ಯಲಬುರ್ಗಾ:
ತಾಲೂಕಿನ ಮರಕಟ್ಟ ಗ್ರಾಮದ ಹಿರಿಯ ಶರಣರಾದ ಬಾಳನಗೌಡ ಪೋಲಿಸಪಾಟೀಲ ಅವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಗ್ರಾಮದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬಸವರಾಜಪ್ಪ ಇಂಗಳದಾಳ ಅವರು ಭಾಗವಹಿಸಿ ಮಾತನಾಡುತ್ತ, ಯುವ ಪೀಳಿಗೆ ಬಸವಾದಿ ಶರಣರ ವಚನ ಚಿಂತನ ಮಾಡಿ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕೆಂದರು.

ದೇವರು, ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರ ತಡೆಗಟ್ಟಲು ಶರಣರ ವಚನ ಚಿಂತನೆಯಿಂದ ಮಾತ್ರ ಸಾಧ್ಯ. ದೇಹವನ್ನು ದೇವಾಲಯವಾಗಿಸಲು ಶರಣರು ನೀಡಿದ ಸಲಹೆಯಂತೆ ನಡೆದು ನೆಮ್ಮದಿಯ ಬದುಕನ್ನು ಕಟ್ಟಿಕೂಳ್ಳಲು ಸಲಹೆ ನೀಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಮೌನೇಶ ವಿಶ್ವಕರ್ಮ ತಾಳಕೇರಿ ಅವರು, ಉತ್ತಮ ಸಂಸ್ಕಾರವಂತರಾಗಿ ಬಾಳಲು ಶರಣರ ವಚನಗಳ ಸಹಾಯಬೇಕು. ಯುವಪೀಳಿಗೆ ದುಶ್ಚಟಗಳಿಂದ ದೂರವಿದ್ದು ಶರಣರ ವಚನಗಳನ್ನು ಅಧ್ಯಯನ ಮಾಡಿ, ಅವನ್ನು ಬದುಕಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬಹುದು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಅವರು, ಬಸವಾದಿ ಶರಣರ ವಚನ ಚಿಂತನೆಯಿಂದ ಸಂಪದ್ಭರಿತ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹೀಗಾಗಿ ಯುವಜನರು ಬಸವಾದಿ ಶರಣ ಶರಣೆಯರ ವಚನ ಚಿಂತನೆಯಿಂದ ವೈಯಕ್ತಿಕ ಹಾಗೂ ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಬಸವ ಕೇಂದ್ರದ ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ ಅವರು ವಹಿಸಿದ್ದರು.
ಶಿವಶಂಕರ ಬಳ್ಳಾರಿ ಲಿಂಗೈಕ್ಯ ಬಾಳನಗೌಡ್ರ ಅವರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಕಾಯ೯ಕ್ರಮದಲ್ಲಿ ಗುಳೇ ರಾಷ್ಟ್ರೀಯ ಬಸವ ದಳದ ರೇಣಕಪ್ಪ ಮಂತ್ರಿ, ದೇವಪ್ಪ ವನಜಭಾವಿ, ಮಲ್ಲೇಶಪ್ಪ ಮಾಟಲದಿನ್ನಿ, ಪಾಲಾಕ್ಷಪ್ಪ ಕಲ್ಲಭಾವಿ, ಶಿವಣ್ಣ ಕರುವಿನ ಹಾಗೂ ಗ್ರಾಮದ ಗುರು ಹಿರಿಯರು ಭಾಗವಹಿಸಿದ್ದರು.

ನಿರೂಪಣೆಯನ್ನು ನಿರುಪಾದೆಪ್ಪ ಹುಣಿಸಿಹಾಳ ಅವರು ನಡೆಸಿದರು. ವಂದನಾರ್ಪಣೆಯನ್ನು ಗುರುರಾಜ ಪಾಟೀಲ ಮಾಡಿದರು. ಕೆ. ಸುರೇಶ ಬಳ್ಳಾರಿ ವಚನ ಗಾಯನ ಮಾಡಿದರು.

ಪ್ರೇರಣಾದಾಯಕ ಕಾರ್ಯಕ್ರಮ 🙏🙏🙏🙏🙏