ಬಸವ ವಿರೋಧಿಗಳನ್ನು ಓಲೈಸಲು ಸ್ವಂತ ಬುದ್ದಿ ಕಳೆದುಕೊಂಡ ಜಗದೀಶ ಶೆಟ್ಟರ್

ಲಿಂಗಾಯತ ಬಣಜಿಗ ಸಮಾಜದ ಬೈಲಾದಲ್ಲಿಯೇ ಬಸವಣ್ಣ ಧರ್ಮಗುರು ಎಂದು ಹೇಳಲಾಗಿದೆ

ಗಂಗಾವತಿ

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವುದು ಅಸಾಧ್ಯವೆಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮಾತು ಬಾಲಿಶವಾದುದು. ಲಿಂಗಾಯತ ಧರ್ಮದ ಕುರಿತು ಅವರಿಗೆ ಕನಿಷ್ಠ ಜ್ಞಾನವೂ ಇಲ್ಲವೆನ್ನಬಹುದು.

ಅವರು ಈ ಹೇಳಿಕೆ ನೀಡಿದ್ದು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಲಿಂಗಾಯತ ಬಣಜಿಗ ಕ್ಷೇಮಾಬಿವೃದ್ಧಿ ಸಂಘದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ.

ಲಿಂಗಾಯತ ಬಣಜಿಗ ಸಮಾಜದ ಬೈಲಾದಲ್ಲಿಯೇ ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳಲಾಗಿದೆ ಎನ್ನುವುದೂ ಅವರಿಗೆ ತಿಳಿದಿಲ್ಲವೇ. ಪ್ರತ್ಯೇಕ ಧರ್ಮಗುರು, ಧರ್ಮಗ್ರಂಥಗಳಿರುವುದು ಎಲ್ಲಾ ಧರ್ಮಗಳ ಮುಖ್ಯ ಲಕ್ಷಣವೆನ್ನುವ ಸತ್ಯವನ್ನು ಶೆಟ್ಟರ್ ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ.

ಶೆಟ್ಟರ್ ಲಿಂಗಾಯತ ಚಳುವಳಿ ಬೆಳೆದಿರುವ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕು.

ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟಕ್ಕೆ ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಸ್ವತಂತ್ರ ಧರ್ಮದ ಬೇಡಿಕೆ ಮೊದಲು ಇಟ್ಟವರೇ ಅಖಿಲ ಭಾರತ ವೀರಶೈವ ಮಹಾಸಭೆಯವರು.

ಆದರೆ ಕೇಂದ್ರ ಸರಕಾರ ಕೇಳಿದ ದಾಖಲೆಗಳನ್ನು ಅವರು ಒದಗಿಸಲಾರದ್ದಕ್ಕೆ ಎರಡು ಮೂರು ಬಾರಿ ಪ್ರಸ್ತಾಪ ಕಳಿಸಿದರೂ ಅದು ಅಂಗೀಕಾರವಾಗಲಿಲ್ಲ.

ಅಂತಹ ಸಮಯದಲ್ಲಿ ಪೂಜ್ಯ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಲಕ್ಷೋಪಲಕ್ಷ ಜನರಿಂದ ನಡೆದ ಅಭೂತಪೂರ್ವವಾದ ಹೋರಾಟಗಳು ಲಿಂಗಾಯತ ಚಳುವಳಿಯನ್ನು ಪುನಶ್ಚೇತನಗೊಳಿಸಿದವು.

ಮಾತೆ ಮಹಾದೇವಿಯವರ ನಿಯೋಗ ಸ್ವತಂತ್ರ ಧರ್ಮಕ್ಕೆ ಒತ್ತಾಯಿಸಿ ಆಗ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಅರ್ಪಿಸಿತು.

ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟಕ್ಕೆ ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ.

ಅದಾಗಲೇ ವೀರಶೈವ ಮಹಾಸಭಾದ ಮಾನ್ಯತೆಯ ಅರ್ಜಿ ವಿಫಲಗೊಂಡಿದ್ದರಿಂದ ಮುಖ್ಯಮಂತ್ರಿಗಳು ಸ್ಪಷ್ಟತೆಗಾಗಿ ನ್ಯಾಯಮೂರ್ತಿ ನಾಗಮೋಹನದಾಸ ಅವರ ಅಧ್ಯಕ್ಷತೆಯ ಆಯೋಗಕ್ಕೆ ಈ ಕುರಿತು ವರದಿ ನೀಡುವಂತೆ ಕೇಳಿಕೊಂಡಿತು.

ಸಮಗ್ರ ಅದ್ಯಯನ ನಡೆಸಿದ ಆಯೋಗ ಲಿಂಗಾಯತಕ್ಕೆ ಸ್ವತಂತ್ರ ಸ್ಥಾನಮಾನ ನೀಡಬಹುದಾಗಿದೆ ಎಂದು ವರದಿ ಸಲ್ಲಿಸಿತು.

ಈ ವರದಿಯ ಆಧಾರದ ಮೇಲೆ ಕರ್ನಾಟಕ ಸರಕಾರ ಕೇಂದ್ರ ಸರಕಾರದ ಅಲ್ಪಸಂಖ್ಯಾತ ಇಲಾಖೆಗೆ ಹೊಸ ಪ್ರಸ್ತಾವನೆ ಕಳುಹಿಸಿತು.

ವರದಿಯ ಕುರಿತು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲಾರದ ಇಲಾಖೆ ಅದನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾಡಿತು.

ಕರ್ನಾಟಕದಲ್ಲಿ ಹೇಗಾದರು ಮಾಡಿ ಬಸವತತ್ವವನ್ನು ಮರೆಮಾಡಬೇಕೆಂದು ಟೊಂಕಕಟ್ಟಿ ನಿಂತಿರುವ ವಿರೋಧಿ ಸಂಘವೊಂದು ಇಲ್ಲಿ ಮುಖ್ಯ ಅಡಚಣೆಯಾಗಿದೆ. ಅನೇಕ ಲಿಂಗಾಯತ ಸ್ವಾಮಿಗಳಿಗೆ ಇದು ಸುಪಾರಿ ಕೊಟ್ಟು ಲಿಂಗಾಯತ ಚಳುವಳಿ ವಿರೋಧಿಸಲು ಕಳಿಸಿದೆ.

ಇದರ ಆದೇಶಗಳನ್ನು ಪಾಲಿಸುವುದೇ ಕಾಯಕವೆಂದುಕೊಂಡಿರುವ ಜಗಧೀಶ ಶೆಟ್ಟರಂತವರು ಸ್ವಂತ ವಿಚಾರ ಮಾಡುವುದನ್ನೇ ಕಳೆದುಕೊಂಡಿದ್ದಾರೆ.

ಇವರಿಗೆ ಅಧಿಕಾರ ಮುಖ್ಯ. ಅದಕ್ಕಾಗಿ ಇಂತಹ ಲಜ್ಜೆಗೇಡಿತನವನ್ನಾದರೂ ಇವರು ಮಾಡುತ್ತಾರೆ.

ಹೈಕಮಾಂಡ್ ಹೇಳಿದ್ದನ್ನು ಕಂಠಪಾಠ ಮಾಡಿ ಒಪ್ಪಿಸುವುದೊಂದೇ ಅವರಿಗೆ ಗೊತ್ತಿರುವ ವಿಚಾರ.

ಇದೇ ಜಗದೀಶ ಶೆಟ್ಟರ್ ಅವರಿಗೆ ಬಿ ಎಲ್ ಸಂತೋಷ್ ವಿಧಾನಸಭೆ ಟಿಕೆಟ್ ನಿರಾಕರಿಸಿದಾಗ ಅವರು ಕಾಂಗ್ರೆಸ್ ಸೇರಿ ಎಮ್ಮೆಲ್ಸಿಯಾಗಿದ್ದರು. ಅವರು ಅಲ್ಲಿಯೇ ಮುಂದುವರೆದಿದ್ದರೆ ಲಿಂಗಾಯತ ಅಲ್ಪಸಂಖ್ಯಾತ ಮಾನ್ಯತೆ ಕುರಿತು ಈ ರೀತಿ ಹೇಳಿಕೆಯನ್ನು ಹೇಳುತ್ತಿದ್ದರೆ?

ಇವರಿಗೆ ತಮ್ಮ ಸಮುದಾಯ, ಧರ್ಮಕ್ಕಿoತಲೂ ಅಧಿಕಾರ ಮುಖ್ಯ. ಅದಕ್ಕಾಗಿ ಇಂತಹ ಲಜ್ಜೆಗೇಡಿತನವನ್ನಾದರೂ ಇವರು ಮಾಡುತ್ತಾರೆ.

ಜಗದೀಶ ಶೆಟ್ಟರ್ ಆವರೇ ಅಧಿಕಾರ ಶಾಶ್ವತವಲ್ಲ. ಅಧಿಕಾರವಿದ್ದಾಗ ನೀವು ಮಾಡುವ ಕೆಲಸಗಳು ಶಾಶ್ವತ.
ಕೇಂದ್ರದಲ್ಲಿ ನೀವೇ ಯಾವತ್ತೂ ಗೂಟ ಹೊಡ್ಕೊಂಡು ಅಧಿಕಾರದಲ್ಲಿ ಇರುವುದಿಲ್ಲ. ಅಧಿಕಾರ ಉಳಿಸಿಕೊಳ್ಳಲು ನಿಮ್ಮ ಪಕ್ಷ ಏನೇನು ಸರ್ಕಸ್ ಮಾಡುತ್ತಿದೆ ಎನ್ನುವುದು ನಿಮಗೂ ಗೊತ್ತಿದೆ.

ಕೇಂದ್ರದಲ್ಲಿ ನೀವೇ ಯಾವತ್ತೂ ಗೂಟ ಹೊಡ್ಕೊಂಡು ಅಧಿಕಾರದಲ್ಲಿ ಇರುವುದಿಲ್ಲ.

ರಾತ್ರಿಯ ನಂತರ ಹಗಲು ಬಂದೇ ಬರುವಂತೆ ಮುಂದೆ ಮುಂದಿನ ಸರಕಾರದಿಂದಲಾದರೂ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕೇ ಸಿಗುತ್ತದೆ. ಆಗ ಅದಕ್ಕಾಗಿ ದ್ವನಿ ಎತ್ತಿದವರಿಗೆ ನೈತಿಕತೆಯಾದರೂ ಇರುತ್ತದೆ.

ಮುತ್ಸದ್ಧಿ ರಾಜಕಾರಣಿ ಜನಪರವಾದ ನಿರ್ಣಯ ಕೈಗೊಳ್ಳುತ್ತಾನೆ. ಪುಢಾರಿ ರಾಜಕಾರಣಿ ತನಗೆ ಆಗುವ ಲಾಭವನ್ನು ಮಾತ್ರ ನೋಡುತ್ತಾನೆ.

ನೀವು ಮುತ್ಸದ್ದಿ ರಾಜಕಾರಣಿಯಾಗಲಿ ಎಂಬುದೇ ನಮ್ಮ ಬಯಕೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
10 Comments
  • *RSS ತನ್ನ ವಿಚಾರವನ್ನು ಹಿಂದೂ ವೀರಶೈವ ನಾಯಕನ ಬಾಯಿಂದ ಹೇಳಿಸಿದೆ*

  • 👌🏻👌🏻ಮಾತು. ಸಮಯ ವಾದಿ ಶೆಟ್ಟರ ಮುಟ್ಟಿ ನೋಡಿ ಕೊಳ್ಳಲಿ 🙏🏻🙏🏻

  • ಜಗದೀಶ ಶೆಟ್ಟರ್ ಒಬ್ಬ ಅವಕಾಶವಾದಿ ರಾಜಕಾರಣಿ ಎನ್ನುವದು ಈಗಾಗಲೆ ಸಾಬಿತಾಗಿದೆ.
    ಅಧಿಕಾರದ ಆಸೆಗೆ ಬಕೇಟ್ ಹಿಡಿಯುವದರ ಜೊತೆಗೆ ಬಸವ ವಿರೋದಿ ಚಡ್ಡಿವಾಲ “ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ” ಅಯೋಗ್ಯರಾಗಿಬಿಟ್ಟಿದ್ದಾರೆ.

    • ಮಾತು ಮಾತಿಗೂ ಆರ್.ಎಸ್.ಎಸ್. ಎಂದು ಹೇಳುತ್ತ ಯಾಕೆ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತೀರಿ. ಈ ನಾಯಕರು “ಲಿಂಗಾಯತರು” ಎಂದೇ ಹೇಳಿಕೊಂಡು, ಲಿಂಗಾಯತ ನಾಯಕರಾಗಿ ಬೆಳೆದು, ಲಿಂಗಾಯತ ಹೆಸರಿನಲ್ಲಿ ಅಧಿಕಾರ ಪಡೆದವರು, ಲಿಂಗಾಯತದೊಳಗೆ ಮೇಲ್ಜಾತಿಯ ಶ್ರೇಷ್ಠತೆ ಸ್ಥಾನಮಾನ ಪಡೆದು, ಹಿಂದುಳಿದ/ದಲಿತ ಲಿಂಗಾಯತರನ್ನೇ ಕನಿಷ್ಠವಾಗಿ ನಡೆಸಿಕೊಂಡು ಬಂದಿರುವುದು ಸರ್ವವಿಧಿತ.

      ಆರ್.ಎಸ್.ಎಸ್. ನವರಂತೂ ಬಿಡಿ “ಲಿಂಗಾಯತ ವಿರೋಧಿಗಳು”. ನಮ್ಮವರೆನ್ನುವ ಇಂತಹ ರಾಜಕೀಯ ನಾಯಕರೇ ಲಿಂಗಾಯತ ಅಸ್ಮಿತೆಗೆ ಧಕ್ಕೆ ತರುತ್ತಿರುವವರು.

      51 ವರ್ಷಗಳಿಂದ ನೋಡುತ್ತ ಬರಲಾಗಿ ಹುಬ್ಬಳ್ಳಿ ಎಂದೋ ಕರ್ನಾಟಕದ ರಾಜಧಾನಿಯಾಗಬೇಕಿತ್ತು. ಇಂತಹ ಹೊಣೆಗೇಡಿ ಹುಬ್ಬಳ್ಳಿ-ಧಾರವಾಡ ಎಲ್ಲ ರಾಜಕಾರಣಿಗಳು ತಮ್ಮ ಸ್ವಾರ್ಥ, ಸಂಪತ್ತು ಬೆಳೆಸಿದರೆ ಹೊರತು, ಹುಬ್ಬಳ್ಳಿ-ಧಾರವಾಡ ಕಾಲಕಾಲಕ್ಕೆ ಅಭಿವೃದ್ಧಿ ಆಗದೇ ಅಂದಿನ ಕಾಲಕ್ಕಿಂತಲೂ ಇಂದು ಹೆಚ್ಚು ಗಲೀಜು ಕೊಚ್ಚೆಯಾಗಿದೆ, ಇವರುಗಳ ಮನಸ್ಸಿನಂತೆ.

      ಇದು ಲಿಂಗಾಯತ ದುರ್ದೈವ

  • ಲಿಂಗಾಯತ ರೆ,
    ಲಿಂಗಾಯತ ಧರ್ಮ ವಿರೋಧಿ ರಾಜಕಾರಣಿಗಳಿಗೆ vote ಹಾಕಬೇಡಿರಿ.

  • ಲಿಂಗಾಯತರೇ ಯೋಚಿಸಿ ಲಿಂಗಾಯತ ಧರ್ಮ ವಿರೋಧಿಗಳಿಗೆ ಬುದ್ಧಿ ಕಲಿಸಿ.. ಶರಣು ಶರಣಾರ್ಥಿಗಳು 🙏🙏🌺

    • ಲಿಂಗಾಯತರೆ ಯೆಚಿಸಿ ಲಿಂಗಾಯತ ಧರ್ಮ ಆಗುವುದ್ದು ನಮವರಿಂದಲ್ಲೇ ವಿರೋಧ ಶರಣು ಶರಣಾರ್ಥಿ

  • ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಗಳನ್ನ ವಿರೋಧಿಸುವವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ.

  • ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ದೊರೆತಮೇಲೆ ಇವರು ತಮ್ಮನ್ನು ತಾವು ಲಿಂಗಾಯತರಲ್ಲ ಎಂದು ಘೋಷಿಸಿಕೊಳ್ಳತ್ತಾರೆಯೇ?

  • ಎಲ್ಲದಕ್ಕಿಂತಲೂ ಮುಂಚೆ ಓಡಿ ಬರುತ್ತಾರೆ.

Leave a Reply

Your email address will not be published. Required fields are marked *

ಅಧ್ಯಕ್ಷರು ಬಸವಕೇoದ್ರ, ಗoಗಾವತಿ