ಹೊಸಪೇಟೆ:
ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ಪರಿಸರದಲ್ಲಿ ವಿಶ್ವಗುರು ಬಸವಣ್ಣನವರ ಸಂಸ್ಕರಣಾ ಕಾರ್ಯಕ್ರಮ ರವಿವಾರ ನಡೆಯಲಿದೆ.
ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6.00 ಗಂಟೆಗೆ ಬಸವ ಮಂಟಪದಲ್ಲಿ ಬಸವಣ್ಣನವರ ಪೂಜೆ, ಪ್ರಾರ್ಥನೆ, ಧ್ಯಾನ, ಇಷ್ಟಲಿಂಗ ಅನುಸಂಧಾನ ನಡೆಯಲಿದೆ.
ನಂತರ ಬಸವ ಪುತ್ಥಳಿ, ಬಸವಜ್ಯೋತಿಯೊಂದಿಗೆ ಭವ್ಯ ಮೆರವಣಿಗೆ ನಾಗೇನಹಳ್ಳಿ ಮೂಲಕ ಬಳಿಯ ಧರ್ಮದಗುಡ್ಡ ತಲುಪುವುದು.
9.00 ಗಂಟೆಗೆ ಷಟಸ್ಥಲ ಧ್ವಜಾರೋಹಣದಿಂದ ಪ್ರಾರಂಭಗೊಂಡು, ಗುರು ಪೂಜೆ, ಪ್ರಾರ್ಥನೆ, ಧ್ಯಾನ, ವಚನ ಗಾಯನ, ಬಸವ ಪರಂಪರೆಯ ವಿರಕ್ತ ಮಠಾಧೀಶರಿಂದ ಆಶಿರ್ವಚನ ಮಹಾಮಂಗಲ ಹಾಗೂ ದಾಸೋಹದ ವ್ಯವಸ್ಥೆ ಇರುತ್ತದೆ.
ಶರಣಬಂದುಗಳು ತಮ್ಮ ಬಂಧು ಮಿತ್ರರೊಡನೆ ಆಗಮಿಸಿ ವಿಶ್ವಗುರುಬಸವಣ್ಣನವರ ಕೃಪೆಗೆ ಪಾತ್ರರಾಗಲು ಸ್ಥಳೀಯ ಎಲ್ಲಾ ಬಸವಪರ ಸಂಘಟನೆಗಳ ಪರವಾಗಿ ವಿನಂತಿಸಲಾಗಿದೆ.

Don’t limit to pooja only, Try to speak about unity of our Lingayat caste, don’t make only Panch peeth should take responsibility, When you want power and post aa a president etc, same time take responsibility to unity development,Sri Yatnal speak all nonsense words on Sri BSY in front of media, a single Lingayat till today enjoyed ,not control the Sri Yatnal,,then what is meaning of all these nonsense Shookey Pooja,