ಹೊಳಲ್ಕೆರೆಯಲ್ಲಿ ಆಗಸ್ಟ್ 6, 7 ಶರಣತತ್ವ ಶಿಕ್ಷಣ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಹೊಳಲ್ಕೆರೆ:

ಲಿಂಗೈಕ್ಯ ಪೂಜ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೩೨ನೇ ಸ್ಮರಣೋತ್ಸವ ನಿಮಿತ್ತ ಬರುವ ಆಗಸ್ಟ್ ೬ ಮತ್ತು ೭ರಂದು ಇಲ್ಲಿನ ಒಂಟಿಕಂಬದ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರರ ಲೀಲಾವಿಶ್ರಾಂತಿ ತಾಣದಲ್ಲಿ ೨ ದಿನಗಳ ಕಾಲ ಅನುಭಾವಿಗಳಿಂದ ಶರಣತತ್ವ ಶಿಕ್ಷಣ ಶಿಬಿರವನ್ನು ಆಡಳಿತ ಮಂಡಳಿಯ ಮಾರ್ಗದರ್ಶನ, ಪೂಜ್ಯ ಬಸವಕುಮಾರ ಸ್ವಾಮೀಜಿ ಹಾಗೂ  ಇಲ್ಲಿನ ಪೂಜ್ಯ ತಿಪ್ಪೇರುದ್ರ ಸ್ವಾಮಿಗಳವರ ನೇತೃತ್ವದಲ್ಲಿ ನಡೆಯಲಿದೆ.

ಹಿರೇಹೊನ್ನಿಹಳ್ಳಿ ಬಸವ ಮಹಾಮನೆಯ ಚೆನ್ನಬಸವ ಸ್ವಾಮಿಗಳು ಇಷ್ಟಲಿಂಗದ ಮೂಲಕ ಶಿವಯೋಗ ಸಾಧನೆಯ ಮಹತ್ವ ತಿಳಿಸಿಕೊಡಲಿದ್ದಾರೆ.

ಪ್ರತಿದಿನ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ವಿವಿಧ ವಿಷಯ ಕುರಿತು ಅನುಭಾವಿಗಳಿಂದ ವಿಷಯ ಮಂಡನೆ ಇದೆ. ಅದರಲ್ಲಿ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ, ಲಿಂಗಾಯತ ಸ್ವತಂತ್ರ ಧರ್ಮ ಏಕೆ ಬೇಕು, ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ, ಗುರುಕರಣ ತ್ರಿವಿಧಿ, ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ, ಸೇರಿದಂತೆ ಅನುಭವ ಹಂಚಿಕೊಳ್ಳುವ, ಸಾಮೂಹಿಕ ಚರ್ಚೆ, ವಚನಗಾಯನ, ಪರಿಸರ ಜಾಗೃತಿ ಗೀತೆಗಳು ಈ ಸಂದರ್ಭದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ೮೪೩೧೧೨೦೩೧೨, ೯೯೪೫೮೭೩೯೨೬, ೭೦೯೦೨೭೧೭೩೦ ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *