ಪ್ರವಚನ: ಪ್ರಭುಲಿಂಗಲೀಲೆಯ ಶರಣಾರ್ಥಿ ಸ್ತುತಿ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 2

ಕಲಬುರಗಿ

ಸತ್ತವರ ಕಥೆಯಲ್ಲ, ಜನನದ ಕುತ್ತದಲಿ
ಕುದಿಕುದಿದು, ಕರ್ಮದ ಕತ್ತಲೆಗೆ ಸಿಲುಕುವರು
ಸೀಮೆಯ ಹೊಲಬು ತಾನಲ್ಲ, ಹೊತ್ತು
ಹೋಗದೇ ಪುಂಡರಾಲಿಪ ಮತ್ತಮತಿಗಳ
ಗೋಷ್ಠಿಯಲ್ಲ, ಸತ್ಯವಂತರು ನೀವು.

ವಿಜಯನಗರ ಸಾಮ್ರಾಜ್ಯದ ಕಾಲ ಬಹಳ ವೈಭವದ ಮತ್ತು ಅದ್ಭುತವಾದ ಕಾಲ. ಪ್ರೌಢದೇವರಾಯ ಶರಣ ಸಾಹಿತ್ಯಕ್ಕೆ ಹೆಚ್ವು ಒತ್ತು ಕೊಟ್ಟಿದ್ದರು. ಸರ್ವ ಮತಗಳಿಗೆ ಸಮಾನ ಗೌರವ ಕೊಡುವ ಗುಣ ಶರಣ ಸಾಹಿತ್ಯದ ಪ್ರಭಾವದಿಂದಲೇ ಅವರಿಗೆ ಬಂದಿತ್ತು. ಅಂತೆಯೇ ಅದೃಶ್ಯಕವಿ ಅವರ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ.

ಇದೇ 14ನೇ ಶತಮಾನದ ಕಾಲಘಟ್ಟದಲ್ಲಿ 25 ಗತಿಗಳ 1011 ನುಡಿಗಳ ಪ್ರಭುಲಿಂಗ ಲೀಲೆ ಎಂಬ ಮೇರು ಕಾವ್ಯವನ್ನು ರಚಿಸುತ್ತಾರೆ. ಆದರೆ ಎಲ್ಲಿಯೂ ಕೂಡ ಅವರು ತಮ್ಮ ವ್ಯಕ್ತಿಗತ ಪರಿಚಯದ ಉಲ್ಲೇಖ ಮಾಡಿಲ್ಲ.

ಶರಣರ ಅನುಭಾವ, ವಿರಾಗಿ ಜೀವನವನ್ನು‌ ಅಧ್ಯಯನ ಮಾಡಿ ಆ ತತ್ವವನ್ನು ಅನುಭಾವಕ್ಕೆ ತಂದು ಬರೆದ ಕೃತಿಯಾಗಿದೆ.

ಆರಂಭದಲ್ಲಿ ಶರಣಾರ್ಥಿ ಸ್ತುತಿ ಮಾಡಿ, ‘ಕಾಯದೊಳು ಗುರು ಲಿಂಗ ಜಂಗಮದಾಯತ’ ಎಂದು ಕವಿ ಬಸವಣ್ಣನವರ ವಚನವನ್ನು ಪ್ರಸ್ತಾಪಿಸುತ್ತಾರೆ.

ಸರ್ವಜನಾಂಗಕ್ಕೂ ಅರಿವಿನ ಬೆಳಕು ಕಲ್ಪಿಸಿದ ಶರಣರು ಸಮಾಜದ ವಿಚಿತ್ರ ವ್ಯವಸ್ಥೆ ದೂರ ಮಾಡಿದರು ಎಂದು ಬಸವಣ್ಣನವರ ಸ್ತುತಿ ಮಾಡುತ್ತಾರೆ.

ಆಯತ, ಸ್ವಾಯತ, ಸನ್ನಿಹಿತ ನಮ್ಮಲ್ಲಿ ಇವೆ. ಚಾಮರಸರ ಕಾವ್ಯಕ್ಕೆ ಅಲ್ಲಮರೇ ಪ್ರೇರಣೆ, ಪ್ರಭಾವ.

ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ. ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ

ಎಂದು ಹೇಳುವ ಅಲ್ಲಮಪ್ರಭುಗಳು ಬಸವಣ್ಣನೇ ಲಿಂಗಾಯತ ಧರ್ಮದ ಮೂಲ ಪುರುಷ. ಇಷ್ಟಲಿಂಗದ ಜನಕ. ಇಷ್ಟಲಿಂಗದ ವಿಳಾಸ ಬಸವಣ್ಣ. ಕಾಯ ಪಾವನ ಮಾಡಿದ ಪೂರ್ವಾಚಾರಿ ಸಂಗನಬಸವ ಎಂದು ಕೊಂಡಾಡುತ್ತಾರೆ.

ಆರೇಳು ನುಡಿಯ ಮಂಗಳಾಚರಣೆಯ ಸ್ತುತಿಗೀತೆಗಳಲ್ಲಿ ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ಮರುಳ ಶಂಕರದೇವ, ಕಿನ್ನರಿ ಬೊಮ್ಮಯ್ಯ ಮುಂತಾದ ಶಿವಶರಣರಿಗೆ ಶರಣಾರ್ಥಿ ಸಲ್ಲಿಸುತ್ತಾರೆ. ಇವೆಲ್ಲವೂ ಕೃತಿಯ ಪೀಠಿಕೆ ಇದ್ದ ಹಾಗೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment
  • ಓಂ ಶ್ರೀಗುರುಬಸವಲಿಂಗಾಯನಮಃ
    ವಿಶ್ವಬಸವಧರ್ಮ ವಿಶ್ವಕಾಯಕ ಸತ್ಯ ಶುದ್ಧ ಪ್ರಮಾಣಿಕ ಮಾರ್ಗದರ್ಶನ ಜಂಗಮ ಸುಕ್ಷೇತ್ರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು.ತಿಮ್ಮಾಪೂರ ತಾ.ರಾಮದುರ್ಗ ಜಿ. ಬೆಳಗಾವಿ. ವಿಶ್ವಬಸವಧರ್ಮ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಹೊಸಕೇರಿಬಸವನಗರ
    ನಾದವೆಂಬ ಶುದ್ಧಪ್ರಸಾದ
    ಮಂತ್ರನಾಮವಾದ ಹಕಾರವೆಂಬ ಶಿವಬೀಜವು
    ಸಕಲ ಪ್ರಾಣಿಗಳಲ್ಲಿ ಅಂತಸ್ಥವಾಗಿಹುದು ನೋಡಾ.
    ಅದ ಆವಾತನರಿದಾನು ಆತನು ಶಿಷ್ಯರ ಭವಪಾಶವ
    ನಾಶಮಾಡುವುನು.
    ಆ ಹಕಾರವೆಂಬ ಶಿವಬೀಜ ಸಕಲಾಗಮಾದಿಗಳಲ್ಲಿಯು
    ಪ್ರಸಿದ್ಧ ನೋಡಾ.
    ಅದು ತಾನೆ ಚತುಃಶಕ್ತಿಸಮೇತವಾಗಿ ಪ್ರಾಣವಾಯಿತ್ತು.
    ಅದೆಂತೆಂದಡೆ:
    ಅಕಾರ ಉಕಾರ ಮಕಾರ ಒಕಾರವೆಂಬ ನಾಲ್ಕರೊಡನೆ ಕೂಡಿದ
    ಶಿವಬೀಜಂ ಪ್ರಣಮಸ್ವರೂಪವೇ ಹೇಂಗಾಯ್ತಿತ್ತೆಂದಡೆ,
    ಆಕಾರ ಉಕಾರವೆಂಬೆರಡಕ್ಷರ ಕೂಟದಿಂದ ಓ ಎಂಬ
    ವರ್ಣವಾಯಿತ್ತು.
    ಮಕಾರ ಬಿಂದು ರೂಪವಾಯಿತ್ತು.
    ಈ ಬಿಂದು ಕೂಡಲೊಡನೆ ‘ಓಂ’ ಎಂಬ ಪ್ರಣವವಾಯಿತ್ತಯ್ಯ.
    ಈ ಪ್ರಣವದೊಳು ನಾದಬ್ರಹ್ಮ ಪೂರ್ಣವಾಗಿಹುದು.
    ಇಂತು ಆಕಾರ ಉಕಾರ ಮಕಾರ ಒಕಾರ ಹಕಾರವೆಂಬೈದಕ್ಷರಗಳ
    ಕೂಟವೆ ಜಗಜ್ಜನನಕ್ಕೆ ಕಾರಣವಾದ ಪ್ರಣವಬೀಜವು ಸಂಭವಿಸಿದ
    ಪಂಚಾಕ್ಷರವೆ ಸೂಕ್ತ ಪಂಚಾಕ್ಷರವೆನಿಸಿತ್ತು.
    ಅದೆಂತೆಂದೊಡೆ:
    ಹಾಂಗೆ ಪರಶಿವನು ಪಂಚನಿಃಕಲೆಯೊಡನೆ ಕೂಡಿಹನು,
    ಹಾಂಗೆ ಸಕಲವಪ್ಪುದೆ ಕಾರಣವಾಗಿ, ಸರ್ವತ್ರ ಪ್ರವರ್ತನೆಯಪ್ಪ
    ಶಾಂತ್ಯತೀತವೆಂಬ ಕಲೆಯುಂ ಪುಟ್ಟಿಸಿದನು ನೋಡಾ.
    ಓಂಕಾರ ಮಸ್ತಕದಲ್ಲಿ ತಾನಿರುವ ಓಂಕಾರವರ್ಣವ್ಯಾಪಕನಾಗಿಹನು.
    ಆ ಪರಶಿವನು ಪ್ರಣವಪ್ರಥಮ ರೇಖೆಯಪ್ಪ
    ಆಕಾರಮಂ ಸೃಜಿಸಿದನು.
    ಆ ಕಾಲರೇಖೆಯೆಂಬ ಕಲೆಯೆನಿಸಿಕೊಂಬುದಯ್ಯ.
    ಅದು ಎಲ್ಲಾ ವರ್ಣಂಗಳೊಳಗೆ ಇರುತ್ತಿಹುದು ನೋಡಾ.
    ಆ ಅಕಾರವಿಲ್ಲದೆ ಆ ವರ್ಣಂಗಳು ಉಚ್ಚರಣಕ್ಕೆ ಬಾರವು.
    ಓಂಕಾರವಾವುದಾನೊಂದು ಉಕಾರ ರೇಖೆಯುಂಟು.
    ಅದು ಪ್ರತಿಷ್ಠಾಕಲೆಯೆನಿಸಿತ್ತು;
    ಆ ಕಲೆ ಉಕಾರದಿಂದ ಹುಟ್ಟಿತ್ತು ನೋಡಾ.
    ಆ ಪ್ರಣಮದ ಮಸ್ತಕದಲ್ಲಿ ನಿರಂಜನ ರೇಖೆಯುಂಟು.
    ಅದು ಮಕಾರದ ದೆಸೆಯಿಂದ ಹುಟ್ಟಿತ್ತು;
    ಆ ರೇಖೆ ನಿವೃತ್ತಿ ಕಲೆಯೆನಿಸಿತ್ತು ನೋಡಾ.
    ಓಂಕಾರದ ಶಿರಸ್ಸಿನೊಡನೆ ಕೂಡಿದ ನಾದಬ್ರಹ್ಮದಲ್ಲಿಯೊಂದು
    ಸ್ಥಲವಾದ ನಿರ್ವಾಣರೇಖೆಯುಂಟು;
    ಅದು ಶಾಂತಿಕಲೆಯೆನಿಸಿತ್ತು ನೋಡಾ.
    ಆ ಶಾಂತಿಕಲಾಬೀಜವೆ ಅಕಾರ ಉಕಾರಂಗಳ ಕೂಟವನ್ನುಳ್ಳ
    ಓಂಕಾರವೆಂಬ ಶಾಂತಿಕಲೆಯು ನಿಃಕಲಬ್ರಹ್ಮದಲ್ಲಿಯು
    ಸಕಲಬ್ರಹ್ಮದಲ್ಲಿಯ ಇರುತ್ತಿಹುದು.
    ಬಿಂದುನಾದವನುಳ್ಳ ಶಾಂತ್ಯತೀತೆಯೆಂಬ
    ಪರಶಕ್ತಿಯೊಡನೆ ಕೂಡಿ
    ಪರಮಸೂಕ್ಷ್ಮವಾದ ಶಾಂತ್ಯತೀತ ಕಲೆಯೆ
    ಓಂಕಾರ ಶಿರಃಕ್ರಾಂತವಾಗಿಹುದು ನೋಡಾ.
    ಆ ಶಾಂತಿ ಕಲೆಯಲ್ಲಿ ಶಬ್ದಪ್ರಪಂಚು ಹುಟ್ಟಿತ್ತು.
    ಅದೆಂತೆಂದೊಡೆ:
    ದೀಪದಿಂದ ವಿಸ್ಫುಲಿಂಗ ತೇಜಸ್ಸುಗಳು ಹೇಂಗೆ ಹುಟ್ಟಿಹವು
    ಹಾಂಗೆ ಸಕಲವಾದ ಶಿವತತ್ವದೊಡನೆ ಕೂಡಿದ ಶಾಂತಿಕೆಲೆಯೇ
    ಶಿವ ವಿದ್ಯಾ ಜೀವರುಗಳೆಂಬ ತ್ರಿರೂಪಂಗಳೊಡನೆ
    ಮೂರು ಪ್ರಕಾರವಾಗಿಯೆಯ್ದುದು ಕಾಣಾ
    ಶೂನ್ಯನಾಥಯ್ಯ. ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
    ವಿಶುದ್ಧಿ ಆಜ್ಞಾ ಎಂಬ ಷಡಾಧಾರಚಕ್ರಂಗಳ ಭೇದಿಸಿಕೊಂಡು,
    ಬ್ರಹ್ಮ ವಿಷ್ಣು ರುದ್ರ ಈಶ್ವರ ಮಹೇಶ್ವರ ಸದಾಶಿವನ ಧ್ಯಾನಿಸಿ ಕಂಡಡೆ,
    ಮಹಿಮಾದಿಗಳಳಿವವೆಂದು ನುಡಿವರು.
    ಮುಟ್ಟಿ ಮುಟ್ಟಿ ನೋಡುವುದು ಮಾಯೆ,
    ಕರುಣದಿಂದ ಕಂಡುದು ಮಾಯೆ,
    ಮನದಿಚ್ಫೆ ಅರಿವುದು ಮಾಯೆಯಲ್ಲವೆ?
    ತನುಮನ ಹಿಡಿದು ನೋಡಿದುದೆಲ್ಲ ಮಾಯೆಯಲ್ಲವೆ?
    ದೇಹವಿಡಿದು ವಿದೇಹಿಯಾದ ಮಹಾತ್ಮಂಗೆ
    ದೇಹವಿಲ್ಲ ಮಾಯೆಯಿಲ್ಲ ಕರುಣವಿಲ್ಲ
    ಮರಣವಿಲ್ಲ ಜನನವಿಲ್ಲ.
    ಪ್ರತಿಯಿಲ್ಲದ ಘನಮಹತೋತ್ತಮನಾದ
    ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.ಅಗ್ನಿ ಸರ್ವವ್ಯಾಪಕನಾಗಿರುವಂತೆ,
    ಚಿದ್ವಹ್ನಿರೂಪನಾದ ಶಿವನು
    ಸರ್ವವ್ಯಾಪಕನಾಗಿರ್ಪನು.
    ಹೃದಯಕಮಲವು ಮುಕುರದೋಪಾದಿಯಲ್ಲಿ
    ಪ್ರಕಾಶಿಸುತಿರ್ದಪುದು.
    ಆ ಕನ್ನಡಿಯೋಪಾದಿಯ ಹೃದಯಕಮಲದಲ್ಲಿ
    ವ್ಯಾಪಕನಾದ ಶಿವನು,
    ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದಪನು.
    ವೇದೋಪನಿಷದ್ಗಾಯತ್ರಿ ಪ್ರಸಿದ್ದವಾದೀ ರಹಸ್ಯವ
    ಗುರೂಪದೇಶದಿಂ ತಿಳಿವುದಯ್ಯ
    ಶ್ರೀ ಚೆನ್ನಮಲ್ಲಿಕಾರ್ಜುನದೇವಾ. ಅಂದೂ ನೀನೆ, ಇಂದೂ ನೀನೆ,
    ಎಂದೂ ನೀನೆ, ಕೇಳಾ ತಂದೆ.
    ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ
    ಅಂದೂ ಇಂದೂ ಎಂದೂ ನಿನ್ನ ನಂಬಿದ
    ಒಲವಿನ ಶಿಶು ನಾನಯ್ಯ.
    ಒಂದಲ್ಲದೆ ಎರಡರಿಯೆನಯ್ಯಾ.
    ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ
    ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ
    ʼಎನ್ನ ಬಿಡು, ತನ್ನ ಬಿಡು’, ಎಂಬುದು ಕಾಯವಿಕಾರ
    ʼಎನ್ನ ಬಿಡು, ತನ್ನ ಬಿಡುʼ, ಎಂಬುದು ಮನೋವಿಕಾರ!
    ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
    ಮನ ನಿಮ್ಮನೆಯ್ದುವುದೆ, ಕೂಡಲ ಸಂಗಮದೇವಾ? ಅಂಕುಸದರಳಿನ ಸಂಪಗೆಯ ಹುವ್ವಿನ ಕಂಪು!
    ಇತ್ತಲಿತ್ತ ಬಿಜಯಂಗೈಯದಿರು ಶಿವನೆ!
    ಅರಿಯಾ ಮಗನೆ!
    ಮಲೆಯ ಮಲ್ಲಯ್ಯ ನಿನಗೆಂದು ಬಂದುದನು.
    ನೀವು ಭಕ್ತರಂಗಳದಲ್ಲಿ ಆಡುವ
    ತೊತ್ತುವೇಶಿಯ ಮಗನೆಂದು ಬಂದಿರಿ ಶಿವನೆ!
    ಕಪಿಲಸಿದ್ಧಮಲ್ಲಿಕಾರ್ಜುನ! ಶ್ರೀ ಮ.ನಿ.ಪ್ರ.ಸ್ವ.ಜ. ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಹೊಸಕೇರಿಬಸವನಗರ

Leave a Reply

Your email address will not be published. Required fields are marked *