಕಿ ಹೆಗಡೆ ಗಿರಾಕಿಗಳು🤦‍♂️🤦‍♂️🤦‍♂️😡😡

  • ಬಸವಾದಿ ಶರಣರ ಎಂದರೆ ಹಿಂದಿನಿಂದಲೂ ಇವರಿಗೆ ಯಾಕಿಷ್ಟು ಉರಿ. ಲಿಂಗಾಯತರಿ ಹೀಗೆ ಸುಮ್ಮನೆ ಬಿಟ್ಟರೆ ಹಿಂದೂ ಧರ್ಮ ಹೇಳಿಕಂೂಳ್ಳಾಕ ಇರಲ್ಲ ಎನ್ನುವ ಭುಗಿಲು ಈ ಜನಕ್ಕೆ. ಕಣ್ಣು ನಮ್ಮದೇ ಬೆರಳು ನಮ್ಮದೇ ಚುಚ್ಚಿ ಆಟವಾಡಿಸುವವರು ಸನಾತನಿಗಳು ಸೂ. ಮಗ ಮುತಾಲಿಕನಂತಹ ಕುತಂತ್ರಿಗಳು ನಮ್ಮ ಜನಕ್ಕೆ ಇದು ಅರ್ಥವಾಗುತ್ತಿಲ್ಲ ಹಿಂದೂ ಹಿಂದೂ ಅಂತ ಹುಚ್ಚು ನಾಯಿಯಂಗ ಕನ್ನೇರಿ ಸುತ್ತ ಕುಂಯ್ ಕುಂಯ್ ಕುಂಯ್ ಕುಂಯ್ ಅಂತ ಗಿರಕಿ ಹೊಡೆಯುವ ಗಿರಾಕಿಗಳು🤦‍♂️🤦‍♂️🤦‍♂️😡😡

  • ಲಿಂಗಾಯತರೇ ಲಿಂಗಾಯತರಿಗೆ ವೈರಿಗಳು. ಹೆಸರಿಗೆ ಲಿಂಗಾಯತರೆನಿಸಿಕೊಂಡು, ಲಿಂಗಾಯತದ ಎಲ್ಲ ಆದರ್ಶಗಳಿಗೆ ತಿಲಾಂಜಲಿ ಇಟ್ಟ ಹಾಗೂ ಗೊಡ್ಡು ಸಂಪ್ರದಾಯದ ಸನಾತನಿಗಳ ಅಥವಾ ಪುರೋಹಿತ ಶಾಹಿಗಳ ಬಲೆಗೆ ಬೀಳುತ್ತಿರುವ ಲಿಂಗಾಯತರನ್ನು ನೋಡಿದರೆ ಸಿಟ್ಟೂ ಬರುತ್ತದೆ ಮತ್ತೆ ಅನುಕಂಪವೂ ಮೂಡುತ್ತಿದೆ.

Leave a Reply

Your email address will not be published. Required fields are marked *