ಬಸವಕಲ್ಯಾಣ
ಡಾ.ಬಸವಲಿಂಗ ಪಟ್ಟದೇವರು ಬಸವಕಲ್ಯಾಣದಲ್ಲಿ ಶಾಂತಿ ಭಂಗ ಮಾಡುತ್ತಿದ್ದು, ಅವರು ಬಸವಕಲ್ಯಾಣಕ್ಕೆ ಬಂದರೆ ಘೇರಾವ್ ಹಾಕಿ ಧಿಕ್ಕಾರ ಕೂಗುತ್ತೇವೆ ಎಂದು ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲ್ ರಗಟೆ ಎಚ್ಚರಿಸಿದ್ದಾರೆ.
ನಗರದ ಬಸವೇಶ್ವರ ದೇವಸ್ಥಾನದ ಕಾರ್ಯಾಲಯದಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗು ವಿಶ್ವಸ್ಥ ಸಮಿತಿ ವತಿಯಿಂದ ವಿಶ್ವಗುರು ಬಸವಣ್ಣನವರ ಅರಿವಿನ ಮನೆಯ ವಿವಾದ ಕುರಿತು ಶುಕ್ರವಾರ ಸಾಯಂಕಾಲ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಾ.ಬಸವಲಿಂಗ ಪಟ್ಟದೇವರು ಅರಿವಿನ ಮನೆಯ ಪರಿಸರದ ಕುರಿತು ವಿವಾದ ಎಬ್ಬಿಸುವ ಕೆಲಸ ಮಾಡಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರಿಂದ ಸಮಾಜ ಒಡೆಯುವ ಕೆಲಸ ನಡೆಯುತ್ತಿದ್ದು, ಇದನ್ನು ನಾವು ಖಂಡಿಸುತ್ತೆವೆ ಎಂದರು.
ಅರಿವಿನ ಮನೆಯಲ್ಲಿ ಹಡಪದ ಅಪ್ಪಣ್ಣನವರ ಗವಿ ಇರುವ ಯಾವುದೇ ಕುರುಹುಗಳಾಗಲಿ ಅಥವಾ ನಾಮಫಲಕಗಳಾಗಲಿ ಇಲ್ಲ. ಅರಿವಿನ ಮನೆ ಪರಿಸರವು ಬಸವಣ್ಣ, ಅಕ್ಕ ಗಂಗಾಬಿಕೆ ಹಾಗೂ ನಿಲಾಂಬಿಕೆ, ಅವರಿಗೆ ಮಾತ್ರ ಸಂಬಂಧಿಸಿದ್ದು ಇದುವರೆಗೂ ಅಲ್ಲಿ ಹಡಪದ ಅಪ್ಪಣ್ಣಗವಿ ಇರುವುದಕ್ಕೆ ಯಾವುದೆ ಸಾಕ್ಷಿಗಳಿಲ್ಲ.

ನಾವು 80 ವರ್ಷಗಳಿಂದ ಬಸವೇಶ್ವರ ದೇವಸ್ಥಾನ ಅರಿವಿನ ಮನೆ ಸೇರಿ ಎಲ್ಲಾ ಗವಿಗಳನ್ನು ನೊಡಿಕೊಳ್ಳುತ್ತಿದ್ದು, ಇದುವರೆಗೂ ಹಡಪದ ಅಪ್ಪಣ್ಣನವರ ಗವಿ ಇರುವುದರ ಬಗ್ಗೆ ಕುರುಹುಗಳಿಲ್ಲ. ಅರಿವಿನ ಮನೆಯಲ್ಲಿ ಅಪ್ಪಣ್ಣನವರ ನೂತನ ಗವಿ ಮಾಡುವುದು ತಪ್ಪಾಗುತ್ತದೆ. ಇಲ್ಲಿನ ಬಿಕೆಡಿಬಿ ಇಲಾಖೆಯವರ ಬಳಿಯು ಅದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ, ಹಾಗಾಗಿ ಯಾರಿಗೂ ಸಹ ಒಂದಿಂಚು ಜಾಗ ನೀಡುವುದಿಲ್ಲ ಎಂದು ಅವರು ಸ್ಪಷ್ಟ
ಪಡಿಸಿದರು.
ಡಾ.ಬಸವಲಿಂಗ ಪಟ್ಟದೇವರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ, ಅವರು ಅನುಭವ ಮಂಟಪದ ಅಧ್ಯಕ್ಷರಲ್ಲ, ಸ್ವಯಂ ಘೋಷಿತ ಅಧ್ಯಕ್ಷರು ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಶಶಿಕಾಂತ್ ದುರ್ಗ, ಮಲ್ಲಿಕಾರ್ಜುನ್ ಕುರಕೊಟೆ, ಬಸವರಾಜ್ ಭಾಲ್ಕಿ, ಬಸವರಾಜ್ ಕೊರಕೆ, ಸುನಿಲ್ ಪಾಟೀಲ್, ರಾಜು ಮಂಠಾಳೆ, ಶಿವಕುಮಾ ಬಿರಾದರ್, ಗುಂಡುರೆಡ್ಡಿ, ಸುರೇಶ್ ಸ್ವಾಮಿ ಹಾಗೂ ಸೋಮಶೇಖ ವಸ್ತ್ರದ್ ಸೇರಿದಂತೆ ಹಲವರಿದ್ದರು.

ಇದು ಲಿಂಗಾಯತ ಧರ್ಮ ದ್ರೋಹಿ, RSS ಪಟಾಲಂ ಕೆಲಸ