ಶ್ರಾವಣ: ಹಾವೇರಿಯಲ್ಲಿ ಮಹಾಮನೆ ಕಾರ್ಯಕ್ರಮಕ್ಕೆ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ:

ನುಡಿದಂತೆ ನಡೆದ, ನಡೆದಂತೆ ನುಡಿದ, ನಡೆ-ನುಡಿ ಸಿದ್ಧಾಂತದವರು 12ನೇ ಶತಮಾನದ ಬಸವಾದಿ ಶಿವಶರಣರು ಎಂದು ಇಲ್ಲಿನ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಶಾರದಾ ಮಾತಾ ಸುಭಾಂಗಣದಲ್ಲಿ ಗುರುವಾರ ಬಸವ ಬಳಗದಿಂದ ಶ್ರಾವಣ ಮಾಸದ ಅಂಗವಾಗಿ ತಿಂಗಳ ಅವಧಿಗೆ ಹಮ್ಮಿಕೊಳ್ಳಲಾದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.

ಬಸವಾದಿ ಶರಣರು ಇಷ್ಟಲಿಂಗದ ಜೊತೆಗೆ, ಕಾಯಕ ದಾಸೋಹದ ಪರಿಕಲ್ಪನೆಯನ್ನು ಜನ ಸಾಮಾನ್ಯರಿಗೂ ನೀಡಿ ಅವರ ಬದುಕನ್ನು ಹಸನಗೊಳಿಸಿ ಉನ್ನತೀಕರಿಸಿದವರು. ಲಿಂಗ ಪೂಜೆಯಲ್ಲಿ ನಿಷ್ಠೆ, ದೃಢತೆ ಇದ್ದಾಗಲೇ ನಮ್ಮೆಲ್ಲರ ಸಂಕಲ್ಪ ಈಡೇರಲು ಸಾಧ್ಯ ಎಂದರು.

ಉಪನ್ಯಾಸ ನೀಡಿದ ಜನಪದ ವಿದ್ವಾಂಸ ಶಂಭು ಬಳಿಗಾರ ಮಾತನಾಡಿ, ಸಮಾಜದಲ್ಲಿನ ಸಜ್ಜನ ಸದ್ಭಾವದ ಮಹನೀಯರ ಕಾರಣದಿಂದ ಸಮಾಜ ಸುಂದರವಾಗಿದೆ. ಕೇವಲ ಬಾಹ್ಯವಾಗಿ ಜನರು ಮೆಚ್ಚಿಸುವುದಕ್ಕಿಂತ ಮನಮೆಚ್ಚುವಂತೆ ಆದರ್ಶವಾಗಿ ಬದುಕುವುದು ಅವಶ್ಯಕವಾಗಿದೆ. ಅಂತರಂಗ ಬಹಿರಂಗ ಒಂದಾದ ಶರಣರ ಬದುಕು ನಮಗೆಲ್ಲ ಆದರ್ಶಮಯವಾಗಿದೆ ಎಂದರು.

ದಾನಮ್ಮದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಮಾತನಾಡಿ, ಬಸವಾದಿ ಶಿವಶರಣರ ತತ್ವಾದಶ೯ಗಳು ನಿತ್ಯ ನೂತನವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವ ಬಳಗದ ಅಧ್ಯಕ್ಷ ವಿ.ಜಿ ಯಳಗೇರಿ ಮಾತನಾಡಿ, ವರ್ಗ, ಜಾತಿ, ಲಿಂಗತಾರತಮ್ಯವಿಲ್ಲದ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಜಾರಿಗೆ ತಂದವರು ಬಸವಾದಿ ಶಿವ ಶರಣರು. ಅವರು ಕೊಡಮಾಡಿದ ವಚನ ಸಾಹಿತ್ಯ ವಿಶ್ವದ ಅತ್ಯಂತ ಶ್ರೇಷ್ಠ ಸಾಹಿತ್ಯಗಳಲ್ಲಿ ಒಂದಾಗಿದೆ. ಅದನ್ನು ಮನೆ ಮನಕ್ಕೆ ಮುಟ್ಟಿಸುವ ಮಹತ್ತರ ಕಾರ್ಯವನ್ನು ಬಸವ ಬಳಗವು ಇಂತಹ ಕಾರ್ಯಕ್ರಮಗಳ ಮೂಲಕ ನಿರಂತರ ಮಾಡುತ್ತಲಿದೆ ಎಂದರು.

ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವಣ್ಣ ರೊಡ್ಡನವರ ಸ್ವಾಗತಿಸಿದರು. ಕಾವ್ಯಾ ಅಂಗಡಿ, ಚಂಪಾ ಹುಣಸಿಕಟ್ಟಿ, ಭಾಗ್ಯವತಿ ಕೊಡಬಾಳ ವಚನ ಪ್ರಾರ್ಥನೆ ಮಾಡಿದರು. ಎನ್.ಬಿ. ಕಾಳೆ ವಂದಿಸಿದರು. ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣನವರ, ಗಂಗಣ್ಣ ಮಾಸೂರ, ಶಿವಯೋಗಿ ಬೆನ್ನೂರ, ಜಗದೀಶ ಹತ್ತಿಕೋಟೆ, ವಿಶ್ವನಾಥ ಅಂಗಡಿ, ಚೇತನ ಯಳಗೇರಿ, ಶಿವಾನಂದ ಹೊಸಮನಿ, ಕೆ.ಎಂ. ಬಿಜಾಪುರ, ಬಸವರಾಜ ಕೋರಿ, ಬಸವರಾಜ ಅಕ್ಕಿ, ವೈ. ಬಿ ಆಲದಕಟ್ಟಿ, ಚಂದ್ರಶೇಖರ ಮಾಳಗಿ, ಕೆ.ಸಿ. ಪಾವಲಿ, ಹನುಮಂತಗೌಡ ಗೊಲ್ಲರ, ಮಂಜುನಾಥ ಅಂಗಡಿ, ಎಸ್.ಎಸ್. ಸೋಮನಾಳ, ಬಸಲಿಂಗಪ್ಪ, ಹನುಮಂತಪ್ಪ ಮಡಿವಾಳರ, ಚರಣರಾಜ ರೊಡ್ಡನವರ, ಕಿರಣ ಕೊಳ್ಳಿ, ದೇವರಾಜ ಮಡಿವಾಳ, ಬಸವರಾಜ ಬೆಲ್ಲದ, ಸಿ.ಬಿ. ಇಟಗಿ, ಶಿವರಾಜ ಕಾಯಕದ, ಶಿವಯೋಗಿ ಅಂಗಡಿ, ನಾಗರಾಜ ವಿಭೂತಿ, ನಾಗೇಂದ್ರಪ್ಪ ಮಂಡಕ್ಕಿ, ಪ್ರಭುಗೌಡ ಬಸನಗೌಡ, ಹಾವೇರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿದ್ದನಗೌಡ, ಮಾಲತೇಶ ಕರೆಮಣ್ಣವರ, ಪುಟ್ಟಪ್ಪ, ಶಾಂತಲಾ ಅಕ್ಕಿ, ರುದ್ರಾಕ್ಷಿ ಬೆಂಬಳಗಿ, ಕವಿತಾ ಯಳಗೇರಿ, ವಿಮಲಾ ಮರ್ತೂರ, ಪ್ರೇಮಕ್ಕ ಹರವಿಬೃಂಗಿಮಠ, ಕಮಲಾ ರೊಡ್ಡನವರ, ಶಾಂತಕ್ಕ ಅಂಗಡಿ, ಅಕ್ಕಮಹಾದೇವಿ ಹಾನಗಲ್ಲ, ಅನೇಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *