ಚಳ್ಳಕೆರೆ:
ಬಸವಾದಿ ಶರಣರ ಶಿವಜ್ಞಾನ ಕುರಿತು ಪ್ರವಚನ ಹಾಗೂ ಶಿವಯೋಗ ಹಾಗೂ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆ ಕಾರ್ಯಕ್ರಮ ಜುಲೈ 18 ಹಾಗೂ 19ರಂದು ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಶರಣ ಸದ್ಭಕ್ತರ ಬಳಗದಿಂದ ನಡೆಯುವ ಕಾರ್ಯಕ್ರಮದಲ್ಲಿ 18ರ ಶನಿವಾರ ಡಾ. ದಯಾನಂದ ನೂಲಿ ಅವರು ‘ಲಿಂಗಾಂಗ ಸಾಮರಸ್ಯ ಹಾಗೂ ಶರಣರ ಶಿವಯೋಗ’ ಕುರಿತು ವೈಜ್ಞಾನಿಕ ಪ್ರವಚನವನ್ನು ಟಿವಿ ಪರದೆ ಮೇಲೆ ನೀಡುವರು.
ಹುಬ್ಬಳ್ಳಿಯ ಶಶಿಧರ ಕರವೀರಶೆಟ್ಟರ ಅವರು ‘ಅಷ್ಟಾವರಣ ಮತ್ತು ಷಟಸ್ಥಲ’ ಕುರಿತು ಅನುಭಾವ ನೀಡುವರು.
ಬೈಲಹೊಂಗಲದ ಎಂ.ಎಂ. ಸಂಗೊಳ್ಳಿ ಅವರು ‘ಶರಣರ ನೈಜ ಆಚರಣೆ’ ಕುರಿತು ಅನುಭಾವ ನೀಡುವರು.
19ರ ಭಾನುವಾರ ಬೆಳಿಗ್ಗೆ 7:30 ರಿಂದ ಶಿವಯೋಗ (ಇಷ್ಟಲಿಂಗ ಪೂಜೆ ಪ್ರಾತ್ಯಕ್ಷತೆ)ಯನ್ನು ಡಾ. ದಯಾನಂದ ನೂಲಿ ಅವರು ನಡೆಸಿಕೊಡುವರು.
ಕಾರ್ಯಕ್ರಮದಲ್ಲಿ ಉಪಹಾರ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ವೀರಶೈವ ಸಮಾಜ ಸೇವಾ ಸಂಘದವರು ಕಾರ್ಯಕ್ರಮಕ್ಕೆ ಸಹಕಾರ ನೀಡಿ ಶುಭ ಕೋರಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
