ಅಣ್ಣಿಗೇರಿಯಲ್ಲಿ ಶರಣ ಶ್ರಾವಣ ಆಗಸ್ಟ್ 15 ರಿಂದ
ಅಣ್ಣಿಗೇರಿ:
ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮ ಆಗಸ್ಟ್ 15 ರಿಂದ ಸೆಪ್ಟಂಬರ್ 5 ರವರೆಗೆ ಪ್ರತಿ ಶನಿವಾರ ಶರಣ ಶ್ರಾವಣ ಅಂಗವಾಗಿ ಸ್ಥಳೀಯ ಬಸವ ಕೇಂದ್ರ ಹಾಗೂ ತಾಲೂಕಾ ಶರಣ ಸಾಹಿತ್ಯ ಪರಿಷತ್ ಯುವ ಘಟಕಗಳ ವತಿಯಿಂದ ಆಯೋಜಿಸಲಾಗಿದೆ.
ಪಟ್ಟಣದ ನಿಂಗಮ್ಮ ಹೂಗಾರ ಮಹಾವಿದ್ಯಾಲಯ ಹತ್ತಿರದ ತೋಂಟದಾರ್ಯ ಪ್ರಸಾದ ನಿಲಯದಲ್ಲಿ ಸಂಜೆ ಕಾರ್ಯಕ್ರಮ ಜರಗಲಿದೆ.
ಪ್ರತಿ ಶನಿವಾರ ಕ್ರಮವಾಗಿ ಡಾ. ಶಾಂತಾ ಲಕ್ಷ್ಮೇಶ್ವರ, ಸುಮಿತ್ರಾ ಹುಣಸಿಮರದ, ಬಿ.ಡಿ. ನಲವಡಿ ಹಾಗೂ ಎನ್.ಎಸ್. ಮೇಲ್ಮರಿ ಅವರುಗಳು ಉಪನ್ಯಾಸ ನೀಡಲಿದ್ದಾರೆ.
ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ಹುಬ್ಬಳ್ಳಿ, ವೀರೇಶ ಶಾನುಭೋಗರ ಹಾಗೂ ಲಿಂಗರಾಜ ಕುಲಕರ್ಣಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.
ಎಸ್.ವಿ. ಕುರಡಗಿ, ಡಾ ಸುಧಾ ಕೌಜಗೇರಿ, ಚನ್ನಬಸಮ್ಮ ಹಗೇದಕಟ್ಟಿಮಠ ಹಾಗೂ ಕಿರಣ ಬೂದಿಹಾಳ ಉಪಸ್ಥಿತರಿರುವರು. ಕಾರ್ಯಕ್ರಮದ ದಾಸೋಹ ಸೇವೆಯನ್ನು ಶೋಭಾ ಕುರಡಗಿ, ಕವಿತಾ ಬಿರಸಲ್, ಸಾವಿತ್ರಿ ಹರ್ಲಾಪೂರ, ಅನ್ನಪೂರ್ಣ ಆಕಳವಾಡಿ ಹಾಗೂ ಆದ್ಯಾ ದಿವಟರ ಅವರು ವಹಿಸಿಕೊಂಡಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
