ನಂಜನಗೂಡಿನಲ್ಲಿ ಸಾವಿರ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡುವ ಸಂಕಲ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಇಲ್ಲಿಯವರೆಗೆ 130 ಜನರಿಗೆ ದೀಕ್ಷೆ ನೀಡಲಾಗಿದೆ

ನಂಜನಗೂಡು:

ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಜನಸಾಮಾನ್ಯರಲ್ಲಿ ಮತ್ತಷ್ಟು ಬಲಪಡಿಸುವ ಉದ್ಧೇಶದಿಂದ ಈಚೆಗೆ ಬಿ.ಎಂ. ಲೇಔಟ್‌ನಲ್ಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುಡುಗೂರು ಮಠದ ಅಧ್ಯಕ್ಷರಾದ ಪೂಜ್ಯ ಉದ್ಧಾನ ಸ್ವಾಮೀಜಿಯವರು ಇಷ್ಟಲಿಂಗ ದೀಕ್ಷೆಯನ್ನು ನೆರವೇರಿಸಿ, ಇಷ್ಟಲಿಂಗದ ಮಹತ್ವ ಹಾಗೂ ಶರಣ ಪರಂಪರೆಯ ಕುರಿತು ಮಾರ್ಗದರ್ಶನ ಮಾಡಿದರು.

“ಕಾಯಕವೇ ಕೈಲಾಸ”ಎಂಬ ಬಸವಣ್ಣನವರ ಚಿಂತನೆ ದುಡಿಮೆಗೆ ಗೌರವವನ್ನು ನೀಡುತ್ತದೆ. ಯಾವುದೇ ಕೆಲಸ ಮೇಲು-ಕೀಳು ಎಂಬ ಭೇದವಿಲ್ಲದೆ ಪ್ರಾಮಾಣಿಕವಾಗಿ ದುಡಿಯುವುದು ಮತ್ತು ಗಳಿಸಿದ ಸಂಪತ್ತಿನಲ್ಲಿ ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವುದು ಬಸವ ತತ್ವದ ಪ್ರಮುಖ ಸಂದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶರಣ ಚಿಂತಕರಾದ ಕಾ.ಸು. ನಂಜಪ್ಪ ಅವರು ಉಪನ್ಯಾಸ ನೀಡಿ, ಬಸವಣ್ಣನವರ ಚಿಂತನೆಗಳು ಇಂದಿನ ಸಮಾಜಕ್ಕೆ ಎಷ್ಟು ಪ್ರಸ್ತುತ ಎಂಬುದನ್ನು ವಿವರಿಸುತ್ತ, ಬಸವಣ್ಣನವರ ಶರಣ ಪರಂಪರೆಯಲ್ಲಿ ಇಷ್ಟಲಿಂಗವು ಕೇವಲ ಧಾರ್ಮಿಕ ಸಂಕೇತವಲ್ಲ; ಅದು ವ್ಯಕ್ತಿ ಮತ್ತು ಪರಮಾತ್ಮನ ನಡುವಿನ ನೇರ ಸಂಬಂಧದ ಪ್ರತೀಕವಾಗಿದೆ.

ವ್ಯಕ್ತಿಯ ಅಂತಃಕರಣದ ಶುದ್ಧತೆ, ಸತ್ಯ, ಕಾಯಕ ಮತ್ತು ದಾಸೋಹದ ಮೂಲಕ ಬದುಕನ್ನು ಪವಿತ್ರಗೊಳಿಸುವುದೇ ಶರಣ ತತ್ವದ ಮುಖ್ಯ ಆಶಯವಾಗಿದೆ ಎಂದರು.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ವಿಶ್ವ ಬಸವಸೇನೆ ಅಧ್ಯಕ್ಷರಾದ ಬಸವಯೋಗೇಶ, ಚೌಹಳ್ಳಿ ನಿಂಗರಾಜಪ್ಪ, ಹಂಗಳಾಪುರ ಸುರೇಶ, ಅಕ್ಕಮಹಾದೇವಿ ವಿದ್ಯಾರ್ಥಿನಿಲಯದ ಬಿ. ಚನ್ನಪ್ಪ, ಪತ್ರಕರ್ತ ರಾ. ಬಾಬು, ಆಲೂರು ಬಾಬು, ಉಪನ್ಯಾಸಕ ಆರ್. ಮಂಜುನಾಥ ಸೇರಿದಂತೆ ಹಲವು ಗಣ್ಯರು ಹಾಗೂ ಶರಣರು ಭಾಗವಹಿಸಿದ್ದರು.

ಅದೇ ರೀತಿ ಬೋರಮ್ಮ, ಜ್ಯೋತಿ, ಕವಿತಾ, ಅನಿತಾ ಸೇರಿದಂತೆ ಅನೇಕ ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ದೀಕ್ಷಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಮಾಜದ ಮುಂದಿನ ಪೀಳಿಗೆಯಾದ ಮಕ್ಕಳಿಗೆ ಬಸವತತ್ವದ ಅರಿವು ಮೂಡಿಸುವ ಉದ್ದೇಶದಿಂದ ಅಕ್ಕಮಹಾದೇವಿ ವಿದ್ಯಾರ್ಥಿನಿಲಯದ ಮಕ್ಕಳು, ಅನುರಾಗ ಮಕ್ಕಳ ಮನೆಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇಷ್ಟಲಿಂಗ ದೀಕ್ಷೆಯನ್ನು ಸ್ವೀಕರಿಸಿದರು.

ವಿನಯ್ ಅವರು ತಮ್ಮ ಇಬ್ಬರು ಅವಳಿ ಹೆಣ್ಣು ಮಕ್ಕಳೊಂದಿಗೆ ದೀಕ್ಷೆ ಪಡೆದುಕೊಂಡರು. ಒಟ್ಟು 16 ಮಂದಿ ಈ ಸಂದರ್ಭದಲ್ಲಿ ಹೊಸದಾಗಿ ಇಷ್ಟಲಿಂಗ ದೀಕ್ಷೆಯನ್ನು ಸ್ವೀಕರಿಸಿದರು.

ಈ ಕಾರ್ಯಕ್ರಮದ ಮೂಲಕ ಇದುವರೆಗೆ ಸುಮಾರು 130 ಶರಣರಿಗೆ ಇಷ್ಟಲಿಂಗ ದೀಕ್ಷೆ ಕೊಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಒಟ್ಟು ಸಾವಿರ ಜನರಿಗೆ ಇಷ್ಟಲಿಂಗ ದೀಕ್ಷೆ ಕೊಡಿಸುವ ಮಹತ್ವಾಕಾಂಕ್ಷೆಯ ಉದ್ಧೇಶವನ್ನು ಆಯೋಜಕರು ಹೊಂದಿದ್ದಾರೆ.

ಕಾರ್ಯಕ್ರಮದ ಆಯೋಜಕರಾದ ರೂಪಾ ಮತ್ತು ಮಂಜುನಾಥ, ಪ್ರೊ. ಅವ್ವಾಸ್, ಬಸವ ಆಯಿಲ್ಸ್, ನಂಜನಗೂಡು ಅವರು ಬಸವಣ್ಣನವರ ವಿಚಾರಧಾರೆ ಹಾಗೂ ಇಷ್ಟಲಿಂಗದ ಮಹತ್ವವನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಸುಮಾರು 130 ಶರಣರಿಗೆ ಇಷ್ಟಲಿಂಗ ದೀಕ್ಷೆ ಕೊಡಿಸಿರುವುದು ಈ ಪ್ರಯತ್ನದ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಸಾವಿರ ಜನರಿಗೆ ಇಷ್ಟಲಿಂಗ ದೀಕ್ಷೆ ಕೊಡಿಸುವ ಸಂಕಲ್ಪ ಹೊಂದಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment

Leave a Reply

Your email address will not be published. Required fields are marked *