ಬಸವ ಗೀತಾ ಮಾತಾಜಿಯವರ ‘ಬಸವ ದರ್ಶನ’ ಪ್ರವಚನಕ್ಕೆ ಚಾಲನೆ

ಡಿ.ಪಿ. ನಿವೇದಿತಾ
ಡಿ.ಪಿ. ನಿವೇದಿತಾ

ಹುನಗುಂದ:

ತಾಲ್ಲೂಕಿನ ಸೂಳಿಬಾವಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ‘ಬಸವ ದರ್ಶನ’ ಪ್ರವಚನ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಆಗಸ್ಟ್ 15ರಿಂದ ಸೆಪ್ಟೆಂಬರ್ 14ರವರೆಗೆ ನಡೆಯಲಿರುವ ಪ್ರವಚನವನ್ನು ನಾಗನೂರಿನ ಗುರುಬಸವ ಮಠದ ಪೂಜ್ಯ ಬಸವಗೀತಾ ಮಾತಾಜಿ ನಡೆಸಿಕೊಡಲಿದ್ದಾರೆ.

ಶನಿವಾರ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನೀಜಯ್ಯನಮಠ ಮಾತನಾಡಿ, ಈ ಬಸವ ದರ್ಶನ ಪ್ರವಚನ ಕೇಳಲು ಎಲ್ಲರೂ ಬರಬೇಕು. ಇಂತಹ ಸದಾವಕಾಶ ತಪ್ಪಿಸಿಕೊಳ್ಳಬಾರದು ಎಂದರು.

ಪ್ರವಚನಕಾರರಾದ ಬಸವಗೀತಾ ತಾಯಿಯವರು ಮಾತನಾಡಿ, ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ನಾವೆಲ್ಲಾ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಆದರೆ ಇದು ಕೇವಲ ಒಂದು ದಿನದ ಮಟ್ಟಿಗೆ ಸೀಮಿತವಾಗಬಾರದು ಎಂದರು.

ಸಾನಿಧ್ಯ ವಹಿಸಿದ್ದ ಇಲಕಲ್ಲ ವಿಜಯಮಹಾಂತ ಮಠದ ಗುರುಮಹಾಂತಪ್ಪಗಳು ಮಾತನಾಡಿ, ನಮ್ಮ ದೇಶದ ಧೀಮಂತ ನಾಯಕರ ಬಗ್ಗೆ ಬೇರೆ ಬೇರೆ ದೇಶಗಳಲ್ಲಿ ಅಭಿಮಾನವಿದೆ. ಆದರೆ ನಮಗಿನ್ನೂ ಅದರ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು ಖೇದದ ಸಂಗತಿ ಎಂದರು.

ವೇದಿಕೆ ಮೇಲೆ ನಾಗನೂರಿನ ಬಸವಪ್ರಕಾಶ ಸ್ವಾಮೀಜಿ, ಜಮಖಂಡಿಯ ಬಸವರಾಜ ದೇವರು, ಗುಳೇದಗುಡ್ಡದ ಅಮರೇಶ್ವರ ಮಠದ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರು. ಎಸ್. ಆರ್. ಎನ್. ಈ. ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಆರ್. ನವಲಿಹಿರೇಮಠ ಬಸವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಕಲಬುರ್ಗಿ, ಶ್ರೀ ವಿಜಯಮಹಾಂತೇಶ್ವರ ಶಾಖಾಮಠ, ಸೂಳಿಭಾವಿ ಅಧ್ಯಕ್ಷರಾದ ಮಹಾಂತಪ್ಪ ಭದ್ರಣ್ಣವರ ಮತ್ತಿತರರು ಇದ್ದರು. ಬಸವಭಕ್ತರು ಸೇರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಪ್ರಚಾರಕರು, ಗುರು ಬಸವ ಮಠ, ನಾಗನೂರು