‘ಗೌರಿಗೆ ನ್ಯಾಯ ಸಿಗುವುದನ್ನು ನೋಡುವ ಮೊದಲೇ ನಿಧನರಾದ ನಮ್ಮ ತಾಯಿ ಇಂದಿರಾ’
ಬೆಂಗಳೂರು
ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಶನಿವಾರ ಬೆಳಿಗ್ಗೆ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು.
ಗೌರಿ ಲಂಕೇಶ್ ಅವರ ಸಮಾಧಿಗೆ ಪುಷ್ಪನಮನ ಅರ್ಪಿಸಿ, ಅವರ ಹೋರಾಟವನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಿತಾ ಲಂಕೇಶ್ ಮಾತನಾಡಿ, ಸೆಪ್ಟೆಂಬರ್ 5, 2017 ರಂದು ಗೌರಿ ಹತ್ಯೆಯಾಗಿ ಒಂಬತ್ತು ವರ್ಷಗಳಾಗಿವೆ. ನಮ್ಮ ತಾಯಿ ಇಂದಿರಾ ಲಂಕೇಶ್ ಅವರು ಗೌರಿಗೆ ನ್ಯಾಯ ಸಿಗುವುದನ್ನು ನೋಡುವ ಮುನ್ನವೇ ಈ ವರ್ಷದ ಆರಂಭದಲ್ಲಿ ನಿಧನರಾದರು ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಹೋರಾಟಗಾರರಾಗಿದ್ದ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್ ಅವರನ್ನು ಮರೆಯಲು ಸಾಧ್ಯವಿಲ್ಲ. ಈ ಮೂರು ಜನರು ಹೋರಾಟಗಾರರಿಗೆ ದೊಡ್ಡ ಶಕ್ತಿಯಾಗಿದ್ದರು. ನಾವು ನಿಮ್ಮ ದಾರಿಯನ್ನು ಬಿಟ್ಟಿಲ್ಲ, ನಿಮ್ಮ ಹೋರಾಟವನ್ನು ಮುಂದುವರಿಸಿದ್ದೇವೆ ಎಂದು ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಹೇಳಿದರು.
ಗೌರಿ ನಂತರದ ಕಾಲಘಟ್ಟದಲ್ಲಿ ಸಿಎಎ-ಎನ್ಆರ್ಸಿ ವಿರುದ್ಧ ನಡೆದ ಹೋರಾಟ, ರೈತ
ಹೋರಾಟ, 2023-24ರ ಚುನಾವಣಾ ಹೋರಾಟ, ಜೆನ್ಝೀ ಹೋರಾಟಗಳು ನಡೆದಿವೆ. ಗೌರಿ ಇದ್ದಿದ್ದರೆ ಈಗ ನಡೆಯುತ್ತಿರುವ ಜನವಿರೋಧಿ ಎಸ್ಐಆರ್ ವಿರುದ್ಧದ ಹೋರಾಟದಲ್ಲೂ ಭಾಗವಹಿಸುತ್ತಿದ್ದರು, ಎಂದರು.


ಗೌರಿ ಅವರ ಸಹೋದರಿ ಕವಿತಾ ಲಂಕೇಶ್, ನೂರ್ ಶ್ರೀಧರ್, ವಿ.ಎಸ್ ಶ್ರೀಧರ್, ಕೆ.ಎಲ್ ಅಶೋಕ್, ಶಿವಸುಂಧರ್, ಮಲ್ಲಿಗೆ ಸಿರಿಮನೆ, ಸುನಿಲ್ ಶಿರಸಂಗಿ, ರಾಜಲಕ್ಷ್ಮಿ ಅಂಕಲಗಿ, ಸಿರಿಗೌರಿ, ಕುಮಾರ್ ಸಮತಳ, ಹರ್ಷಕುಮಾರ್ ಕುಗ್ವೆ, ವಿಜಯ್, ಸರೋವರ್ ಬೆಂಕಿಕೆರೆ, ಚಂದ್ರು ತರಹುಣಸೆ, ಲಕ್ಷ್ಮಣ್ ಮಂಡಲಗೇರಾ, ಮನೋಜ್ ಆಝಾದ್, ಮಮತಾ ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಗೌರಿ ಲಂಕೇಶ್ ಅವರ ಒಡನಾಡಿಗಳು ಪಾಲ್ಗೊಂಡಿದ್ದರು.
ಚಿತ್ರ ಕೃಪೆ: ನಾನು ಗೌರಿ

ಗೌರಿಯ ಕಾರ್ಯ ಮಹತ್ತರ ಸಾಧನೆ ಮಾಡಿದ್ದಾರೆ. ಜೈ ಬಸವ