ಹಡಪದ ಅಪ್ಪಣ್ಣ ಮೂರ್ತಿ ಸ್ಥಾಪಿಸಲು ಸಿಎಂಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ವಿಶ್ವಗುರು ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿರುವ ಗವಿಯಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಭಿವೃದ್ಧಿಪಡಿಸಬೇಕೆಂದು ಹಡಪದ ಅಪ್ಪಣ್ಣ ಸಮಾಜ ಸಂಘ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿತು.

ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಬಸವಣ್ಣನವರ ಜೊತೆಯಲ್ಲಿಯೇ ಇದ್ದು ಶೋಷಿತ ಸಮಾಜಗಳನ್ನು ಒಂದುಗೂಡಿಸಿ ಜಾತಿರಹಿತ, ವರ್ಗರಹಿತ, ವರ್ಣರಹಿತ “ಕಲ್ಯಾಣ ರಾಜ್ಯ ಕಟ್ಟಲು” ಶ್ರಮಿಸಿದವರು.

ಈ ಎಲ್ಲ ಐತಿಹಾಸಿಕ ಹಿನ್ನೆಲೆಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಈಡೇಸರಿಸಬೇಕೆಂದು ಮನವಿಪತ್ರದಲ್ಲಿ ಸಂಘಟನೆ ಕೋರಿಕೊಂಡಿದೆ.

1) ಬಸವಣ್ಣನವರ ಅರಿವಿನ ಮನೆಯ ಪಕ್ಕದ ಗವಿಯು ಹಡಪದ ಅಪ್ಪಣ್ಣನವರ ಗವಿಯಾಗಿದ್ದು, ಅಲ್ಲಿ ಅವರ ನಾಮಫಲಕ ಮತ್ತು ಮೂರ್ತಿ ಸ್ಥಾಪಿಸಿ ಅಭಿವೃದ್ಧಿಪಡಿಸಬೇಕು.

2) ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ 100 ಕೋಟಿ ರೂಪಾಯಿ ಅನುದಾನ ಮೀಸಲು ಇಡಬೇಕು.

3) ಅಸಂವಿಧಾನಿಕ ಪದವಾದ ‘ಹಜಾಮ’ ಎಂಬ ನಿಷೇಧಿತ ಪದವನ್ನು ಉಪಯೋಗಿಸುವವರಿಗೆ ಕಠಿಣ ಕ್ರಮ ಅಟ್ರಾಸಿಟಿ ಕಾಯ್ದೆ ಜಾರಿಗೊಳಿಸಬೇಕು.

4) ನೂತನ ಅನುಭವ ಮಂಟಪ ಕಟ್ಟಡದ ಮುಖ್ಯದ್ವಾರಕ್ಕೆ ಹಡಪದ ಅಪ್ಪಣ್ಣನವರ ಮಹಾದ್ವಾರ ಎಂದು ನಾಮಕರಣ ಮಾಡಬೇಕು.

ನಮ್ಮ ಈ ಮುಖ್ಯ ಬೇಡಿಕೆಗಳನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಮನವಿಪತ್ರ ಸಲ್ಲಿಸಿ ಒತ್ತಾಯಿಸಲಾಗಿದೆ.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜ ಸಂಘದ ಜಿಲ್ಲೆಗಳ ಪ್ರಮುಖರಾದ ಈರಣ್ಣ ಸಿ. ಹಡಪದ, ದತ್ತಾತ್ರಿ ಜಿ. ಬಾಂದೇಕರ್, ರಾಚಪ್ಪ ಹಡಪದ, ಜಗದೀಶ ನಲವಡ್ಕರ್, ದತ್ತಾತ್ರಿ ಸಿ. ಮೂಲಗೆ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *