ನಂಜನಗೂಡು:
ಇಲ್ಲಿನ ಅಕ್ಕಮಹಾದೇವಿ ನಗರ ಹಾಗೂ ವಿದ್ಯಾನಗರ ಬಡಾವಣೆಯ ಜನರು ಒಡಗೂಡಿ ಜಗನ್ಮಾತೆ, ವೀರವಿರಾಗಿಣಿ ಅಕ್ಕಮಹಾದೇವಿ ಅವರ 4ನೇ ವರ್ಷದ ಜಯಂತಿ ಆಚರಿಸಿದರು.
ಅಕ್ಕಮಹಾದೇವಿ ಮುಖ್ಯ ರಸ್ತೆಯ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಸುತ್ತೂರು ಶಿವಣ್ಣ ಅವರ ಅಂಗಡಿಯ ಮುಂದೆ ಶರಣೆ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಲಾಯಿತು.

ಕಲ್ಮಳ್ಳಿ ನಟರಾಜು ಅವರು ಅಕ್ಕಮಹಾದೇವಿ ಅವರ ಜೀವನ, ಸಮಾಜಕ್ಕೆ ಅವರು ನೀಡಿದ ಸಂದೇಶ, ಸಾರವನ್ನು ಹೇಳಿದರು. ಪ್ರಸ್ತುತ ಸಮಾಜಕ್ಕೆ ಬಸವಾದಿ ಶರಣರ ವಚನಗಳ ಮಹತ್ವವನ್ನು ತಿಳಿಸಿದರು.
ಅನುಭಾವಿ ಕಾ.ಸು. ನಂಜಪ್ಪ ಅವರು ಅಕ್ಕಮಹಾದೇವಿಯ ವಚನಗಳನ್ನು ಹೇಳಿ, ನಮ್ಮ ಜೀವನದಲ್ಲಿ ವಚನಗಳ ಮೌಲ್ಯವನ್ನು ಅಳವಡಿಸಿಕೊಳ್ಳುವುದರ ಮುಖಾಂತರ ಜೀವನದ ಸಾರ್ಥಕತೆಯನ್ನು ಅನುಭವಿಸಬೇಕೆಂದು ಸಾದರ ಪಡಿಸಿದರು.
ಬಸವತತ್ವ ಪ್ರಚಾರಕರಾದ ಬಸವಯೋಗೇಶ ಅವರು ಶರಣರ ತತ್ವ, ಆದರ್ಶಗಳನ್ನು, ಅವರ ಚಿಂತನೆಗಳನ್ನು ಸರಳ ವಚನಗಳ ಮೂಲಕ ಅಭಿವ್ಯಕ್ತಿಸಿದರು.

ಕೊನೆಯಲ್ಲಿ ಬಂದಂತಹ ಶರಣ ಬಂಧುಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಹೊರಳವಾಡಿ ಮಹೇಶ, ಸುತ್ತೂರು ಶಿವಣ್ಣ, ಶಿಕ್ಷಕರುಗಳಾದ ಮಹದೇವಪ್ಪ, ನೀಲಕಂಠಪ್ಪ, ವಿಜಯಕುಮಾರ, ನಂದೀಶ್ವರ, ಮಹೇಂದ್ರ, ಪೊಲೀಸ್ ಗಿರೀಶ್, ಟೈಲರ್ ಕುಮಾರ, ಹದಿನಾರು ಮಹೇಶ, ಮಳವಳ್ಳಿ ರಾಜೇಶ, ಬೋಗಯ್ಯನಹುಂಡಿ ಬಸಪ್ಪ, ಬರಟಹಳ್ಳಿ ನಂಜುಂಡಸ್ವಾಮಿ, ಶಿವು ಕಬ್ಬಹಳ್ಳಿ, ರಾಜಶೇಖರ, ಮಂಜು ಮೊದಲಾದವರು ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
